ನವದೆಹಲಿ:ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಬಂದ ಪೊಲೀಸ್​ ಪೇದೆಯೊಬ್ಬ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಜೊಮಾಟೊ ಡೆಲಿವರಿ ಬಾಯ್​ ಸ್ಥಳದಲ್ಲೇ ಮೃತಪಟ್ಟ ಘಟನೆ ದೆಹಲಿಯ ರೋಹಿಣಿಯ ಬುಧ್ ವಿಹಾರ್ ಪ್ರದೇಶದಲ್ಲಿ ಸಂಭವಿಸಿದೆ.
38 ವರ್ಷದ ಸಲೀಲ್ ತ್ರಿಪಾಠಿ ಮೃತ ದುರ್ದೈವಿ. ಶನಿವಾರ ರಾತ್ರಿ ಗ್ರಾಹಕರಿಗೆ ಊಟ ತಲುಪಿಸಲು ಸಲೀಲ್​ ತ್ರಿಪಾಟಿ ಬೈಕ್​ನಲ್ಲಿ ತೆರಳುತ್ತಿದ್ದರು. ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿಕೊಂಡು ಮಾರ್ಗಮಧ್ಯೆ ಜವರಾಯನಂತೆ ಬಂದ ರೋಹಿಣಿಯ ಉತ್ತರ ಪೊಲೀಸ್ ಠಾಣೆ ಪೇದೆ ಮಹೇಂದ್ರ, ಬೈಕ್​ಗೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಬೈಕ್​ನಿಂದ ಹಾರಿ ರಸ್ತೆ ಡಿವೈಡರ್​ ಮೇಲೆ ಬಿದ್ದ ಜೊಮಾಟೊ ಡೆಲಿವರಿ ಬಾಯ್​, ತೀವ್ರ ರಕ್ತಸ್ವಾವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದರು.
ಸಲೀಲ್ ತ್ರಿಪಾಠಿ ಅವರ ತಂದೆ ಕಳೆದ ವರ್ಷದ ಕರೊನಾ ಸೋಂಕಿಗೆ ಬಲಿಯಾಗಿದ್ದರು. ಮನೆಗೆ ಸಲೀಲ್​ ತ್ರಿಪಾಠಿಯೇ ಆಧಾರಸ್ತಂಭವಾಗಿದ್ದರು. ಇದೀಗ ಪೊಲೀಸಪ್ಪನ ಕುಡಿತಕ್ಕೆ ಸಲೀಲ್​ ಕೂಡ ಬಲಿಯಾಗಿದ್ದು, ಮೃತನ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಆರೋಪಿ ಮಹೇಂದ್ರನನ್ನು ಬಂಧಿಸಲಾಗಿದೆ ಎಂದು ಡಿಸಿಪಿ ಪ್ರಣವ್ ತಾಯಲ್ ತಿಳಿಸಿದ್ದಾರೆ.
ಅದು ನಮ್ಮಿಬ್ಬರ ಕರುಳ ಬಳ್ಳಿ ಜಗಳ, ಅಕ್ಕನ ಮಗಳೋ- ಮಾವನ ಮಗನೋ ಎಂಬಂತೆ ಜಗಳ ಆಗಿದೆ ಅಷ್ಟೇ…

ಅದು ನಮ್ಮಿಬ್ಬರ ಕರುಳ ಬಳ್ಳಿ ಜಗಳ, ಅಕ್ಕನ ಮಗಳೋ- ಮಾವನ ಮಗನೋ ಎಂಬಂತೆ ಜಗಳ ಆಗಿದೆ ಅಷ್ಟೇ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + eighteen =
Remember me
