ಮುಂಬೈ:ಕರೊನಾ ವೈರಸ್​ ಸಾಂಕ್ರಾಮಿಕವಾದದ್ದು, ಹಾಗಾಗಿ ಯಾವುದೇ ಕಾರ್ಯಕ್ರಮಗಳನ್ನು ಮಾಡಬೇಡಿ, ಹೊರಗಡೆ ಅನಾವಶ್ಯಕವಾಗಿ ಸುತ್ತಾಡಬೇಡಿ ಎಂದು ಸರ್ಕಾರ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದರೂ ಜನರಿಗೆ ಮಾತ್ರ ಬುದ್ಧಿ ಬಂದಿಲ್ಲ. ನಾನು ವಿದೇಶದಿಂದ ಬಂದಿಲ್ಲ ಎನ್ನುವ ಧೈರ್ಯದಲ್ಲಿ ಕಾರ್ಯಕ್ರಮವವೊಂದರಲ್ಲಿ ಭಾಗವಹಿಸಿದ್ದ ಮಹಿಳೆಗೆ ಕರೊನಾ ವೈರಸ್​ ಹರಡಿರುವುದು ಪತ್ತೆಯಾಗಿದೆ.
ಪುಣೆಯ 40 ವರ್ಷದ ಮಹಿಳೆ ವಿದೇಶಕ್ಕೆ ಹೋಗಿರಲಿಲ್ಲ. ಅವಳ ಮನೆಯ ಅಕ್ಕ ಪಕ್ಕ ಅಥವಾ ಮನೆಯಲ್ಲಿ ವಿದೇಶದಿಂದ ಪ್ರವಾಸ ಮಾಡಿ ಬಂದವರು ಇಲ್ಲ ಎನ್ನುವ ಧೈರ್ಯದಲ್ಲಿದ್ದಳು. ಅದೇ ಧೈರ್ಯದಲ್ಲಿ ಮಾರ್ಚ್​ 3ರಂದು ಆಕೆ ಮುಂಬೈನ ವಾಶಿಯಲ್ಲಿ ಮದುವೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದಾಳೆ. ಮದುವೆ ಮುಗಿಸಿ ಬಂದ ಮಹಿಳೆಗೆ ಕೆಲ ದಿನಗಳಲ್ಲಿ ಆರೋಗ್ಯ ಹದಗೆಟ್ಟಿದ್ದು, ವಿದೇಶಿ ಟ್ರಾವೆಲ್​ ಹಿಸ್ಟರಿ ಇಲ್ಲದ ಕಾರಣ ಆಕೆಗೆ H1N1 ಇರಬಹುದು ಎಂದು ಶಂಕಿಸಲಾಗಿತ್ತು. ಆದರೆ ಇದೀಗ ಆಕೆಯಲ್ಲಿ ಕರೊನಾ ವೈರಸ್​ ಪತ್ತೆಯಾಗಿದ್ದು, ಮುಂಬೈನ ಭಾರತೀ ಆಸ್ಪತ್ರೆಯಲ್ಲಿ ವೆಂಟಿಲೇಟರ್​ ಸಹಾಯದೊಂದಿಗೆ ಉಸಿರಾಡುವಂತಾಗಿದೆ.
ಮದುವೆಯಲ್ಲಿ ಯಾವುದೋ ವ್ಯಕ್ತಿಯಲ್ಲಿ ಕರೊನಾ ವೈರಸ್​ ಇದ್ದು ಅವರಿಂದಲೇ ಆಕೆಗೆ ವೈರಸ್​ ಹರಡಿರಬಹುದು ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆಯನ್ನು ಮಾಡುತ್ತಿರುವುದಾಗಿ ಜಿಲ್ಲಾಧಿಕಾರಿ ನೇವಲ್​ ಕಿಶೋರ್​ ರಾಮ್​ ತಿಳಿಸಿದ್ದಾರೆ. ಆಕೆ ಮುಂಬೈನಿಂದ ವಾಶಿಗೆ ಕ್ಯಾಬ್​ನಲ್ಲಿ ಸಂಚರಿದ್ದಾಳೆ ಎನ್ನಲಾಗಿದ್ದು ಅದರ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.(ಏಜೆನ್ಸೀಸ್​)
ದುಬೈನಿಂದ ಮರಳಿ ಬಸ್ಸಿನಲ್ಲಿ ಸಂಚರಿಸುತ್ತಿದ್ದವಳನ್ನು ಬಸ್ಸಿನಿಂದ ಕೆಳಗಿಳಿಸಿ ಆಕ್ರೋಶ ವ್ಯಕ್ತಪಡಿಸಿದ ಸಹ ಪ್ರಯಾಣಿಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 5 =
Remember me
