ಲಖನೌ:ಆಸ್ತಿ ಆಸೆಗಾಗಿ ಯುವಕನೊಬ್ಬ ಹೆತ್ತ ತಾಯಿಗೇ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದು, ಆಕೆ ತೀವ್ರ ಸುಟ್ಟಗಾಯಗಳಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಮನಕಲಕುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಪೊಲೀಸ್ ಠಾಣೆ ಆವರಣದಲ್ಲೇ ಘಟನೆ ನಡೆದಿರುವುದು ಗಮನಾರ್ಹ ಸಂಗತಿಯಾಗಿದೆ.
ಇದನ್ನೂ ಓದಿ:‘ರಾಜ್ಯಪಾಲರ ಗೌರವಕ್ಕೆ ಧಕ್ಕೆ ತರಬೇಡಿ: ಮಮತಾ ಬ್ಯಾನರ್ಜಿಗೆ ಹೈಕೋರ್ಟ್ ಸಲಹೆ
ತಾನೇ ಬೆಂಕಿ ಹಚ್ಚಿ ಬಳಿಕ ಸಂಬಂಧಿ ಜತೆಗಿನ ಆಸ್ತಿ ವಿವಾದದಿಂದ ತಾಯಿ ಬೆಂಕಿ ಹಚ್ಚಿಕೊಂಡಿದ್ದಾಳೆ ಎಂದು ಬಿಂಬಿಸಲು ಯತ್ನಿಸಿದ್ದಾನೆ.
ಈ ಘಟನೆ ಮಂಗಳವಾರ ಖೈರ್ ಪೊಲೀಸ್ ಪ್ರದೇಶದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು, ಯುವಕನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮಹಿಳೆ ಮತ್ತು ಆಕೆಯ ಮಗ ಪೊಲೀಸ್​ ಠಾಣೆಗೆ ಬಂದಿದ್ದರು. ಸ್ವಲ್ಪ ಸಮಯದ ನಂತರ, ಮಹಿಳೆ ಮತ್ತು ಆಕೆಯ ಮಗ ಪೊಲೀಸ್ ಠಾಣೆಯಿಂದ ಹೊರಬಂದು ಆವರಣದೊಳಗಿನ ನಿರ್ಜನ ಸ್ಥಳಕ್ಕೆ ತೆರಳಿದರು.
ಅಲ್ಲಿ ಮಹಿಳೆ ತನಗೆ ನ್ಯಾಯ ಸಿಕ್ಕಿಲ್ಲ, ಪೆಟ್ರೋಲ್​ ಕ್ಯಾನ್​ ಮತ್ತು ಬೆಂಕಿ ಪೊಟ್ಟಣ ತೋರಿಸಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರಿಗೆ ಹೆದರಿಸಿದ್ದಾಳೆ. ಆಗ ಪೊಲೀಸ್ ಕಾನ್​ಸ್ಟೇಬಲ್​ ಮಹಿಳೆಯ ಕೈಯಿಂದ ಬೆಂಕಿಪೊಟ್ಟಣ ಕಿತ್ತುಕೊಂಡು ಸಮಾಧಾನಪಡಿಸಿದ್ದಾರೆ. ಆದರೆ ಕಾನ್​ಸ್ಟೇಬಲ್​ ಅಲ್ಲಿಂದ ಮುಂದೆ ತೆರಳುತ್ತಿದ್ದಂತೆ ಲೈಟರ್ ಬಳಸಿ ತಾಯಿಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿ ನಂದಿಸಲು ಪೊಲೀಸರು ಮಹಿಳೆಯ ಮೇಲೆ ಗೋಣಿಚೀಲಗಳನ್ನು ಹಾಕಿದ್ದಾರೆ. ಆದರೆ ಆ ವೇಳೆಗಾಗಲೇ ಆಕೆಗೆ ಶೇ.44ಸುಟ್ಟಗಾಯಗಳಾಗಿವೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ಹೇಮಲತಾ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು.
ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಯುವಕನ ಕೃತ್ಯಕ್ಕೆ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸಂಕಷ್ಟದಲ್ಲಿ ಟ್ರೈನಿ ಐಎಎಸ್ ಅಧಿಕಾರಿ..ನಕಲಿ ವಿಳಾಸ ಸಲ್ಲಿಸಿ ಅಂಗವಿಕಲ ಪ್ರಮಾಣಪತ್ರ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × one =
Remember me
