ಲಖನೌ:ಗಂಡ ಈದ್​ ಹಬ್ಬದ ಸಂಭ್ರಮಕ್ಕೆಂದು ಸಂಬಂಧಿಕರ ಮನೆಗೆ ತೆರಳಿದ್ದಾಗ ಹೆಂಡತಿ ತನ್ನ ಏಳು ವರ್ಷದ ಮಗನೊಂದಿಗೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ರಿಹಾನಾ (25) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಈಕೆ ಶುಕ್ರವಾರ ಸಂಜೆ ಫತೇಗಂಜ್​ನಲ್ಲಿ ತನ್ನ ಮಗನೊಂದಿಗೆ ರೈಲಿಗೆ ಅಡ್ಡವಾಗಿ ನಿಂತು ಪ್ರಾಣ ಬಿಟ್ಟಿದ್ದಾಳೆ. ದೆಹಲಿಯಿಂದ ಬರುವ ಶ್ರಮಜೀವಿ ಎಕ್ಸ್​ಪ್ರೆಸ್​ ರೈಲಿಗೆ ಮಹಿಳೆ ಬಲಿಯಾಗಿರುವುದಾಗಿ ತಿಳಿಸಲಾಗಿದೆ. ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿರುವುದಾಗಿ ಸ್ಟೇಷನ್​ ಹೌಸ್ ಆಫೀಸರ್​ ವಿಜಯ್​ ರಾಣಾ ತಿಳಿಸಿದ್ದಾರೆ.
ರಿಹಾನಾ ಪತಿ ಸಿರ್ಜಾ ಶುಕ್ರವಾರದಂದು ಈದ್​ ಹಬ್ಬದ ಪ್ರಯುಕ್ತ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದನಂತೆ. ಆತ ವಾಪಸು ಬರುವಷ್ಟರಲ್ಲಿ ಹೆಂಡತಿ ಮಗ ಶವವಾಗಿದ್ದಾಗಿ ಆತ ತಿಳಿಸಿದ್ದಾನೆ. ಹೆಂಡತಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಅದೇ ಕಾರಣಕ್ಕೆ ಈ ದುರ್ಘಟನೆ ಆಗಿರಬಹುದು ಎಂದು ಆತ ಹೇಳಿದ್ದಾನೆ. (ಏಜೆನ್ಸೀಸ್)
ಮಮತಾ ಬ್ಯಾನರ್ಜಿ ಕುಟುಂಬವನ್ನೂ ಬಿಡದ ಕರೊನಾ! ದೀದಿ ತಮ್ಮ ಕರೊನಾಗೆ ಬಲಿ

ಕೊಡಲಿ ಹಿಡಿದು ಮದ್ವೆ ಮಂಟಪಕ್ಕೆ ನುಗ್ಗಿದ ಒನ್​ ಸೈಡ್​ ಲವರ್​: ಮುಂದಾಗಿದ್ದು ಹ್ಯಾಪಿ ಎಂಡಿಂಗ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 16 =
Remember me
