ನವದೆಹಲಿ:ಭವಿಷ್ಯ ನಿಧಿ ಚಂದಾದಾರರ ಜನ್ಮ ದಿನಾಂಕ ಸರಿಪಡಿಸಲು ಆಧಾರ್ ಕಾರ್ಡ್ ಅನ್ನು ಪುರಾವೆಯಾಗಿ ಆನ್​ಲೈನ್​ನಲ್ಲಿ ಅಂಗೀಕರಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್​ಒ) ಒಪ್ಪಿದೆ.
ಕೊವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ, ಆನ್​ಲೈನ್ ಸೇವೆಗಳು ಚಂದಾದಾರರಿಗೆ ಸೂಕ್ತವಾಗಿ ಲಭ್ಯವಾಗುವಂತೆ ಮಾಡಲು ಇಪಿಎಫ್​ಒ ಪರಿಷ್ಕೃತ ನಿಯಮಗಳನ್ನು ಪ್ರಕಟಿಸಿದೆ. ಜನ್ಮ ದಿನಾಂಕದಲ್ಲಿ 3 ವರ್ಷಕ್ಕಿಂತ ಕಡಿಮೆ ವ್ಯತ್ಯಾಸವಿರುವ ಪ್ರಕರಣಗಳಲ್ಲಿ ಮಾತ್ರ ಆಧಾರ್ ಒಪ್ಪಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಲಾಕ್​ಡೌನ್ ಕಾರಣದಿಂದಾಗಿ ಸಮಸ್ಯೆಯಲ್ಲಿರುವ ಕಾರ್ವಿುಕರು 3 ತಿಂಗಳ ಮೂಲವೇತನ ಹಾಗೂ ತುಟ್ಟಿಭತ್ಯೆಯಷ್ಟು ಹಣವನ್ನು ಹಿಂದಿರುಗಿಸಲಾಗದ ಮುಂಗಡವಾಗಿ ಪಡೆಯಲು ಇಪಿಎಫ್​ಒ ಅವಕಾಶ ಕಲ್ಪಿಸಿದೆ. ಕೆವೈಸಿ ಸರಿಯಿರುವ ಚಂದಾದರರಿಗೆ ಮಾತ್ರವೇ ಈ ಸೌಲಭ್ಯ ಲಭ್ಯ.
ಹೆಚ್ಚುವರಿ ಗಡುವು
ಜೀವ ವಿಮಾ ಪಾಲಿಸಿಗಳ ಕಂತು ಪಾವತಿಸಲು ಹೆಚ್ಚುವರಿ 30 ದಿನಗಳ ಅವಧಿ ನೀಡಲಾಗಿದೆ. ಈಗಾಗಲೇ ಏಪ್ರಿಲ್ 21ರವರೆಗೆ 30 ದಿನಗಳ ವಿನಾಯಿತಿ ಅವಧಿ ಇದ್ದು, ಇದರ ಜತೆಗೆ ಹೆಚ್ಚುವರಿ ಗಡುವು ಸೇರೊ ಮೇ.31ರವರೆಗೆ ಪಾವತಿಗೆ ಅವಕಾಶ ಇದೆ ಎಂದು ಐಆರ್​ಡಿಎಐ ತಿಳಿಸಿದೆ.
ಇಂಡಿಯನ್​ ಓವರ್​ಸೀಸ್​ ಬ್ಯಾಂಕ್​ನಲ್ಲಿ 24 ಸೆಕ್ಯೂರಿಟಿ ಗಾರ್ಡ್​ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
