ತೆಲಂಗಾಣ:ಚಲಿಸುವ ರೈಲಿಗೆ ಸಿಲುಕಿ ಬಾಲಕ (16) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನ ವಿದ್ಯಾನಗರದ ಬಳಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಬಿಗ್ ಬ್ಯಾಷ್ ಟಿ20: ನಾಯಕತ್ವದಿಂದ ಕೆಳಗಿಳಿದ ಮ್ಯಾಕ್ಸ್‌ವೆಲ್!
ಏನಿದು ಪ್ರಕರಣ ? :ಪ್ರೀತಿ, ಪ್ರೇಮ ಹೆಸರಲ್ಲಿ ಅಪ್ರಾಪ್ತ ಬಾಲಕಿಗೆ (16) ಕೆಲ ದಿನಗಳಿಂದ ಮೊಬೈಲ್​ನಲ್ಲಿ ಮೆಸೇಜ್​ ಕಳುಹಿಸುವುದು, ಕಾಲೇಜಿಗೆ ಹೋಗುತ್ತಿರುವಾಗ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಯುವತಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ ಎನ್ನಲಾಗಿದೆ.
ಪೂರ್ವ ಮಂಡಲ ಡಿಸಿಪಿ ಸಾಯಿಶ್ರೀ ಮಾತನಾಡಿ, ಅಂಬರಪೇಟೆಯ ತುರಬ್‌ನಗರದ ಬಾಲಕಿ ಮತ್ತು ಮೃತ ಹುಡುಗ ಒಂದೇ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಬಾಲಕಿಯ ತಾಯಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಅನಾರೋಗ್ಯದ ಕಾರಣ ಇತ್ತೀಚೆಗೆ ನಿಧನರಾಗಿದ್ದಾರೆ. ಟೈಲರಿಂಗ್ ಉಪಕರಣಗಳನ್ನು ಮೃತ ಬಾಲಕನ ಮನೆಯವರು ಖರೀದಿಸಿದ್ದಾರೆ ಎನ್ನಲಾಗಿದೆ.
ಬಾಲಕಿ ಗುರುವಾರ ಸಂಜೆ ತಮ್ಮ ದೊಡ್ಡಮ್ಮ ಮಗಳ ಬಳಿ ಟ್ಯೂಷನ್​ಗೆ ಹೋಗಿದ್ದಳು. ಇದನ್ನು ಗಮನಿಸಿದ ಬಾಲಕ ರಾತ್ರಿ 7.30ಕ್ಕೆ ಟ್ಯೂಷನ್‌ಗೆ ಹೋಗಿದ್ದ ಬಾಲಕಿಗೆ ಚಾಕುವಿನಿಂದ ಇರಿದಿದ್ದಾನೆ. ಇದನ್ನು ಪ್ರಶ್ನೆ ಮಾಡಿದ ಆಕೆಯ ದೊಡ್ಡಮ್ಮನ ಮಗಳನ್ನು ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಚಾಕು ಅಲ್ಲಿಯೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಕುರಿತು ಅಂಬರಪೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದಾದ ಬಳಿಕ ಬಾಲಕ ಚಲಿಸುವ ರೈಲಿಗೆ ಸಿಲುಕಿ ಗುರುವಾರ ಮಧ್ಯರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಎರಡು ಘಟನೆಗಳ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ರಾಮಲಲ್ಲಾ ವಿಗ್ರಹವು ಮಗುವಿನಂತೆ ಕಾಣಿಸುತ್ತಿಲ್ಲ: ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆಗೆ ಬಿಜೆಪಿ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + nineteen =
Remember me
