ನವದೆಹಲಿ:ಐಎಎಸ್​ ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್ ಮೋಸದಾಟದ​ ಬೆನ್ನಲ್ಲೇ ಮಹತ್ವದ ಬೆಳವಣಿಗೆಯೊಂದು ಮುನ್ನೆಲೆಗೆ ಬಂದಿದ್ದು, ಯುಪಿಎಸ್ಸಿ ಪರೀಕ್ಷೆಗಳ ನೋಂದಣಿ ಸಮಯದಲ್ಲಿ ಸ್ವಯಂಪ್ರೇರಿತ ಆಧಾರದ ಮೇಲೆ ಅಭ್ಯರ್ಥಿಗಳ ಗುರುತನ್ನು ಪರಿಶೀಲಿಸಲು ಆಧಾರ್ ಆಧಾರಿತ ದೃಢೀಕರಣವನ್ನು ಜಾರಿಗೆ ತರಲು ಇದೀಗ ಕೇಂದ್ರ ಸರ್ಕಾರವು ಕೇಂದ್ರ ಲೋಕಸೇವಾ ಆಯೋಗಕ್ಕೆ (UPSC) ವಿಶೇಷ ಅಧಿಕಾರ ಕೊಟ್ಟಿದೆ. ನೋಂದಣಿ ಪ್ರಕ್ರಿಯೆ ಹಾಗೂ ಪರೀಕ್ಷೆಗಳು ಮತ್ತು ನೇಮಕಾತಿಯ ವಿವಿಧ ಹಂತಗಳಲ್ಲಿ ಜಾರಿಗೊಳಿಸಿರುವ ಹೊಸ ಕ್ರಮ ಇದಾಗಿದೆ.
ಇದನ್ನೂ ಓದಿ:ಹಾವನ್ನು ಮುದ್ದಿಸಿದ ಎಮ್ಮೆ! ಪ್ರೀತಿಗೆ ಮರುಗಿತು ವಿಷಕಾರಿ ಬುಸ್​ ಬುಸ್​ ನಾಗಪ್ಪ
ಈ ನಿರ್ಧಾರವು ಟ್ರೈನಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಪೂಜಾ ಖೇಡ್ಕರ್ ವಿರುದ್ಧದ ಪ್ರಕರಣ ಹಾಗೂ ಇತ್ತೀಚಿನ ಕ್ರಮಗಳನ್ನು ಅನುಸರಿಸಿಯೇ ಇದನ್ನು ಜಾರಿಗೆ ತರಲಾಗಿದೆ. ಕಳೆದ ತಿಂಗಳು ಪೂಜಾ ತನ್ನ ಅರ್ಹತೆಗಿಂತ ಹೆಚ್ಚಿನ ಪ್ರಯತ್ನಗಳನ್ನು ನಾಗರಿಕ ಸೇವಾ ಪರೀಕ್ಷೆಯಲ್ಲಿ ವಂಚನೆ ಮೂಲಕ ಪಡೆದ ಕಾರಣ ಅವರ ತಾತ್ಕಾಲಿಕ ಉಮೇದುವಾರಿಕೆಯನ್ನು ರದ್ದುಗೊಳಿಸಲಾಯಿತು. ಅಂಗವೈಕಲ್ಯ ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ – ನಾನ್-ಕ್ರೀಮಿ ಲೇಯರ್) ಕೋಟಾಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪದಡಿ ಆಕೆಯನ್ನು ವರ್ಗಾವಣೆ ಮಾಡಿ, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲಾಯಿತು.
ಸಿಬ್ಬಂದಿ ಸಚಿವಾಲಯವು ಹೊರಡಿಸಿದ ಅಧಿಸೂಚನೆಯಲ್ಲಿ, “ಯುಪಿಎಸ್‌ಸಿಯು ಸ್ವಯಂಪ್ರೇರಿತ ಆಧಾರದ ಮೇಲೆ ಆಧಾರ್ ದೃಢೀಕರಣವನ್ನು ಮಾಡಲು ಅನುಮತಿಸಲಾಗಿದೆ. ‘ಒಂದು ಬಾರಿ ನೋಂದಣಿ’ ಅಂದರೆ ಒನ್​ ಟೈಮ್​ ರಿಜಿಸ್ಟ್ರೇಷನ್​ ಪೋರ್ಟಲ್‌ನ ನೋಂದಣಿ ಸಮಯದಲ್ಲಿ ಅಭ್ಯರ್ಥಿಗಳ ಗುರುತಿನ ಪರಿಶೀಲನೆ ಮತ್ತು ಪರೀಕ್ಷೆ/ನೇಮಕಾತಿ ಪರೀಕ್ಷೆಯ ವಿವಿಧ ಹಂತಗಳು, ಹೌದು/ಇಲ್ಲ ಅಥವಾ/ಮತ್ತು ಇ-ಕೆವೈಸಿ ದೃಢೀಕರಣ ಸೌಲಭ್ಯವನ್ನು ಬಳಸುವುದು” ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ.
ಇದನ್ನೂ ಓದಿ:ಸೆಂಟ್ರಲ್ ಜೈಲ್​ಗೆ ದರ್ಶನ್​ ಎಂಟ್ರಿ! ‘ದಾಸ’ನಿಗೆ ಶುರುವಾಯ್ತು ಬಳ್ಳಾರಿ ಸೆರೆವಾಸ
UIDAI ನೀಡುವ 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿರುವ ಆಧಾರ್ ವ್ಯವಸ್ಥೆಯು ಭಾರತೀಯ ನಾಗರಿಕರ ಬಯೋಮೆಟ್ರಿಕ್ ಮತ್ತು ಜನಸಂಖ್ಯಾ ಡೇಟಾವನ್ನು ಆಧರಿಸಿದೆ. ಈ ಹೊಸ ಪರಿಶೀಲನಾ ವಿಧಾನವು ಪರೀಕ್ಷಾ ಪ್ರಕ್ರಿಯೆಯ ಸಮಗ್ರತೆಯನ್ನು ಹೆಚ್ಚಿಸುವ ನಿರೀಕ್ಷೆಯನ್ನು ಹೊಂದಿದೆ. ಈ ಹಿಂದೆ ಪರೀಕ್ಷೆಗಳಲ್ಲಿ ವಂಚನೆಯನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಂಡಿದ್ದ ಯುಪಿಎಸ್ಸಿಗೆ ಇದೀಗ ಆಧಾರ್ ಆಧಾರಿತ ದೃಢೀಕರಣ ಮತ್ತಷ್ಟು ಬಲ ತುಂಬಲಿದೆ ಎಂಬ ಭರವಸೆ ಮೂಡಿದೆ,(ಏಜೆನ್ಸೀಸ್).
ಮಧ್ಯರಾತ್ರಿ ತಾಯಿ ಜತೆಗೆ ಮಲಗಿದ್ರೂ ಬಿಡಲಿಲ್ಲ! ಆಘಾತಕಾರಿಯಾಗಿದೆ ನಟಿ ಶ್ರೀದೇವಿಕಾ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
