ಭೋಪಾಲ್​:ಕಾಮುಕರ ಕಣ್ಣಿನಿಂದ ಕೇವಲ ಯುವತಿಯರಷ್ಟೇ ಅಲ್ಲ, ಪುಟ್ಟ ಬಾಲಕಿಯರು, ವೃದ್ಧೆಯರೂ ಕೂಡ ಸುರಕ್ಷಿತರಲ್ಲ ಎನ್ನುವುದು ಪದೇಪದೆ ಸಾಬೀತಾಗುತ್ತಲೇ ಇದೆ. ಅದಕ್ಕೆ ಸಾಕ್ಷಿಯೆನ್ನುವಂತೆ ಮಧ್ಯಪ್ರದೇಶದ ವಿದೀಶ ಜಿಲ್ಲೆಯ ಒಲ್ಲಿಜಾ ಗ್ರಾಮದಲ್ಲಿ ಕೃತ್ಯವೊಂದು ನಡೆದಿದೆ.
ಇದನ್ನೂ ಓದಿ:ಕುಡಿದುಬಂದು ಅಪ್ಪ ನನ್ನನ್ನು ಹೊಡೆಯುತ್ತಿದ್ದ… ಅತ್ಯಾಚಾರ ಮಾಡುತ್ತಿದ್ದ…. 9ರ ಬಾಲೆಯ ಹೇಳಿಕೆ
ಆಕೆ 70 ವರ್ಷದ ವೃದ್ಧೆ. ತನ್ನ ಮಕ್ಕಳು ಗೇಣಿಗೆ ತೆಗೆದುಕೊಂಡಿದ್ದ ಜಮೀನಿನಲ್ಲಿ ಬೆಳೆ ಬೆಳೆಯುವ ಹುಮ್ಮಸ್ಸಿನಲ್ಲಿದ್ದ ಆಕೆ, ಇತ್ತೀಚೆಗೆ ಜಮೀನಿಗೆ ಹೆಚ್ಚಾಗಿ ಭೇಟಿ ಕೊಡುತ್ತಿದ್ದಳು. ಕೆಲ ದಿನಗಳಲ್ಲಿ ಬಿತ್ತನೆ ಮಾಡಬೇಕಿದ್ದ ಹಿನ್ನೆಲೆಯಲ್ಲಿ ಹೊಲಕ್ಕೆ ನೀರು ಹಾಯಿಸುವ ಕೆಲಸ ಮಾಡಲಾಗುತ್ತಿತ್ತು. ಅದರ ಮೇಲುಸ್ತುವಾರಿಯನ್ನು ಆಕೆಯೇ ಹೊತ್ತು ನಡೆಸುತ್ತಿದ್ದಳು. ಆದರೆ ಬುಧವಾರ ಇದೇ ಕೆಲಸಕ್ಕೆಂದು ಹೊಲಕ್ಕೆ ಹೊರಟ ವೃದ್ಧೆ ದುರಂತ ಅಂತ್ಯ ಕಂಡಿದ್ದಾಳೆ.
ಯಾರೋ ದುಷ್ಕರ್ಮಿಗಳು ವೃದ್ಧೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಆಕೆಯ ಬಾಯಿಗೆ ಮಣ್ಣು ತುಂಬಿದ್ದಾರೆ. ಗುಪ್ತಾಂಗಕ್ಕೆ ಕೋಲು ಚುಚ್ಚಿದ್ದಾರೆ. ಕೊನೆಗೆ ಆಕೆಯ ಉಸಿರನ್ನೇ ನಿಲ್ಲಿಸಿ ಓಡಿ ಹೋಗಿದ್ದಾರೆ.
ಇದನ್ನೂ ಓದಿ:ಮದ್ವೆಗೆ ಹುಡುಗಿ ಸಿಕ್ಕಿಲ್ಲ, ಸಿಕ್ಕೋಳೂ ಒಪ್ಲಿಲ್ಲವೆಂದು ರಾಯಭಾರಿ ಕಚೇರಿಗೆ ಬಾಂಬ್​ ಹಾಕೋ ಪ್ಲ್ಯಾನ್​ ಮಾಡೋದಾ?
ನಗ್ನವಾಗಿದ್ದ ದೇಹವನ್ನು ಕಂಡ ಸ್ಥಳೀಯರು ಈ ವಿಷಯವನ್ನು ಪೊಲೀಸರಿಗೆ ಮತ್ತು ಆಕೆಯ ಮನೆಯವರಿಗೆ ತಿಳಿಸಿದ್ದಾರೆ. ಸದ್ಯ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಅಲ್ಲಿನ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಮನೆಯಿಂದ ಹೊರಗೆ ಬರಲು ಒಬ್ಬರಿಗೆ ಮಾತ್ರ ಅವಕಾಶ; ಅತ್ಯಂತ ಕಠಿಣ ಲಾಕ್​ಡೌನ್​ ಜಾರಿ

87 ಗಂಟೆಯಲ್ಲಿ ಏಳು ಖಂಡದ 208 ದೇಶ ಸುತ್ತಾಡಿದ ಯುವತಿ; ಎಲ್ಲವೂ ನನ್ನ ದೇಶಕ್ಕಾಗಿ ಎಂದ ಸಾಧಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 11 =
Remember me
