ಉತ್ತರ ಪ್ರದೇಶ:ಪ್ರೀತಿ ಕುರುಡು. ಅತೀಯಾದ ಪ್ರೀತಿ ಎಂತಹ ದುಸ್ಸಾಹಸಕ್ಕೂ ಕೂಡಾ ನಮ್ಮನ್ನು ದೂಡುತ್ತದೆ ಎನ್ನುವುದು ಸತ್ಯ. ಇಲ್ಲೊಬ್ಬ ವ್ಯಕ್ತಿ ಗೆಳತಿಗಾಗಿ ಪತ್ನಿಯ ಮೂಗು ಕತ್ತರಿಸಿ ಜೇಬಿಗೆ ಹಾಕಿಕೊಂಡು ಸ್ಥಳದಿಂದ ಎಸ್ಕೆಪ್​ ಆಗಿರುವ ಘಟನೆ ಉತ್ತರ ಪ್ರದೇಶದ ಲಖಿನಂಪುರ್ ಖೇರಿ ಜಿಲ್ಲೆಯಲ್ಲಿ ನಡೆದಿದೆ.
ರಕ್ತಸ್ರಾವದಿಂದ ಪೊಲೀಸ್ ಠಾಣೆಗೆ ತೆರಳಿ ಪತಿ ವಿರುದ್ಧ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪತ್ನಿಯ ಮೂಗನ್ನು ಜೇಬಿನಲ್ಲಿ ಇಟ್ಟು ಪರಾರಿಯಾಗಿರುವ ವ್ಯಕ್ತಿಗಾಗಿ ಶೋಧ ನಡೆಸುತ್ತಿದ್ದಾರೆ.
ವಿಕ್ರಮ್ ಎಂಬ ವ್ಯಕ್ತಿ ತನ್ನ ಪತ್ನಿ ಸೀಮಾದೇವಿ ಮತ್ತು ಅವರ ಇಬ್ಬರು ಮಕ್ಕಳೊಂದಿಗೆ ಮಿಥೌಲಿ ಪ್ರದೇಶದ ಬನ್ಸ್ಟಾಲಿ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಈ ಜೋಡಿ ಮದುವೆಯಾಗಿ 12 ವರ್ಷಗಳಾಗಿವೆ. ಆದರೆ ಇತ್ತೀಚಿಗೆ ವಿಕ್ರಂಗೆ ಮಹಿಳೆಯೊಬ್ಬಳ ಪರಿಚಯವಾಗಿದೆ. ನಂತರ ವಿಕ್ರಮ್​ ಆಕೆ ಜತೆ ಸಂಬಂಧ ಬೆಳೆಸಿದ್ದಾನೆ. ಇವರಿಬ್ಬರ ಸಂಬಂಧ ಸೀಮಾದೇವಿಗೆ ತಿಳಿಯಿತು. ಹೀಗೆ ಇಬ್ಬರ ನಡುವೆ ಜಗಳ ಮುಂದುವರಿದಿದೆ.
ಇದನ್ನೂ ಓದಿ:ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದ; ಯುವಕನ ಕಿರುಕುಳದಿಂದ ಬೇಸತ್ತು ಪ್ರಾಣ ಬಿಟ್ಟ ಯುವತಿ
ಕಳೆದ ಶನಿವಾರ ವಿಕ್ರಮ್ ತನ್ನ ಪತ್ನಿ ಸೀಮಾದೇವಿಯೊಂದಿಗೆ ಜಗಳವಾಡಿದ್ದನು. ಅವರ ನಾಲ್ಕು ವರ್ಷದ ಮಗಳು ಮೊಬೈಲ್ ಫೋನ್ ನೋಡುತ್ತಾ ಕುಳಿತಿದ್ದಾಳೆ. ಆ ಮೊಬೈಲ್ ಕೊಡಲು ವಿಕ್ರಂ ಕೇಳುತ್ತಾನೆ. ಆದರೆ, ಮಗು ನೀಡಿಲ್ಲ. ಇದರಿಂದ ವಿಕ್ರಮ್ ಕೋಪಗೊಂಡು ಮಗುಗೆ ಹೊಡೆದಿದ್ದಾನೆ. ಅದನ್ನು ನೋಡಿ ಸೀಮಾದೇವಿ ತಡೆಯಲು ಹೋಗಿದ್ದಾಳೆ. ಆಗ ವಿಕ್ರಂ ಸಿಟ್ಟಿಗೆದ್ದು ಅಲ್ಲೇ ಇದ್ದ ಚಾಕು ತೆಗೆದುಕೊಂಡು ಸೀಮಾದೇವಿಯ ಮೂಗಿಗೆ ಕೊಯ್ದಿದ್ದಾನೆ.ನೋವಿನಿಂದ ಸೀಮಾದೇವಿ ಕಿರುಚಿಕೊಂಡಿದ್ದು, ಸ್ಥಳೀಯರು ಬಂದಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಳಿಕ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಇದನ್ನೂ ಓದಿ:ಎಷ್ಟು ಕೋಟಿ ಬೇಕಾದ್ರು ಕೊಡ್ತೀನಿ ಬಾ…ಕೃತಿ ಶೆಟ್ಟಿಗೆ ಆಹ್ವಾನ ಕೊಟ್ಟ ಸ್ಟಾರ್ ನಟನ ಮಗ
ಚಿಕಿತ್ಸೆ ಬಳಿಕ ಸೀಮಾದೇವಿ ಪೋಷಕರೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ. ಮದುವೆಯಾಗಿ 12 ವರ್ಷಗಳಾಗಿವೆ, ವಿಕ್ರಮ್ ಪ್ರತಿದಿನ ಕುಡಿದು ಬರುತ್ತಾನೆ. ಕುಡಿದ ಅಮಲಿನಲ್ಲಿ ತನಗೆ ಥಳಿಸುತ್ತಿದ್ದ. ಬದಲಾಗುತ್ತಾನೆ ಎಂದು ಕಾಯುತ್ತಿದ್ದಾಗ ಬೇರೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡು ಚಿತ್ರಹಿಂಸೆ ನೀಡುತ್ತಿದ್ದ. ಪ್ರತಿ ಬಾರಿ ಮನೆಗೆ ಬಂದಾಗ ಮಕ್ಕಳನ್ನು ಕಡೆಗಣಿಸಿ ಮಕ್ಕಳನ್ನೂ ಥಳಿಸುತ್ತಾನೆ ಎಂದು ದೂರನ್ನು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ವಿಕ್ರಂಗಾಗಿ ಹುಡುಕಾಟ ನಡೆಸಿದ್ದಾರೆ.
ಬೆಂಗಳೂರಿಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × four =
Remember me
