ಕರ್ನೂಲ್​:ಮೊಟ್ಟೆ ಪ್ರಿಯರೇ ಎಚ್ಚರ! ಮೊಟ್ಟೆ ತಿನ್ನುವಾಗ ಸ್ವಲ್ಪ ಯಾಮಾರಿದ್ರೂ ನಿಮ್ಮ ಪ್ರಾಣಕ್ಕೇ ಕುತ್ತು ಬಂದೀತು ಜೋಕೆ…
ತೆಲಂಗಾಣದಲ್ಲಿ 50 ವರ್ಷದ ಮಹಿಳೆಯೊಬ್ಬರು ಬೇಯಿಸಿದ ಮೊಟ್ಟೆ ತಿನ್ನಲು ಹೋಗಿ ಮೃತಪಟ್ಟಿದ್ದಾರೆ. ನೀಲಮ್ಮ ಮೃತ ದುರ್ದೈವಿ. ಕರ್ನೂಲ್​ ಜಿಲ್ಲೆಯ ನೇರಳಪಲ್ಲಿ ಗ್ರಾಮದಲ್ಲಿ ಬುಧವಾರ ರಾತ್ರಿ ಈ ದುರಂತ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬುಧವಾರ ರಾತ್ರಿ ಊಟದ ಜತೆ ಮೊಟ್ಟೆ ತಿನ್ನಲೆಂದು ನೀಲಮ್ಮ ಮೊಟ್ಟೆಗಳನ್ನ ಬೇಯಿಸಿದ್ದರು. ಕುಟುಂಬಸ್ಥರೊಂದಿಗೆ ಊಟ ಮಾಡುವಾಗ ಎಲ್ಲರಿಗೂ ಮೊಟ್ಟೆಯನ್ನ ಬಡಿಸಿದ್ದರು. ತಾನೂ ಊಟ ಮಾಡುತ್ತಾ ಕುಳಿತಿದ್ದ ನೀಲಮ್ಮ, ಒಂದು ಮೊಟ್ಟೆಯನ್ನು ಕತ್ತರಿಸದೇ ಪೂರ ಬಾಯಲ್ಲಿ ಹಾಕಿಕೊಂಡು ನುಂಗಿದ್ದಾರೆ.

ಮೊಟ್ಟೆ ಗಂಟಲಲ್ಲಿ ಸಿಲುಕಿ, ಒಳಗೂ ಹೋಗದೆ, ಹೊರಗೂ ಬಾರದೆ ಅಲ್ಲೇ ಇದೆ. ಬಾಯಿಂದ ಹೊರಗೆ ಉಗಿಯಲು ನೀಲಮ್ಮ ಎಷ್ಟೇ ಪ್ರಯತ್ನಿಸಿದರೂ ಫಲಿಸಲಿಲ್ಲ. ಉಸಿರಾಟಕ್ಕೆ ಸಮಸ್ಯೆ ಉಂಟಾಗಿ, ಕ್ಷಣಾರ್ಧದಲ್ಲೇ ಪ್ರಜ್ಞೆ ತಪ್ಪಿ ಬಿದ್ದರು. ಕುಟುಂಬಸ್ಥರು ನೀಲಮ್ಮರ ಗಂಟಲಿಂದ ಮೊಟ್ಟೆಯನ್ನ ಹೊರ ತೆಗೆಯಲು ಪ್ರಯತ್ನಿಸಿದ್ದರಾದರೂ ಪ್ರಯೋಜನವಾಗಲೇ ಇಲ್ಲ. ಅಷ್ಟರಲ್ಲಿ ನೀಲಮ್ಮ ಕೊನೆಯುಸಿರೆಳೆದಿದ್ದರು.
ಹಿರಿಯ ನಟ, ಚಿಂತಕ ಪ್ರೊ. ಜಿ.ಕೆ.ಗೋವಿಂದ ರಾವ್ ನಿಧನ

ಗೆಳೆಯನನ್ನು ಮನೆಗೆ ಆಹ್ವಾನಿಸಿದ ವಿವಾಹಿತೆ, ಆತ ಮಲಗಿದ್ದ ವೇಳೆ ಮಾಡಬಾರದ್ದು ಮಾಡಿ ದುರಂತ ಅಂತ್ಯಕಂಡಳು

ವಿಜಯದಶಮಿ ಹಬ್ಬದ ದಿನವೇ ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು, ಓರ್ವನ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
