ದುಬೈ:ಈ ಬಾರಿಯ ‘ಏಷ್ಯಾಕಪ್​ ಟಿ20 ಕ್ರಿಕೆಟ್​ ಚಾಂಪಿಯನ್’​ ಪಟ್ಟ ಶ್ರೀಲಂಕಾಗೆ ಒಲಿದಿದೆ. ಭಾನುವಾರ ರಾತ್ರಿ ಪಾಕಿಸ್ತಾನ ವಿರುದ್ಧ ನಡೆದ ರೋಚಕ ಫೈನಲ್​ ಪಂದ್ಯದಲ್ಲಿ 23 ರನ್​​​ಗಳ ಅಂತರದಲ್ಲಿ ಶ್ರೀಲಂಕಾ ಗೆಲುವು ಸಾಧಿಸಿತು. ಆ ಮೂಲಕ 8 ವರ್ಷಗಳ ಬಳಿಕ ಏಷ್ಯಾದ ಕ್ರಿಕೆಟ್​ ಚಾಂಪಿಯನ್​ ಆಗಿ ಹೊರಹೊಮ್ಮಿತು. ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟಿಂದ ಕಂಗೆಟ್ಟಿರುವ ಶ್ರೀಲಂಕಾ ದೇಶದ ಜನರ ಮೊಗದಲ್ಲಿ ನಗು ಮೂಡಿಸುವಲ್ಲಿ ದಸುನ್​ ಶನಕ ಪಡೆ ಯಶಸ್ವಿಯಾಗಿದೆ.
ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಲಂಕಾ ಪಡೆ, ಒಂದು ಹಂತದಲ್ಲಿ 58 ರನ್​ಗೆ 5 ವಿಕೆಟ್​ ಕಳೆದುಕೊಂಡು ತತ್ತರಿಸಿತು. ಬಳಿಕ ಎಡಗೈ ಬ್ಯಾಟರ್​ ಭಾನುಕಾ ರಾಜಪಕ್ಷ ಅವರ ಸಾಹಸದಿಂದ 6 ವಿಕೆಟ್​ಗೆ 170 ರನ್​ ಪೇರಿಸುವಲ್ಲಿ ಯಶಸ್ವಿಯಾಯಿತು. ರಾಜಪಕ್ಷರ ಅರ್ಧಶತಕದ ಆಸರೆ ನೆರವಿನಿಂದ (71*ರನ್​, 45 ಎಸೆತ, 6 ಬೌಂಡರಿ, 3 ಸಿಕ್ಸರ್​) ಶ್ರೀಲಂಕಾ ತಂಡವು ಪಾಕಿಸ್ತಾನವನ್ನು ಸೋಲಿಸಿತು.
ಪಾಕ್​ ತಂಡ, ವಿಕೆಟ್​ ಕೀಪರ್​-ಆರಂಭಿಕ ಮೊಹಮದ್​ ರಿಜ್ವಾನ್​(55 ರನ್​, 49 ಎಸೆತ, 4 ಬೌಂಡರಿ, 1 ಸಿಕ್ಸರ್​) ಪ್ರತಿರೋಧದ ಹೊರತಾಗಿಯೂ 20 ಓವರ್​ಗಳಲ್ಲಿ 147 ರನ್​ಗಳಿಗೆ ಅಲೌಟ್​ ಆಗಿ ಸೋಲೊಪ್ಪಿಕೊಂಡಿರು. ಆ ಮೂಲಕ ಟಾಸ್​ ಗೆದ್ದವರೇ ಪಂದ್ಯ ಗೆಲ್ಲುವ ಲೆಕ್ಕಾಚಾರವನ್ನೂ ತಲೆಕೆಳಗಾಗಿಸಿತು ಸಿಂಹಳೀಯರ ತಂಡ.
Celebrations galore among the DP World#AsiaCup2022 🏆 champions 💪🏼🤩🥳@OfficialSLC#SLvPAK#ACC#GetReadyForEpic#AsiaCup2022pic.twitter.com/xeCONN7onF



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 10 =
Remember me
