ನವದೆಹಲಿ:ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಎಲ್ಲ ವಲಯ ಮತ್ತು ಪ್ರಾದೇಶಿಕ ಕಚೇರಿಗಳಿಗೆ ಹೊಸ ಸೂಚನೆಯನ್ನು ಜಾರಿಗೆ ತರಲು ಸುತ್ತೋಲೆ ಹೊರಡಿಸಿದೆ. ಈ ನಿಟ್ಟಿನಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡುವಂತೆ ಆಂತರಿಕ ವ್ಯವಸ್ಥೆ ವಿಭಾಗಕ್ಕೂ ನಿರ್ದೇಶನ ನೀಡಿದೆ. ಈ ಸೂಚನೆಯಲ್ಲಿ ಜನ್ಮ ದಿನಾಂಕಕ್ಕೆ ಪುರಾವೆಯಾಗಿ ಆಧಾರ್​ ಕಾರ್ಡ್​ಗೆ ಮಾನ್ಯತೆ ನೀಡುವುದಿಲ್ಲ ಎಂದು ಹೇಳಿದೆ.
ಇಪಿಎಫ್‌ಒ, ಸುತ್ತೋಲೆ ಸಂಖ್ಯೆ. ಡಬ್ಲ್ಯುಎಸ್‌ಯು/2024/1/ಯುಐಡಿಎಐ ಮ್ಯಾಟರ್/4090ರ ಪ್ರಕಾರ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಹೊರಡಿಸಿದ ನಿರ್ದೇಶನದಂತೆ ಕೇಂದ್ರ ಭವಿಷ್ಯ ನಿಧಿ ಆಯುಕ್ತರ ಅನುಮೋದನೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಆಧಾರ್ ಕಾರ್ಡ್​ ಒಂದು ಅನನ್ಯ ಗುರುತು ಪತ್ರವಾಗಿದೆ. ಆದ್ದರಿಂದ ಇದನ್ನು ಗುರುತು ಮತ್ತು ವಿಳಾಸದ ಪುರಾವೆಯಾಗಿ ಬಳಸಬಹುದು ಎಂದು ಹೇಳಿದೆ. ಆದರೆ, ಆಧಾರ್ ಕಾಯ್ದೆ, 2016 ರ ಪ್ರಕಾರ ಜನ್ಮ ದಿನಾಂಕದ ಪುರಾವೆಯಾಗಿ ಆಧಾರ್ ಅನ್ನು ಗುರುತಿಸಲಾಗಿಲ್ಲ ಎಂದು ಅದು ಹೇಳಿದೆ.
“ಆಧಾರ್ ಒಬ್ಬ ನಿವಾಸಿಗೆ ಅವನ/ಅವಳ ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಸಲ್ಲಿಸುವ ಮೂಲಕ ದಾಖಲಾತಿ ಪ್ರಕ್ರಿಯೆಗೆ ಒಳಗಾದ ನಂತರ ನೀಡಲಾದ ಅನನ್ಯ 12 ಅಂಕಿಯ ಐಡಿ (ಗುರುತುಪತ್ರ) ಎಂದು ನಮೂದಿಸುವುದು ಸೂಕ್ತವಾಗಿದೆ. ದಾಖಲಾತಿ/ಅಪ್‌ಡೇಟ್ ಸಮಯದಲ್ಲಿ, ಯುಐಡಿಎಐ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಆಧಾರ್ ದಾಖಲಾತಿಗಾಗಿ ಪೋಷಕ ದಾಖಲೆಗಳ ಪಟ್ಟಿಯಡಿಯಲ್ಲಿ ನಿರ್ದಿಷ್ಟಪಡಿಸಿದಂತೆ, ಅವರು ಸಲ್ಲಿಸಿದ ದಾಖಲೆಗಳ ಆಧಾರದ ಮೇಲೆ, ನಿವಾಸಿಗಳು ಕ್ಲೈಮ್ ಮಾಡಿದ ಜ್ಮ ದಿನಾಂಕವನ್ನು ಯುಐಡಿಎಐ ದಾಖಲಿಸುತ್ತದೆ” ಎಂದು ಯುಐಡಿಎಐ ಹೇಳಿದೆ.

ರೂ. 362 ಕೋಟಿಯ ಆರ್ಡರ್​: 1,025.56% ಲಾಭ ನೀಡಿದ ಕೇಬಲ್​ ಕಂಪನಿಯ ಷೇರು ಡಬಲ್​ ಆಗುವ ನಿರೀಕ್ಷೆ

ನೀವು ಕೇವಲ 2.33 ಲಕ್ಷ ರೂ. ಹೂಡಿಕೆ ಮಾಡಿದ್ದರೆ 3 ವರ್ಷದಲ್ಲೇ ಕೋಟ್ಯಧೀಶರಾಗುತ್ತಿದ್ದೀರಿ: ಈ ಪೆನ್ನಿ ಸ್ಟಾಕ್ ಯಾವುದು ಗೊತ್ತೆ?

400% ಲಾಭ ಕೊಟ್ಟ ಷೇರಿನಲ್ಲಿ ನೀವೂ ಲಾಭ ಮಾಡಿಕೊಳ್ಳಬಹುದು: ಸಣ್ಣ ಹೂಡಿಕೆದಾರರ ಅನುಕೂಲಕ್ಕಾಗಿ ಸ್ಟಾಕ್​ ಸ್ಪ್ಲಿಟ್​

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × five =
Remember me
