ಪಟನಾ:ಅತ್ತೆ ಸೊಸೆಯೆಂದರೆ ಅಮ್ಮ ಮಗಳಂತಿರಬೇಕು ಎನ್ನುತ್ತಾರೆ. ಆದರೆ ಆ ರೀತಿ ಅನ್ಯೋನ್ಯವಾಗಿರುವ ಕುಟುಂಬ ಸಿಗುವುದು ಅತಿ ಅಪರೂಪ. ಈ ಕುಟುಂಬದಲ್ಲಿ ಅತ್ತೆ ಸೊಸೆ ಜಗಳ ಅದೆಷ್ಟರ ಮಟ್ಟಿಗೆ ಏರಿತ್ತೆಂದರೆ, ಸಿಟ್ಟಿಗೆದ್ದ ಸೊಸೆ ಅತ್ತೆಯ ತಲೆಯನ್ನೇ ಒಡೆದು ಕಣ್ಣನ್ನು ಹೊರಗೆಳೆದು ಕೊಲೆ ಮಾಡಿಬಿಟ್ಟಿದ್ದಾಳೆ.
ಇದನ್ನೂ ಓದಿ:VIDEO: ಮೀನುಪ್ರಿಯರಿಗೆ ಹಬ್ಬಬೋ ಹಬ್ಬ… ಪುಕ್ಕಟೆ ಸಿಕ್ಕ ‘ಫ್ರೆಷ್’​ ಮೀನನ್ನು ಮುಗಿಬಿದ್ದು ಬಾಚಿಕೊಂಡ್ರು…
ಬಿಹಾರದ ಪಟನಾದಲ್ಲಿ ಇಂತದ್ದೊಂದು ಭೀಕರ ಘಟನೆ ನಡೆದಿದೆ. 55 ವರ್ಷದ ಮಹಿಳೆಯ ಕೊಲೆಯಾಗಿದೆ. ಆಕೆಯ ಸೊಸೆ ಲಲಿತಾ ದೇವಿ ಮದುವೆಯಾಗಿ ಹಲವು ವರ್ಷಗಳಾದರೂ ಗರ್ಭವತಿ ಆಗಿರಲಿಲ್ಲವಂತೆ. ಇದೇ ವಿಚಾರವಾಗಿ ಅತ್ತೆ ಸದಾ ಒಂದಿಲ್ಲೊಂದು ಟಾಂಟ್​ನ್ನು ಸೊಸೆಗೆ ಹೇಳುತ್ತಲೇ ಬಂದಿದ್ದಾಳೆ. ಈ ವಿಚಾರವಾಗಿ ಕಳೆದ ಕೆಲವು ತಿಂಗಳಿನಿಂದ ದೊಡ್ಡ ಪ್ರಮಾಣದ ಜಗಳವೇ ಆಗುತ್ತಿತ್ತಂತೆ.
ಇತ್ತೀಚೆಗೆ ಜಗಳ ತಾರಕಕ್ಕೇರಿದ್ದು, ಅತ್ತೆ ಸೊಸೆಯಿಬ್ಬರೂ ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಸೊಸೆ ಅತ್ತೆಯ ತಲೆಗೆ ಬಲವಾದ ವಸ್ತುವಿನಿಂದ ಹೊಡೆದಿದ್ದಾಳೆ. ರಕ್ತ ಚೆಲ್ಲುತ್ತ ಬಿದ್ದ ಅತ್ತೆಯ ಕಣ್ಣಿನೊಳಗೆ ಕೈ ಹಾಕಿ ಕಣ್ಣನ್ನು ಹೊರ ತೆಗೆದಿದ್ದಾಳೆ. ಅತ್ತೆ ಜೀವ ಬಿಟ್ಟಿರುವುದು ದೃಢವಾದ ನಂತರ ತನಗೆ ತಾನು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಅಷ್ಟರಲ್ಲಿ ಅಕ್ಕ ಪಕ್ಕದ ಮನೆಯವರು ಬಂದಿದ್ದು ಲಲಿತಾ ದೇವಿಯನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ:ಪತ್ನಿ ತವರಿಗೆ ಹೋದ ಬೆನ್ನಲ್ಲೇ ಪ್ರೇಯಸಿ ಜತೆ ನೇಣಿಗೆ ಶರಣು: ಮುಳುವಾಯ್ತು ವಿವಾಹೇತರ ಸಂಬಂಧ!
ಲಲಿತಾ ದೇವಿಯ ಶೇ. 40 ದೇಹಭಾಗ ಸುಟ್ಟಿದೆ. ಆಕೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್​)
ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
