ಕಾನ್ಪುರ:ತನ್ನ ಮೇಲೆ ಅತ್ಯಾಚಾರ ಮಾಡಿದ್ದ ವ್ಯಕ್ತಿ ಅಪಘಾತದಲ್ಲಿ ಸಾವನ್ನಪ್ಪಿದ ಎನ್ನುವ ಕಾರಣಕ್ಕೆ ಸಂತ್ರಸ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ:ರಾಗಿ, ಜೋಳದ ಮಧ್ಯೆ ಗಾಂಜಾ ಬೆಳೆದಿದ್ದ ಮಹಿಳೆ, ಪೊಲೀಸರು ಬರುತ್ತಿದ್ದಂತೆ ನಾಪತ್ತೆ
ದಿಬಿಯಾಪುರ ಮೂಲದ ಮಹಿಳೆಯನ್ನು ಇಟವಾ ಮೂಲದ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಆಕೆಯ ಪತಿ ನಿಧನವಾದ ಹಿನ್ನೆಲೆ ಆಕೆ ತನ್ನ ತವರಿಗೆ ಮರಳಿ, ಅಲ್ಲಿಯೇ ಬಾಡಿಗೆ ಮನೆಯೊಂದರಲ್ಲಿ ಜೀವಿಸಲಾರಂಭಿಸಿದ್ದಳು. ಈ ಸಮಯದಲ್ಲಿ ಆಕೆಗೆ ಫತೇಪುರ ಮೂಲದ ಜಿತೇಂದ್ರನ ಪರಿಚಯವಾಗಿದೆ.
ಪೊಲೀಸ್​ ಪೇದೆಯಾಗಿದ್ದ ಜಿತೇಂದ್ರ ತನ್ನ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ್ದಾಗಿ ಮಹಿಳೆ ದೂರಿದ್ದಾಳೆ. ಅದೇ ಕಾರಣಕ್ಕೆ ಆಕೆ ತನ್ನನ್ನು ಮದುವೆಯಾಗು ಎಂದು ಜಿತೇಂದ್ರನಿಗೆ ಕೇಳಿದ್ದಳಂತೆ. ಆದರೆ ಆತ ನಿರಾಕರಿಸಿದ್ದ. ಈ ವಿಚಾರವಾಗಿ ದಿಬಿಯಾಪುರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅದಾದ ನಂತರ ಆತನನ್ನು ಪೊಲೀಸ್​ ಕೆಲಸದಿಂದ ಅಮಾನತು ಮಾಡಲಾಗಿತ್ತು.
ಇದನ್ನೂ ಓದಿ:ತಿಂಗಳಿಗೆ ಶೇ.2.5 ಬಡ್ಡಿ ಆಮಿಷವೊಡ್ಡಿ ಐಶ್ವರ್ಯ ಲಕ್ಷ್ಮಿ ಚಿಟ್ಸ್ ಂಡ್‌ನಿಂದ ಧೋಖಾ
ಆರೋಪಿ ಜಿತೇಂದ್ರಗೆ ನವೆಂಬರ್​ 4ರಂದು ಅಪಘಾತವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕತ್ಸೆ ಫಲಕಾರಿಯಾಗದೆ ಆತ ನವೆಂಬರ್​ 9ರಂದು ಸಾವನ್ನಪ್ಪಿದ್ದಾನೆ. ತನ್ನ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗುವ ಮೊದಲೇ ಆತ ಸತ್ತಿದ್ದಾನೆಂದು ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. (ಏಜೆನ್ಸೀಸ್​)
ಜೆಎನ್​ಯುನಲ್ಲಿ ಸ್ಥಾಪಿತವಾಯಿತು ಸ್ವಾಮಿ ವಿವೇಕಾನಂದರ ಪ್ರತಿಮೆ; ಪ್ರತಿಮೆ ಪ್ರೇರಣೆಯಾಗಲಿ ಎಂದ ಪ್ರಧಾನಿ

ಮೋಸ ಮಾಡಿ ಜಯ ಗಳಿಸಿತಾ ಬಿಜೆಪಿ? ಅಂಚೆ ಮತಗಳ ಮರುಎಣಿಕೆಗೆ ತೇಜಸ್ವಿ ಒತ್ತಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
