ಚಂಡೀಗಢ:ಕೂಡು ಕುಟುಂಬ ಚಂದವೆನ್ನುತ್ತಾರೆ ಅನೇಕರು. ಆದರೆ ಅದೇ ಕೂಡು ಕುಟುಂಬದಲ್ಲಿ ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾಗಿ ಅದು ದೊಡ್ಡ ಕ್ರೈಂಗೇ ನಾಂದಿ ಹಾಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ. ಅಂತೆಯೇ ಮಕ್ಕಳ ವಿಚಾರಕ್ಕೆ ಆರಂಭವಾದ ಜಗಳಕ್ಕೆ ಮೈದುನನೊಬ್ಬ ಅತ್ತಿಗೆಯ ಕಥೆಯನ್ನೇ ಮುಗಿಸಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.
ಹರಿಯಾಣದ ಅಂಬಲ ನಗರದಲ್ಲಿ ಅದೊಂದು ಕೂಡು ಕುಟುಂಬ. ಅಣ್ಣ ಅನಿಲ್​ ಮತ್ತು ತಮ್ಮ ಧೀರಜ್​ ಇಬ್ಬರಿಗೂ ಮದುವೆಯಾಗಿ ಮಕ್ಕಳಿದ್ದರು. ಅಣ್ಣನ ಹೆಂಡತಿ ಸಪ್ನಾ(30) ಹಾಗೂ ತಮ್ಮನ ಹೆಂಡತಿ ನಡುವೆ ಆಗಾಗ ಜಗಳ ಆಗುತ್ತಿರುತ್ತಿತ್ತಂತೆ. ಮಕ್ಕಳ ವಿಚಾರಕ್ಕೆ ಜಗಳ ಆರಂಭವಾಗಿ ಅದು ನಂತರ ಇಬ್ಬರ ಗಂಡಂದಿರ ಬಳಿಯೂ ಹೋಗುತ್ತಿತ್ತಂತೆ.
ಅದೇ ರೀತಿ ಈ ಗುರುವಾರ ಕೂಡ ಮನೆಯ ಇಬ್ಬರು ಸೊಸೆಯಂದಿರ ನಡುವೆ ಜಗಳವಾಗಿದೆ. ಕಿರಿ ಸೊಸೆ ಈ ವಿಚಾರವಾಗಿ ಗಂಡ ಧೀರಜ್​ಗೆ ದೂರು ನೀಡಿದ್ದು, ಆತ ಕೂಡ ಜಗಳದ ಮಧ್ಯೆ ಬಂದಿದ್ದಾನೆ. ಅತ್ತಿಗೆಯೊಂದಿಗೆ ವಾದಕ್ಕೆ ನಿಂತಿದ್ದಾನೆ. ಅತ್ತಿಗೆ ಮೈದುನನ ವಾದ ವಿವಾದ ತಾರಕಕ್ಕೇರಿದ್ದು, ಮನೆಯಲ್ಲಿದ್ದ ಚಾಕುವಿನಿಂದ ಧೀರಜ್​ ಅತ್ತಿಗೆಗೆ ಇರಿದಿದ್ದಾನೆ.
ಹೆಂಡತಿಗೆ ತಮ್ಮ ಚಾಕುವಿನಿಂದ ಇರಿದಿದ್ದನ್ನು ಕಂಡು ಭಯಗೊಂಡ ಅನಿಲ್​ ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ. ಈ ವಿಚಾರವಾಗಿ ಅನಿಲ್​ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದು, ತಮ್ಮನ ವಿರುದ್ಧ ದೂರು ನೀಡಿದ್ದಾನೆ. ನನ್ನ ಹೆಂಡತಿಯ ಸಾವಿಗೆ ಅವನೇ ಕಾರಣ ಎಂದು ಕಣ್ಣೀರಿಟ್ಟಿದ್ದಾನೆ. ಸದ್ಯ ಧೀರಜ್​ ಮತ್ತು ಆತನ ಹೆಂಡತಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್)
ಕಾರು ಮಾರೋಕೆ ಫೋಟೋ ಹಾಕುವಾಗ ಗುಪ್ತಾಂಗದ್ದೂ ಫೋಟೋ ಹಾಕಿಬಿಟ್ಟ! ಮಾರಾಟ ಆಗಿದ್ದೇನು?

ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ‌ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ

ಅಲೆದಾಡುತ್ತಿದ್ದ ವಿದೇಶಿಗನನ್ನು ಜರ್ಮನಿಗೆ ಕಳುಹಿಸಿದ ಪೊಲೀಸರು

ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
