ನವದೆಹಲಿ:ದೇಶಾದ್ಯಂತ ಭಾರೀ ಚರ್ಚೆಯಾಗಿದ್ದ ಶ್ರದ್ಧಾ ವಾಕರ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತಂಕಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಶ್ರದ್ಧಾ ಜೊತೆ ಲಿವ್-ಇನ್ ಸಂಬಂಧದಲ್ಲಿದ್ದ ಅಫ್ತಾಬ್​ ಪೂನವಾಲ, ಆಕೆಯನ್ನು ಕೊಲೆ ಮಾಡಿ ದೇಹವನ್ನು ಗರಗಸದಿಂದ ತುಂಡು ತುಂಡು ಮಾಡಿದ್ದಾನೆ ಎಂದು ಆಕೆಯ ಮೂಳೆಗಳ ಶವಪರೀಕ್ಷೆ ವೇಳೆ ಬಹಿರಂಗವಾಗಿದೆ.
ಶ್ರದ್ಧಾಳ 13 ಮೂಳೆ ಚೂರುಗಳನ್ನು ದೆಹಲಿ ಪೊಲೀಸರು ಮೆಹರೌಲಿ ಅರಣ್ಯ ಪ್ರದೇಶದಲ್ಲಿ ಪತ್ತೆ ಹಚ್ಚಿದ್ದರು. ಶ್ರದ್ಧಾಳನ್ನು ಉಸಿರುಗಟ್ಟಿಸಿ ಸಾಯಿಸಿ ಮೃತದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಫ್ಲಾಟ್​ನಲ್ಲಿ ಫ್ರಿಡ್ಜ್​ನಲ್ಲಿಟ್ಟಿದ್ದ. ನಂತರ ಹಲವು ದಿನಗಳ ಕಾಲ ಅವುಗಳನ್ನು ಕಾಡಿನಲ್ಲಿ ಎಸೆದಿದ್ದ. ಘೋರ ಕೃತ್ಯ ಬೆಳಕಿಗೆ ಬಂದು ಕಿರಾತಕನನ್ನು ಬಂಧಿಸಿದಾಗ ಆತ ಈ ವಿಚಾರ ಬಾಯ್ಬಿಟ್ಟಿದ್ದ. ಕಾಡಿನಲ್ಲಿ ಎಸೆದಿದ್ದ ದೇಹದ ಭಾಗಗಳ ಪತ್ತೆಗೆ ಪೊಲೀಸರು ವ್ಯಾಪಕ ಕಾರ್ಯಾಚರಣೆ ನಡೆಸಿದ್ದರು. ಅರಣ್ಯ ಪ್ರದೇಶದಲ್ಲಿ ದೊರೆತ 13 ಮೂಳೆಗಳಿಂದ ಸಂಗ್ರಹಿಸಿದ ಡಿಎನ್​ಎ ಶ್ರದ್ಧಾಳ ತಂದೆ ವಿಕಾಸ್​ರ ಡಿಎನ್​ಎ ಸ್ಯಾಂಪಲ್​ನೊಂದಿಗೆ ಸರಿಹೊಂದಿತ್ತು. ಅಲ್ಲದೆ, ಫ್ಲ್ಯಾಟ್​ನಲ್ಲಿದ್ದ ರಕ್ತದ ಕಲೆಯು ಸಹ ಹೋಲಿಕೆಯಾಗಿತ್ತು.
ಇದೀಗ ಶ್ರದ್ಧಾಳ ಮೂಳೆಗಳ ಪರೀಕ್ಷೆಯಲ್ಲಿ ಆಕೆಯ ಮೃತದೇಹವನ್ನು ಗರಗಸದಿಂದ ತುಂಡು ಮಾಡಿರುವುದು ಖಚಿತವಾಗಿದೆ. ರಾಷ್ಟ್ರ ರಾಜಧಾನಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್​)ಯಲ್ಲಿ ಮೂಳೆಗಳ ಶವಪರೀಕ್ಷೆ ನಡೆಸಲಾಗಿದೆ.
27 ವರ್ಷದ ಶ್ರದ್ಧಾಳನ್ನು ಮೇ 18ರಂದು ಮೆಹರೌಲಿಯಲ್ಲಿರುವ ಬಾಡಿಗೆ ಫ್ಲ್ಯಾಟ್​ನಲ್ಲಿ ಅಫ್ತಾಬ್​ ಉಸಿರುಗಟ್ಟಿಸಿ ಕೊಂದಿದ್ದ. ಅದಕ್ಕೂ ಮುನ್ನ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಕೊಲೆ ಮಾಡಿದ ಬಳಿಕ ಶ್ರದ್ಧಾಳ ಮೃತದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ಫ್ಲಾಟ್​ನಲ್ಲಿ ಫ್ರಿಡ್ಜ್​ನಲ್ಲಿಟ್ಟಿದ್ದ. ನಂತರ ಹಲವು ದಿನಗಳ ಕಾಲ ಅವುಗಳನ್ನು ಕಾಡಿನಲ್ಲಿ ಎಸೆದಿದ್ದ. ಗರಗಸ ಮತ್ತು ಬ್ಲೇಡ್​ ಅನ್ನು ಶ್ರದ್ಧಾ ಮೃತದೇಹವನ್ನು ತುಂಡು ಮಾಡಲು ಅಫ್ತಾಬ್​ ಬಳಸಿದ್ದಾನೆ ಎಂದು ತಿಳಿದುಬಂದಿದೆ.
ಶ್ರದ್ಧಾ ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?ಅಫ್ತಾಬ್ ಜತೆ ಅಂತರ್​ಧರ್ಮೀಯ ಸಂಬಂಧದ ಹೊಂದಿದ್ದ ಬಗ್ಗೆ ಶ್ರದ್ಧಾ ತಂದೆ ವಿಕಾಸ್​ ವಾಕರ್​ ಅಸಮಾಧಾನಗೊಂಡಿದ್ದರು. ಹೀಗಾಗಿ ಆಕೆಯೊಂದಿಗೆ ಸಂಪರ್ಕ ಕಡಿದುಕೊಂಡಿದ್ದರು. ಶ್ರದ್ಧಾ ಮತ್ತು ಅಫ್ತಾಬ್ ಡೇಟಿಂಗ್ ಅಪ್ಲಿಕೇಶನ್‌ ಮೂಲಕ​ ಭೇಟಿಯಾಗಿದ್ದರು. ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ವರ್ಷ ಮೇ ತಿಂಗಳಲ್ಲಿ ಇಬ್ಬರು ಮುಂಬೈನಿಂದ ದೆಹಲಿಗೆ ಸ್ಥಳಾಂತರಗೊಂಡಿದ್ದರು. ಅದಕ್ಕೂ ಮೊದಲು ಅವರು ಮುಂಬೈ ಬಳಿಯ ತಮ್ಮ ತವರು ವಸಾಯಿಯಲ್ಲಿ ಕೆಲ ತಿಂಗಳು ಒಟ್ಟಿಗೆ ವಾಸಿಸಿದ್ದರು. ಅಕ್ಟೋಬರ್‌ನಲ್ಲಿ ಶ್ರದ್ಧಾ ತಂದೆ ವಿಕಾಸ್​ ಮಹಾರಾಷ್ಟ್ರದ ತಮ್ಮ ಊರಿನ ಪೊಲೀಸ್​ ಠಾಣೆಗೆ ಹೋಗಿ ಮಗಳು ಕಾಣಿಸುತ್ತಿಲ್ಲ ಮತ್ತು ಸಂಪರ್ಕಕ್ಕೂ ಸಿಗುತ್ತಿಲ್ಲ ಅಂತಾ ದೂರು ನೀಡಿದ ಬಳಿಕ ಕ್ರಮೇಣ ಅಪರಾಧ ಬೆಳಕಿಗೆ ಬಂದಿತು.
28ರ ಹರೆಯದ ಅಫ್ತಾಬ್​ ಕಳೆದ ನವೆಂಬರ್‌ನಿಂದಲೂ ನ್ಯಾಯಾಂಗ ಬಂಧನದಲ್ಲಿದ್ದಾನೆ. ದೆಹಲಿ ಪೊಲೀಸರು ಈ ತಿಂಗಳ ಕೊನೆಯಲ್ಲಿ ಪ್ರಕರಣದ ಆರೋಪಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ.(ಏಜೆನ್ಸೀಸ್​)
ಮುಟ್ಟಬಾರದ ಜಾಗದಲ್ಲಿ ಮುಟ್ಟಿದ ಗ್ರಾಹಕನ ವಿರುದ್ಧ ತಿರುಗಿಬಿದ್ದ ಮಹಿಳಾ ಸಿಬ್ಬಂದಿ! ವಿಡಿಯೋ ವೈರಲ್​

64ನೇ ವಯಸ್ಸಿನಲ್ಲಿ ಮೂರನೇ ಮದುವೆ! ಹಿರಿಯ ನಟಿ ಜಯಸುಧಾ ಕೊಟ್ಟ ಸ್ಪಷ್ಟನೆ ಹೀಗಿದೆ…

ಪಿಎಂ ಮತ್ತು ಸಿಎಂ ಓಡಾಡೋ ಜಾಗದಲ್ಲಿ ಸ್ಯಾಂಟ್ರೋ ರವಿಯನ್ನು ಕರೆದೊಯ್ದಿದ್ದಕ್ಕೆ ಮಾಜಿ ಸಿಎಂ ಎಚ್​ಡಿಕೆ ಆಕ್ರೋಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
