ನವದೆಹಲಿ:ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆಯ ಕುರಿತ ನಿಯಮವನ್ನು ಕೇಂದ್ರ ಸರ್ಕಾರ ಶೀಘ್ರ ಪ್ರಕಟಿಸಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಹೇಳಿದ್ದಾರೆ. ವೋಟರ್ ಐಡಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಮತದಾರರಿಗೆ ಐಚ್ಛಿಕ. ಆದರೆ, ಯಾರು ಜೋಡಣೆ ಮಾಡಲು ಬಯಸುವುದಿಲ್ಲವೋ ಅಂತಹವರು ಅದಕ್ಕೆ ಪ್ರಬಲ ಕಾರಣ ನೀಡಬೇಕಾಗುತ್ತದೆ ಎಂದು ಸ್ಪಷ್ಟ ಪಡಿಸಿದ್ದಾರೆ. ಆಧಾರ್ ಕಾರ್ಡ್ ಇನ್ನು ದೊರಕದೆ ಇರುವುದು ಅಥವಾ ಆಧಾರ್​ಗೆ ಅರ್ಜಿ ಸಲ್ಲಿಸಿಲ್ಲದಿರುವುದೂ ಕಾರಣ ಆಗಬಹುದು ಎಂದಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ (ಸಿವಿಸಿ) ಹುದ್ದೆಯಿಂದ ಶನಿವಾರ ನಿರ್ಗಮಿಸುವ ಮುನ್ನ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ಆಧಾರ್ ಸಂಖ್ಯೆ ಜೋಡಣೆಗೆ ಸಂಬಂಧಿಸಿದ ಕರಡು ನಿಯಮಾವಳಿಯನ್ನು ನಾವು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಕಾನೂನು ಸಚಿವಾಲಯ ಇದನ್ನು ಪರಿಶೀಲಿಸಿ ಶೀಘ್ರದಲ್ಲೇ ಪ್ರಕಟಿಸಲಿದೆ ಎಂದಿದ್ದಾರೆ. ಚುನಾವಣಾ ಯಾದಿಗೆ ಮತದಾರರ ಆಧಾರ್ ಸಂಖ್ಯೆ ಜೋಡಣೆ ತಮ್ಮ ಅವಧಿಯಲ್ಲಿಯಾದ ಮಹತ್ತರ ಸುಧಾರಣೆ. ಈ ಪ್ರಕ್ರಿಯೆಯಿಂದ ಚುನಾವಣಾ ಪಟ್ಟಿಯು ನಕಲಿ ಮತದಾರರು, ಎರಡು ಕಡೆ ಹೆಸರಿರುವುದರಿಂದ ಮುಕ್ತವಾಗಿ ಪರಿಶುದ್ಧವಾಗಲಿದೆ ಮತ್ತು ಹೆಚ್ಚು ದೃಢವಾಗಲಿದೆ ಎಂದು ಹೇಳಿದ್ದಾರೆ. ಚುನಾವಣಾ ಪಟ್ಟಿಗೆ ಹೆಸರು ಸೇರಿಸಲು ಈ ಮೊದಲು ವರ್ಷಕ್ಕೆ ಒಂದು ಸಾರಿ (ಕಟ್ ಆಫ್ ಡೇಟ್ ಜನವರಿ 1) ಅವಕಾಶ ಇತ್ತು. ಇದನ್ನು ವರ್ಷಕ್ಕೆ ನಾಲ್ಕು ಸಾರಿ ಮಾಡಲಾಯಿತು. ಈ ಸುಧಾರಣೆ ಕಳೆದ 20 ವರ್ಷದಿಂದ ಬಾಕಿ ಉಳಿದತ್ತು. 18 ವರ್ಷ ತುಂಬಿದವರು ಆಧಾರ್ ಸಂಖ್ಯೆಯ ಮೂಲಕ ಚುನಾವಣಾ ಯಾದಿಗೆ ಸೇರ್ಪಡೆ ಆಗಬಹುದು ಎಂದು ಚಂದ್ರ ತಿಳಿಸಿದ್ದಾರೆ.
ಮತದಾರರ ಬಗ್ಗೆ ನಮಗೆ ಸ್ಪಷ್ಟವಾಗಿ ಗೊತ್ತಿದ್ದರೆ ಇನ್ನಷ್ಟು ಹೆಚ್ಚಿನ ಸೇವೆ ನೀಡಲು ಸಾಧ್ಯ. ಮತದಾರರ ದೂರವಾಣಿ ಸಂಖ್ಯೆಗೆ ನೇರವಾಗಿ ಅವರ ಮತಗಟ್ಟೆ ವಿವರ ಮತ್ತು ಇನ್ನಿತರ ಮಾಹಿತಿಯನ್ನು ರವಾನಿಸಬಹುದು. ಇದಕ್ಕಾಗಿ ಮತದಾರರ ನಿಜಾಂಶ ಗೊತ್ತಾಗಬೇಕು. ಇದಕ್ಕೆ ಆಧಾರ್ ಲಿಂಕ್ ಅಗತ್ಯ.
|ಸುಶೀಲ್ ಚಂದ್ರಮುಖ್ಯ ಚುನಾವಣಾ ಆಯುಕ್ತ
ಮತದಾರರ ಪಟ್ಟಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ಮಸೂದೆಯು ಕಳೆದ ವರ್ಷ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಯಿತು. ಇದರಿಂದ ಪ್ರಮುಖವಾಗಿ ನಾಲ್ಕು ಸುಧಾರಣೆಯನ್ನು ತರುವ ಆಶಯವನ್ನು ಸರ್ಕಾರ ವ್ಯಕ್ತಪಡಿಸಿತು. ಆಧಾರ್ ಸಂಖ್ಯೆ ಜೋಡಿಸುವುದು ಕಡ್ಡಾಯವಲ್ಲ, ಐಚ್ಛಿಕ. ಆದರೆ ಹೊಸದಾಗಿ ಮತದಾರರ ಪಟ್ಟಿ ಸೇರುವ 18 ವರ್ಷದವರು ಆಧಾರ್ ಸಂಖ್ಯೆ ನೀಡಿಯೇ ನೋಂದಣಿ ಮಾಡಿಕೊಳ್ಳಬೇಕು. ವರ್ಷದಲ್ಲಿ ಒಮ್ಮೆ ಮಾತ್ರ ಇದ್ದ ಈ ನೋಂದಣಿಯನ್ನು ನಾಲ್ಕು ಬಾರಿಗೆ ಹೆಚ್ಚಿಸಲಾಯಿತು. (ಜನವರಿ 1, ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1ಕ್ಕೆ ಕಟ್ ಆಫ್ ಡೇಟ್). ಇದಕ್ಕೆ ಅಗತ್ಯವಾದ ತಿದ್ದುಪಡಿಯನ್ನು ಪ್ರಜಾಪ್ರತಿನಿಧಿ ಕಾಯ್ದೆಗೆ ತರುವುದಾಗಿ ಹೇಳಿತು. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ನಿಯ ಪರವಾಗಿ ಪತಿಯು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಲು ಅವಕಾಶ ಕಲ್ಪಿಸಿತು. ಯಾವುದೇ ಕಟ್ಟಡವನ್ನು ಮತಗಟ್ಟೆಯನ್ನಾಗಿ ಆಯ್ಕೆ ಮಾಡುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡುವ ಅಂಶ ಈ ಮಸೂದೆಯಲ್ಲಿದೆ. ಸಾಮಾನ್ಯವಾಗಿ ಆಯೋಗ ಶಾಲಾ-ಕಾಲೇಜುಗಳಲ್ಲಿ ಮತಗಟ್ಟೆಯನ್ನು ತೆರೆಯುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 11 =
Remember me
