ಅಹಮದಾಬಾದ್​: ಕರೊನಾ ಒಂದು ಸೋಂಕಷ್ಟೇ, ಅದಕ್ಕೆ ಹೆದರಬೇಡಿ, ಧೈರ್ಯವಾಗಿರಿ ಎಂದು ಸರ್ಕಾರ ಹೇಳುತ್ತಲೇ ಬಂದಿದೆ. ಮುಂಜಾಗ್ರತೆ ವಹಿಸಿ, ಭಯ ಬೇಡ ಎಂದು ಸಾಕಷ್ಟು ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ. ಆದರೂ ಹಲವರಿಗೆ ಈ ಸೋಂಕಿನ ಬಗ್ಗೆ ಭಯ ಉಳಿದಿದೆ. ಅದೇ ಭಯದಿಂದ ಯುವತಿಯೊಬ್ಬಳು ಆ್ಯಸಿಡ್​ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಹಮದಾಬಾದ್​ನಲ್ಲಿ ನಡೆದಿದೆ.
ಇದನ್ನೂ ಓದಿ:ಬಿಹಾರದ ಶಾಸಕರಿಗೆ ರಾಷ್ಟ್ರಗೀತೆಯೇ ಬರೋದಿಲ್ಲ; ವಿಡಿಯೋ ಮೂಲಕ ಮರ್ಯಾದೆ ಕಳೆದುಕೊಂಡ ಶಾಸಕ
ಅಹಮದಾಬಾದ್​ನ ಕೃಷ್ಣನಗರ ಪ್ರದೇಶದ ನಿವಾಸಿ ನಯನಾಬೆನ್​ ಪಟೇಲ್​ಗೆ (29) ಕಳೆದ ಕೆಲ ದಿನಗಳಿಂದ ಜ್ವರ, ತಂಡಿ ಮತ್ತು ಕೆಮ್ಮು ಕಾಣಿಸಿಕೊಂಡಿತ್ತು. ಆಕೆ ಕರೊನಾ ಪರೀಕ್ಷೆಯನ್ನೂ ಮಾಡಿಸಿಕೊಂಡಿರಲಿಲ್ಲ. ಪರೀಕ್ಷೆ ಮಾಡಿಸದಿದ್ದರೂ, ನನಗೆ ಕರೊನಾ ಬಂದಿದೆ ಎಂದು ಭಯದಿಂದಿದ್ದ ನಯನಾಬೆನ್​ ಆತ್ಮಹತ್ಯೆಗೆ ಮುಂದಾಗಿದ್ದಾಳೆ. ಆ್ಯಸಿಡ್​ ಕುಡಿದು, ಉಳಿದ ಆ್ಯಸಿಡ್​ನ್ನು ತನ್ನ ಮೈ ಮೇಲೆ ಚೆಲ್ಲಿಕೊಂಡಿದ್ದಾಳೆ.
ಇದನ್ನೂ ಓದಿ:ಅತ್ಯಾಚಾರ ವಿರೋಧಿಸಿದ್ದಕ್ಕೆ ಮೂಗನ್ನೇ ಕತ್ತರಿಸಿದರು
ಇದಾದ ಬಳಿಕೆ ಉರಿ ತಾಳಲಾರದೆ ನಯನಾಬೆನ್​ ಕೂಗಲಾರಂಭಿಸಿದ್ದಾಳೆ. ಕೂಗನ್ನು ಕೇಳಿ ಆಕೆಯ ಬಳಿ ಬಂದ ಕುಟುಂಬಸ್ಥರು ಗಾಬರಿಯಾಗಿದ್ದಾರೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ನಯನಾಬೆನ್​ ಸಾವನ್ನಪ್ಪಿದ್ದಾಳೆ.(ಏಜನ್ಸೀಸ್​)
ಮುಸ್ಲಿಂ ಯುವತಿಯನ್ನು ಮದುವೆಯಾಗಲು ಬಯಸಿದ ಹಿಂದೂವಿನ ಬರ್ಬರ ಹತ್ಯೆ

ನೀವು ಆರ್​ಸಿಬಿ ಫ್ಯಾನ್​ ಆಗಿದ್ದೇ ಹೌದಾದರೆ ಇವರ್ಯಾರು ಎಂದು ಗುರುತಿಸಿ; ಅಭಿಮಾನಿಗಳಿಗೆ ಆರ್​ಸಿಬಿ ಸವಾಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 7 =
Remember me
