ರಾಯ್​ಪುರ:ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹಿತರಿರುತ್ತಾರೆ. ಆದರೆ ಕೆಲವು ಸ್ನೇಹಿತರು ಪ್ರಾಣ ತೆಗೆಯಲೆಂದೇ ಸ್ನೇಹ ಮಾಡುತ್ತಾರೆ. ಪರ ಪುರುಷರಿಗೆ ಸ್ನೇಹಿತೆಯನ್ನು ಮಾರಾಟ ಮಾಡಲೆಂದೇ ಸ್ನೇಹ ಬೆಳೆಸಿ, ಉದ್ದೇಶ ಸಾಧಿಸಿಕೊಂಡ ಘಟನೆ ಚತ್ತೀಸ್​ಗಢದಲ್ಲಿ ನಡೆದಿದೆ.
ಇದನ್ನೂ ಓದಿ:ಟ್ರೋಫಿ ಮೇಲೆ ಮೂತ್ರ ಮಾಡಿ ಅವಮಾನಿಸಿದ್ದ ವ್ಯಕ್ತಿಗೇ ಸಿಕ್ಕಿತು ಗ್ರ್ಯಾಮಿ ಅವಾರ್ಡ್ಸ್​​ಗೆ ನಾಮಿನೇಶನ್​ ಭಾಗ್ಯ
ಸಜದಾ ಹೆಸರಿನ ಗೆಳತಿ ತನ್ನ ವಿವಾಹಿತ ಸ್ನೇಹಿತೆಯೊಬ್ಬಳನ್ನು ಟೀ ಪಾರ್ಟಿಗೆ ಕರೆದಿದ್ದಾಳೆ. ಆಕೆಯ ಆಹ್ವಾನಕ್ಕೆ ಬೆಲೆ ಕೊಟ್ಟ ಗೆಳತಿ 8 ವರ್ಷದ ಮಗನೊಂದಿಗೆ ಸಜದಾ ಮನೆಗೆ ಬಂದಿದ್ದಾಳೆ. ಅವಳು ಕೊಟ್ಟ ಟೀ ಕುಡಿದಿದ್ದಾಳೆ. ಆದರೆ ಟೀನಲ್ಲಿ ಡ್ರಗ್ಸ್​ ಸೇರಿಸಿದ್ದ ಹಿನ್ನೆಲೆಯಲ್ಲಿ ಟೀ ಕುಡಿಯುತ್ತಿದ್ದಂತೆ ಆಕೆ ಮತ್ತು ಆಕೆಯ ಮಗ ಎಚ್ಚರ ತಪ್ಪಿ ಬಿದ್ದಿದ್ದಾರೆ.
ಎಚ್ಚರ ತಪ್ಪಿ ಬಿದ್ದಿದ್ದ ಮಹಿಳೆ ಕಣ್ಣು ತೆರೆದು ನೋಡಿದಾಗ ಆಕೆ ಮೂವರು ಮಹಿಳೆಯರೊಂದಿಗೆ ಕಾರಿನಲ್ಲಿದ್ದಳು. ನನ್ನನ್ನೇಕೆ ಕಾರಿನಲ್ಲಿ ಕರೆದೊಯ್ಯುತ್ತಿದ್ದೀರಿ, ನನ್ನನ್ನು ಬಿಡಿ ಎಂದು ಕೇಳಿದ್ದಕ್ಕೆ, ಮಗನ ತಲೆಗೆ ಪಿಸ್ತೂಲು ಇಟ್ಟು ಸುಮ್ಮನೆ ಕೂರುವಂತೆ ಬೆದರಿಸಿದ್ದಾರೆ. ರಾಯ್​ಪುರ ವಿಮಾನ ನಿಲ್ದಾಣಕ್ಕೆ ಆಕೆಯನ್ನು ಕರೆದೊಯ್ದು ಅಲ್ಲಿಂದ ದೆಹಲಿಗೆ ವಿಮಾನದಲ್ಲಿ ಕರೆದೊಯ್ದಿದ್ದಾರೆ. ದೆಹಲಿಯಿಂದ ಆಕೆಯನ್ನು ಹರಿಯಾಣಕ್ಕೆ ಕರೆದುಕೊಂಡು ಹೋಗಲಾಗಿದೆ.
ಇದನ್ನೂ ಓದಿ:ಮನೆಯವರನ್ನು ಕೊಲೆ ಮಾಡುವುದಾಗಿ ಹೆದರಿಸಿ ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರವೆಸಗಿದ ಯುವಕ
ಹರಿಯಾಣದಲ್ಲಿ ಸಜದಾ ಸ್ನೇಹಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಮಗನನ್ನು ಕೊಲೆ ಮಾಡುವ ಬೆದರಿಕೆ ನೀಡಿ ಅತ್ಯಾಚಾರ ಮಾಡಲಾಗಿದೆ. ಅದಾದ ನಂತರ ತಾಯಿ ಮತ್ತು ಮಗನನ್ನು ಸುರೇಶ್​ ಹೆಸರಿನ ವ್ಯಕ್ತಿಗೆ 1 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಸುರೇಶ್​ ಕೊಂಡುಕೊಂಡ ನಂತರ ಆಕೆ ಅವನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆ ಕಾರಣ ಆತ ಅವಳನ್ನು ವಾಪಾಸು ತಂದು ಸಜದಾ ಗೆಳೆಯನ ಬಳಿ ಬಿಟ್ಟಿದ್ದಾನೆ. ನಂತರ ಆತ ತಾಯಿ ಮಗನನ್ನು ರಾಜೇಶ್​ ಹೆಸರಿನ ವ್ಯಕ್ತಿಗೆ 1.4 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾನೆ.
ರಾಜೇಶ್​ಗೆ ಮಾರಾಟವಾದ ಮಹಿಳೆ ಆತನ ಬಳಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾಳೆ. ನಡೆದ ಘಟನೆಯನ್ನೆಲ್ಲ ವಿವರಿಸಿದ ನಂತರ ಆಕೆಯ ಸಹಾಯಕ್ಕೆ ರಾಜೇಶ್​ ಮುಂದಾಗಿದ್ದಾನೆ. ಮಹಿಳೆ ತನ್ನೂರಿಗೆ ಮರಳಲು ಆತ ಸಹಾಯ ಮಾಡಿದ್ದಾನೆ. ಊರಿಗೆ ಬಂದ ಮಹಿಳೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ. (ಏಜೆನ್ಸೀಸ್​)
https://www.vijayavani.net/an-architect-from-gujarat-had-allegedly-been-running-an-online-sex-chatting-and-video-calling-racket-from-his-design-office/
ಮದುವೆಯಾದ ಕ್ರಷ್​​ನೊಂದಿಗೆ ಅಕ್ರಮ ಸಂಬಂಧ ಹೊಂದಲು ಒತ್ತಾಯಿಸಿದ; ಒಪ್ಪದಿದ್ದಾಗ ಆತ ಮಾಡಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + twelve =
Remember me
