ಬಿಹಾರ:ಪತ್ನಿಯ ಕೊಲೆ ಕೇಸ್​ನಲ್ಲಿ ಗಂಡ ಜೈಲು ಶಿಕ್ಷೆ ಅನುಭವಿಸುತ್ತಿದ್ದರೆ, ಇತ್ತ ಮಗಳು ಬಾರದ ಲೋಕಕ್ಕೆ ಹೋಗಿಬಿಟ್ಟಳು ಎಂದು ಕುಟುಂಬಸ್ಥರು ನೋವಿನಲ್ಲೇ ದಿನದೂಡುತ್ತಿದ್ದರು. ಇದ್ದಕ್ಕಿದ್ದಂತೆ ಆತನ ಪತ್ನಿ ತನ್ನ ಪ್ರಿಯಕರನೊಂದಿಗೆ ಪ್ರತ್ಯಕ್ಷವಾಗಿದ್ದು, ಜನತೆ ಮಾತ್ರವಲ್ಲ, ಆಕೆಯ ಕುಟುಂಬಸ್ಥರೂ ಬೆಚ್ಚಿಬಿದ್ದಿದ್ದಾರೆ.
ಇದ್ಯಾವುದೋ ಸಿನಿಮಾ ಕಥೆಯಲ್ಲ. ಬಿಹಾರದ ಮೋತಿಹಾರಿ ಎಂಬಲ್ಲಿ ಬೆಳಕಿಗೆ ಬಂದ ನೈಜ ಘಟನೆ. ಕೇಸರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೀಪುರ ಗ್ರಾಮದ ನಿವಾಸಿ ದಿನೇಶ್ ರಾಮ್ ಎಂಬಾತ 2014ರಲ್ಲಿ ಶಾಂತಿ ದೇವಿ ಎಂಬಾಕೆಯನ್ನು ಮದುವೆಯಾಗಿದ್ದ. ದಂಪತಿ ಇಬ್ಬರೂ ಆರಂಭದಲ್ಲಿ ಚೆನ್ನಾಗಿಯೇ ಇದ್ದರು. ಕೆಲ ತಿಂಗಳ ಹಿಂದೆ ಶಾಂತಿದೇವಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಪತ್ನಿಗಾಗಿ ದಿನೇಶ್​ ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಅಳಿಯನ ಮೇಲೆ ಅನುಮಾನಗೊಂಡ ಶಾಂತಿದೇವಿಯ ತಂದೆ ಯೋಗೇಂದ್ರ, ವರದಕ್ಷಿಣೆ ಕಿರುಕುಳ ಕೊಟ್ಟು ನನ್ನ ಮಗಳನ್ನು ಅಳಿಯನೇ ಕೊಲೆ ಮಾಡಿ ಶವ ಎಲ್ಲಿಯೋ ಬಿಸಾಡಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೊಲೆ ಆರೋಪದ ಮೇರೆಗೆ ದಿನೇಶ್​ನನ್ನು ಬಂಧಿಸಿದ ಪೊಲೀಸರು ಜೈಲಿಗೆ ಕಳಿಸಿದ್ದರು. ತಾನು ಏನು ತಪ್ಪು ಮಾಡಿಲ್ಲ. ನನ್ನ ಪತ್ನಿಗೆ ಏನಾಯ್ತೆಂದೂ ಗೊತ್ತಿಲ್ಲ. ದೇವ್ರೇ ನೀನೆ ಬಂದು ನನ್ನನ್ನು ಕಾಪಾಡು. ಸುಳ್ಳು ಆರೋಪದಲ್ಲಿ ಸಿಕ್ಕಿ ನಲುಗುತ್ತಿದ್ದೇನೆ ಎಂದು ಜೈಲಿನಲ್ಲೇ ದಿನೇಶ್​ ಸುರಿಸುತ್ತಿದ್ದ ಕಣ್ಣೀರಿಗೆ ಆ ದೇವರು ಮರುಗಿರಬೇಕು ಅನ್ನಿಸುತ್ತೆ. ಈ ಪ್ರಕರಣದ ಮೇಲೆ ಅನುಮಾನಗೊಂಡ ಎಸ್‌ಎಚ್‌ಒ ಇನ್​ಸ್ಪೆಕ್ಟರ್​ ಶೈಲೇಂದ್ರ ಸಿಂಗ್ ತನಿಖೆ ಮುಂದುವರಿಸಿದ್ದು, ಎಲ್ಲರೂ ಸತ್ತಿದ್ದಾಳೆಂದು ನಂಬಿದ್ದ ಮಹಿಳೆ ಪಂಜಾಬ್‌ನ ಜಲಂಧರ್‌ನಲ್ಲಿ ತನ್ನ ಪ್ರಿಯಕರನೊಂದಿಗೆ ವಾಸಿಸುತ್ತಿರುವುದನ್ನ ಪತ್ತೆ ಮಾಡಿದ್ದಾರೆ. ಶೈಲೇಂದ್ರ ಸಿಂಗ್ ರೂಪದಲ್ಲಿ ಬಂದ ದೇವರು, ದಿನೇಶ್​ಗೆ ಕೊನೆಗೂ ನ್ಯಾಯ ಸಿಗುವಂತೆ ಮಾಡಿದ್ದಾರೆ.
ಪ್ರಿಯಕರನೊಂದಿಗೆ ಓಡಿಹೋಗಿದ್ದ ಮಹಿಳೆಯನ್ನು ಮೋತಿಹಾರಿಗೆ ಪೊಲೀಸರು ಕರೆತಂದಿದ್ದು, ಸುಳ್ಳು ಆರೋಪ ಮಾಡಿ ನಿರಪರಾಧಿಗೆ ಶಿಕ್ಷೆ ಆಗುವಂತೆ ಮಾಡಿದ್ದವರನ್ನ ವಶಕ್ಕೆ ಪಡೆದಿದ್ದಾರೆ.
ಮದ್ವೆಯಾದ 11ನೇ ದಿನಕ್ಕೆ ವರ ಸಾವು, ವಧುವಿನ ಸ್ಥಿತಿ ಚಿಂತಾಜನಕ! ಕುಟುಂಬಸ್ಥರ ಗೋಳಾಟ ನೋಡಲಾಗ್ತಿಲ್ಲ

ಇಡೀ ರಾತ್ರಿ ಗಂಡನ ಶವದ ಪಕ್ಕ ಮಲಗಿ ಹೈಡ್ರಾಮ… ಒಳ ಉಡುಪಲ್ಲಿ ಪತ್ನಿ ಬಚ್ಚಿಟ್ಟುಕೊಂಡ ಮಾಂಗಲ್ಯದ ಹಿಂದಿತ್ತು ಸ್ಫೋಟಕ ರಹಸ್ಯ

PSI ಎಕ್ಸಾಂ ಅಕ್ರಮ: ನನಗೆ ಸಚಿವರ ಸಂಬಂಧಿ ಮತ್ತು ಡಿಕೆಶಿ ಪರಿಚಯವಿದೆ… ಎನ್ನುತ್ತಲೇ ಬೇಸರ ವ್ಯಕ್ತಪಡಿಸಿದ ದರ್ಶನ್​ ಗೌಡನ ತಂದೆ

ನಿನ್ನಿಂದ ಅಪ್ಪ ಕೂಡ ಜೈಲಿಗೆ ಹೋಗುವಂತಾಯ್ತು.. ಎಲ್ಲವನ್ನೂ ಟಿವಿಯಲ್ಲಿ ನೋಡಿದೆ… ಮಗನ ಮಾತಿಗೆ ಕಣ್ಣೀರಿಟ್ಟ ದಿವ್ಯಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 2 =
Remember me
