ವಿಜಯವಾಡ:ಇತ್ತೀಚಿನ ದಿನಗಳಲ್ಲಿ ಮದುವೆಯ ಹೆಸರಲ್ಲಿ ಮೋಸ ಹೋಗುವವರು ಮತ್ತು ಮೋಸ ಮಾಡುತ್ತಿರುವವ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲ ಯುವತಿಯರು, ಯುವಕರು ಅವಿವಾಹಿತರನ್ನೇ ಟಾರ್ಗೆಟ್ ಮಾಡಿ ವಂಚನೆಯ ಬಲೆಗೆ ಬೀಳಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಯುವತಿಯೊಬ್ಬಳು ಎಂಟು ಮಂದಿಯನ್ನು ಮದುವೆಯಾಗಿ ವಂಚಿಸಿದ ಘಟನೆ ಮುನ್ನೆಲೆಗೆ ಬಂದಿದೆ.
ಮಹಾವಂಚಕಿಯ ಹೆಸರು ರಶೀದಾ. ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈ ಯುವತಿ ಮದುವೆ ಹೆಸರಲ್ಲಿ ಯುವಕರನ್ನು ಯಾಮಾರಿಸಿದ್ದಾಳೆ. ಮದುವೆಯಾದ ಕೆಲವೇ ದಿನಗಳಲ್ಲಿ ಹಣ, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು. ರಶೀದಾಗೆ ಇನ್​ಸ್ಟಾಗ್ರಾಂ ಮೂಲಕ ತಮಿಳುನಾಡಿನ ಸೇಲಂ ಜಿಲ್ಲೆಯ ತಾರಮಂಗಲ ಮೂಲದ ಫೈನಾನ್ಶಿಯರ್​ ಮೂರ್ತಿ ಎಂಬುವರ ಪರಿಚಯವಾಗಿತ್ತು. ಹಲವು ತಿಂಗಳುಗಳ ಕಾಲ ಇಬ್ಬರ ನಡುವೆ ಮಾತುಕತೆ ನಡೆಯುತ್ತಿತ್ತು. ಬಳಿಕ ಪರಿಚಯ ಪ್ರೀತಿಗೆ ತಿರುಗಿ ರಶೀದಾ ಮದುವೆ ಆಗುವ ಬಯಕೆಯನ್ನು ಮೂರ್ತಿ ಮುಂದೆ ವ್ಯಕ್ತಪಡಿಸಿದಳು.
ಇದನ್ನೂ ಓದಿ:ರಿಯಾಯಿತಿ ಬೆಲೆಗೆ ಟೊಮ್ಯಾಟೊ ಮಾರಾಟ; ಕರ್ನಾಟಕ, ಆಂಧ್ರ, ಮಹಾರಾಷ್ಟ್ರದಲ್ಲಿ ನಾಫೆಡ್, ಎನ್​ಸಿಸಿಎಫ್ ಮೂಲಕ ಖರೀದಿ
ಹುಡುಗಿ ನೋಡಲು ಸುಂದರವಾಗಿದ್ದರಿಂದ ಮೂರ್ತಿ ಕೂಡ ಮರುಮಾತಾಡದೆ ಮದುವೆ ಓಕೆ ಎಂದರು. ಇಬ್ಬರ ಮದುವೆ ಕಳೆದ ಮಾರ್ಚ್​ 30ರಂದು ನಡೆದಿತ್ತು. ಆದರೆ, ಮದುವೆಯಾದ ಕೆಲವೇ ದಿನಗಳಲ್ಲಿ ರಶೀದಾ ಇದ್ದಕ್ಕಿಂದ್ದಂತೆ ಮಾಯವಾದಳು. ಮನೆಯಲ್ಲಿದ್ದ ಹಣ, ಚಿನ್ನಾಭರಣ ಕಾಣೆಯಾಗಿರುವುದನ್ನು ನೋಡಿ, ತಾನು ಮೋಸ ಹೋಗಿರುವುದು ಸಹ ಮೂರ್ತಿಗೆ ಅರ್ಥವಾಯಿತು. ಬಳಿಕ ಸ್ಥಳೀಯ ಠಾಣೆಗೆ ಆಕೆಯ ವಿರುದ್ಧ ದೂರು ನೀಡಿದರು.
ಮೂರ್ತಿ ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದಾಗ ರಶೀದಾಳ ಅಸಲಿ ಮುಖ ಬಯಲಾಯಿತು. ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ತೆರೆದು, ಆರ್ಥಕವಾಗಿ ಸದೃಢರಾದ ಅವಿವಾಹಿತ ಹುಡುಗರನ್ನು ಟಾರ್ಗೆಟ್​ ಮಾಡಿ, ಪರಿಚಯಿಸಿಕೊಂಡು, ಪ್ರೀತಿಯ ಹೆಸರಲ್ಲಿ ನಂಬಿಸಿ ಮದುವೆಯಾಗಿ ವಂಚನೆ ಮಾಡುತ್ತಿದ್ದಳು ಎಂಬುದು ಬಯಲಾಗಿದೆ.
ಅಂದಹಾಗೆ ಆರೋಪಿ ರಶೀದಾ ನೀಲಗಿರಿ ಮೂಲದವಳು. ಪೊಲೀಸರು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಯುಎಇ ಭೇಟಿ ನೀಡಲಿರುವ ಪ್ರಧಾನಿ ಮೋದಿ

ನೇಕಾರಿಕೆಗೆ ಮಾರುಕಟ್ಟೆ ಏರಿಳಿತ, ವಿದ್ಯುತ್ ದರ ಹೆಚ್ಚಳದ ಬಿಸಿ; ಯಾಂತ್ರಿಕ ಮಗ್ಗಗಳ ಕೆಲಸಕ್ಕೆ ಅನ್ಯ ರಾಜ್ಯದವರ ಲಗ್ಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
