ಮುಂಬೈ :ಬಾಲಿವುಡ್​ ನಟ ಆಮೀರ್​ ಖಾನ್​ ಅವರು ನಿನ್ನೆಯಷ್ಟೇ ತಮ್ಮ ಎರಡನೇ ಹೆಂಡತಿ ಕಿರಣ್​ ರಾವ್​ಗೆ ಡೈವೋರ್ಸ್​ ಕೊಟ್ಟು 15 ವರ್ಷದ ದಾಂಪ್ಯಕ್ಕೆ ಅಂತ್ಯ ಹಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗಮನಕ್ಕೆ ಬರುವ ವಿಷಯವೆಂದರೆ ಅವರ ಮೊದಲ ಮದುವೆಯೂ ಕೂಡ ಸಾಗಿದ್ದು ಹದಿನಾರೇ ವರ್ಷ!
ಆಮೀರ್​ ಖಾನ್​ರ ಮೊದಲನೇ ಹೆಂಡತಿ ರೀನಾ ದತ್ತ. ಅವರನ್ನು ಚಿಕ್ಕ ವಯಸ್ಸಲ್ಲೇ ಪ್ರೀತಿಸಿ ಮದುವೆಯಾಗಿದ್ದರು, ಆಮೀರ್​. 1986 ರಲ್ಲಿ ವೈವಾಹಿಕ ಜೀವನ ಆರಂಭಿಸಿದ್ದ ಈ ಜೋಡಿ, 2002 ರಲ್ಲಿ ವಿಚ್ಛೇದನ ಪಡೆದು ಬೇರೆಯಾಗಿದ್ದರು. ಆಮೀರ್​ – ರೀನಾಗೆ ಇಬ್ಬರು ಮಕ್ಕಳು – ಜುನೈದ್​ ಖಾನ್​, ಈರಾ ಖಾನ್.
ಇದನ್ನೂ ಓದಿ:ವಿಚ್ಛೇದನ ಘೋಷಿಸಿದ ಮಾರನೇ ದಿನವೇ ಕಿರಣ್​ ರಾವ್ ಕೈಹಿಡಿದುಕೊಂಡು ಆಮೀರ್ ಖಾನ್ ಹೇಳಿದ್ದೇನು?
ಡಿಸೆಂಬರ್​ 2005 ರಲ್ಲಿ ಆಮೀರ್​ ಖಾನ್​ ಚಲನಚಿತ್ರ ನಿರ್ದೇಶಕಿ ಹಾಗೂ ನಿರ್ಮಾಪಕಿಯಾದ ಕಿರಣ್ ರಾವ್​ರನ್ನು ವಿವಾಹವಾಗಿದರು. 56 ವರ್ಷ ವಯಸ್ಸಾಗಿರುವ ಆಮೀರ್​ ಮತ್ತು 47 ವರ್ಷದ ಕಿರಣ್​ ರಾವ್​​ಗೆ ಆಜಾದ್​ ರಾವ್​ ಖಾನ್ ಎಂಬ ಮಗ ಕೂಡ ಇದ್ದಾನೆ.
ಅಮರಪ್ರೇಮದ ಕಥೆ ಸಾರುವ ‘ಖಯಾಮತ್​ ಸೆ ಖಯಾಮತ್​ ತಕ್​’ ಚಿತ್ರದ ಮೂಲಕ ಬಾಲಿವುಡ್​ನ ಮೆಟ್ಟಿಲೇರಿದ ಆಮೀರ್​ ಅವರ ಎರಡೂ ಮದುವೆಗಳು ಅರ್ಧಕ್ಕೇ ಮುರಿದಿರುವುದು ವಿಪರ್ಯಾಸ.(ಏಜೆನ್ಸೀಸ್)
ಲಸಿಕೆ ಪಡೆಯದ ಜನರು ವೈರಸ್​ ರೂಪಾಂತರ ಹೊಂದುವ ‘ಫ್ಯಾಕ್ಟರಿ’ಗಳು!

‘ಪ್ರೀತ್ಸೆ ಪ್ರೀತ್ಸೆ’ ಅಂತ ಬೆನ್ನುಬಿದ್ದ ಪಾಗಲ್ ಪ್ರೇಮಿ… ಯುವತಿಗೆ ನೀಡುತ್ತಿದ್ದ ಟಾರ್ಚರ್ ಅಷ್ಟಿಷ್ಟಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 10 =
Remember me
