ತೆಲಂಗಾಣ:ಅನಾರೋಗ್ಯದಿಂದ ತಂಗಿ ಸತ್ತರೂ ಯಾರಿಗೂ ವಿಷಯ ಹೇಳಿದೆ ಮನೆಯೊಳಗೆ ಶವದ ಜತೆಯಲ್ಲೇ ಅಕ್ಕ ನಾಲ್ಕು ದಿನ ಕಾಲ ಕಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪೆದ್ದಪಲ್ಲಿ ಪಟ್ಟಣದ ಪ್ರಗತಿನಗರದ ಮನೆಯಲ್ಲಿ 26 ಷರ್ವದ ಸ್ವಾತಿ ಮತ್ತು ಈಕೆಯ ತಂಗಿ ಶ್ವೇತಾ ಇಬ್ಬರೂ ವಾಸವಿದ್ದರು. ಶ್ವೇತಾ ಎಂಬಿಎ ಪಧವೀದರೆ. ಎಂಟೆಕ್​ ಓದಿರುವ ಸ್ವಾತಿ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಶ್ವೇತಾ ಜ್ವರದಿಂದ ಬಳಲುತ್ತಿದ್ದಳು. ಒಮ್ಮೆ ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನೂ ಪಡೆದು ಮನೆಗೆ ವಾಪಸ್​ ಆಗಿದ್ದಳು. ದಿನದಿಂದ ದಿನಕ್ಕೆ ಅನಾರೋಗ್ಯ ಹದಗೆಟ್ಟು ಉಸಿರಾಟ ಸಮಸ್ಯೆ ಉಂಟಾಗಿ ಶ್ವೇತಾ(24) ಮನೆಯಲ್ಲೇ ಮೃತಪಟ್ಟಿದ್ದಾಳೆ. ತಂಗಿ ಸಾವಿನ ಬಗ್ಗೆ ಯಾರಿಗೂ ತಿಳಿಸದೆ ಶವದ ಜತೆಯಲ್ಲೇ ಅಕ್ಕ ನಾಲ್ಕು ದಿನ ಕಳೆದಿದ್ದಾಳೆ.
ಶವ ಕೊಳೆಯಲಾರಂಭಿಸಿ ದುರ್ವಾಸನೆ ಬೀರುತ್ತಿದ್ದರೂ ಅಕ್ಕ ಯಾರಿಗೂ ಹೇಳಿಲ್ಲ. ಅಕ್ಕ-ಪಕ್ಕದ ಮನೆಯವರು ದುರ್ವಾಸನೆ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಮನೆಯ ಒಳಗೆ ಹೋಗಿ ಪರಿಶೀಲಿಸದಾಗ ಶ್ವೇತಾ ಶವ ಕಂಡು ಬಂದಿದೆ. ಅಕ್ಕ ಸ್ವಾತಿಯನ್ನು ವಿಚಾರಣೆ ನಡೆಸಿದ್ದು, ತಂಗಿ ಅನಾರೋಗ್ಯದಿಂದ ಸಾವನ್ನಪ್ಪಿರುವುದು ಗೊತ್ತಗಿದೆ. ಕೊಳೆತ ದೇಹವನ್ನು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಸ್ವಾತಿ ಮಾನಸಿಕ ರೋಗದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.
ಕೆಲ ವರ್ಷಗಳ ಹಿಂದೆಯೇ ಸ್ವಾತಿ ಮತ್ತು ಶ್ವೇತಾರ ತಾಯಿ ಮತ್ತು ತಂದೆ ಇಬ್ಬರೂ ಮೃತಪಟ್ಟಿದ್ದಾರೆ. ಇಬ್ಬರು ಅಜ್ಜಿಯಂದಿರ ಆಶ್ರಯದಲ್ಲೇ ಸಹೋದರಿಯರು ಬೆಳೆದಿದ್ದು, ಇತ್ತೀಚಿಗೆ ಅಜ್ಜಿಂದಿರೂ ಮೃತಪಟ್ಟಿದ್ದಾರೆ. ಅಜ್ಜಿಯಂದಿರು ಸತ್ತಾಗಲೂ ಎರಡ್ಮೂರು ದಿನ ಅಕ್ಕ-ತಂಗಿ ಯಾರಿಗೂ ವಿಷಯ ಹೇಳಿರಲಿಲ್ಲವಂತೆ.
ನಾನು 4 ತಿಂಗಳ ಗರ್ಭಿಣಿ.. ಪ್ಲೀಸ್​ ನೀವೆಲ್ಲ ನನಗೊಂದು ಸಹಾಯ​ ಮಾಡಿ… ಮಗಳ ಸಾವಿನ ನೋವಲ್ಲೂ ಅಮೃತಾ ಮನವಿ

ಶಿಕ್ಷಕಿಗೆ ಒಳ ಉಡುಪು ಗಿಫ್ಟ್​ ಕೊಟ್ಟು ಸುತ್ತಾಡೋಕೆ ಹೊರ ಕರೆದ ಮನೆ ಮಾಲೀಕ… ಒಲ್ಲೆ ಎಂದಾಕೆಗೆ ಕ್ವಾಟ್ಲೆ ಶುರು…

ದೇವನಹಳ್ಳಿಯ ಬಾಡಿಗೆ ಮನೇಲಿ ಗೃಹಿಣಿ ಜತೆ ಯುವಕ ಆತ್ಮಹತ್ಯೆ: ಪ್ರಕರಣ ಬೆನ್ನಟ್ಟಿದ ಪೊಲೀಸರಿಗೆ ಬಯಲಾಯ್ತು ಭಯಾನಕ ರಹಸ್ಯ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:10 − 2 =
Remember me
