​ಉತ್ತರಪ್ರದೇಶ:ಕರೊನಾ ಭೀತಿಯಲ್ಲಿರುವ ಜನ ಫಂಗಸ್​ ಹೆಸರು ಕೇಳಿದ್ರೆ ಸಾಕು ಮತ್ತಷ್ಟು ಬೆಚ್ಚಿಬೀಳ್ತಾರೆ. ಬ್ಲ್ಯಾಕ್​ ಫಂಗಸ್​, ವೈಟ್​ ಫಂಗಸ್​ ಕಾಣಿಸಿಕೊಂಡು ತಲ್ಲಣ ಮೂಡಿಸಿದೆ. ಫಂಗಸ್​ಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ಮತ್ತೊಂದು ವಿಧದ ಫಂಗಸ್​ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.
ಹೌದು, ಬ್ಲ್ಯಾಕ್​ ಫಂಗಸ್​, ವೈಟ್​ ಫಂಗಸ್​ನ ಅಟ್ಟಹಾಸ ಹೆಚ್ಚುತ್ತಿರುವಾಗಲೇ ಯೆಲ್ಲೋ ಫಂಗಸ್​ ಕಾಣಿಸಿಕೊಂಡಿದೆ. ಇದು ಇತರ ಫಂಗಸ್​ಕ್ಕಿಂತ ಹೆಚ್ಚು ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಯೆಲ್ಲೋ ಫಂಗಸ್​ನ ಮೊದಲ ಪ್ರಕರಣ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಪತ್ತೆಯಾಗಿದೆ. ದೇಹದಲ್ಲಿ ಆಂತರಿಕವಾಗಿ ಶುರುವಾಗುವ ಯೆಲ್ಲೋ ಫಂಗಸ್​, ದೇಹದ ಮೇಲೆ ಗಾಯಗಳಾಗಿ ಕೀವು ತರಿಸಬಹುದು. ಗಂಭೀರ ಸ್ವರೂಪಕ್ಕೆ ತಿರುಗಿದರೆ ಅಂಗಾಗ ವೈಫಲ್ಯವೂ ಆಗಬಹುದು. ಲಕ್ಷಣ ಕಂಡು ಬರುತ್ತಿದ್ದಂತೆ ನಿರ್ಲಕ್ಷಿಸದೆ ಆರಂಭದಲ್ಲೇ ಚಿಕಿತ್ಸೆ ಪಡೆಯಬೇಕು ಎಂದು ತಜ್ಞರು ಹೇಳಿದ್ದಾರೆ ಎಂದು ವರದಿಯಾಗಿದೆ.
ಲಕ್ಷಣ:ಅಲಸ್ಯ, ತೂಕ ಕಡಿಮೆ ಆಗುವುದು, ಹಸಿವಾಗದಿರುವುದು ಹಳದಿ ಶಿಲೀಂಧ್ರ ರೋಗದ ಸಾಮಾನ್ಯ ಲಕ್ಷಣ ಎಂದು ಹೇಳಗಿದೆ. ಕಣ್ಣು ಮಂಜಾಗುವುದು, ಕಾಣಿಸದಿರುವುದು, ಕೀವಾಗುವುದು, ಕೀವು ಸೋರಿಕೆ ಯೆಲ್ಲೋ ಫಂಗಸ್​ನ ತೀವ್ರ ಸ್ವರೂಪದ ಲಕ್ಷಣ. ಆರಂಭದಲ್ಲೇ ಚಿಕಿತ್ಸೆ ಪಡೆಯದಿದ್ದರೆ ಅಂಗಾಂಗ ವೈಫಲ್ಯ ಆಗಲಿದೆ ಎನ್ನಲಾಗಿದೆ.
ಕಳಪೆ ನೈರ್ಮಲ್ಯ, ಕಲುಷಿತ ಆಹಾರ, ಸ್ಟೀರಾಯ್ಡ್‌ಗಳ ಅತಿಯಾದ ಬಳಕೆ, ಕಲುಷಿತ ಆಕ್ಸಿಜನ್​ ಸೇವನೆ… ಹೀಗೆ ನಾನಾ ಕಾರಣಕ್ಕೆ ಫಂಗಸ್​ ಕಾಣಿಸಿಕೊಳ್ಳಲಿದೆ. ಕರೊನಾದಿಂದ ಗುಣಮುಖರಾದ ಬಳಿಕ ಕಾಣಿಸಿಕೊಳ್ಳುವ ಇತರ ರೋಗ ತಡೆಗೆ ಔಷಧ ತೆಗೆದುಕೊಳ್ಳವವರಿಗೆ ಇದು ಹೆಚ್ಚು ಅಪಾಯಕಾರಿ.
ಮಗನೇ ನಂಗೇನೂ ಆಗಿಲ್ಲ, ಮನೆಗೆ ಕರೆದುಕೊಂಡು ಹೋಗಪ್ಪಾ… ಕರೊನಾ ಗೆದ್ದ 105 ವರ್ಷದ ಅಜ್ಜಿ

ಗಂಡನ ಅಂತ್ಯಸಂಸ್ಕಾರ ನೆರವೇರುತ್ತಿದ್ದಂತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

ಏಕಕಾಲಕ್ಕೆ ಅಕ್ಕ-ತಂಗಿ ಇಬ್ಬರಿಗೂ ತಾಳಿಕಟ್ಟಿದ ಯುವಕ! ಈತ ಕೋಲಾರದ ಉಮಾಪತಿಯಲ್ಲ…

ಕರೊನಾಗೆ ಬಾಣಂತಿ ಬಲಿ! ಅವಳ ಚಿತೆಯಲ್ಲೇ ನನ್ನನ್ನೂ ಸುಟ್ಟುಹಾಕಿ … ಎಂದವ ವಿಷ ಕುಡಿದು ಆಸ್ಪತ್ರೆ ಆವರಣದಲ್ಲೇ ಒದ್ದಾಡಿದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + twenty =
Remember me
