ಪಟ್ನಾ:ಕಾರು ಹಾಗೂ ಬೈಕ್​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ನಟಿ ಹಾಗೂ ಉಗಾಯಕ ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿರುವ ಘಟನೆ ಬಿಹಾರದ ಕೈಮೂರ್ ಜಿಲ್ಲೆಯ ದೇವಕಲಿ ಗ್ರಾಮದ ಬಳಿ ನಡೆದಿದೆ.
ಪಂಚಾಯತ್​-2 ಮೂಲಕ ಖ್ಯಾತಿ ಪಡೆದಿದ್ದ ಭೋಜ್​ಪುರಿ ನಟಿ ಆಂಚಲ್ ತಿವಾರಿ ಹಾಗೂ ಗಾಯಕ ಛೋಟು ಪಾಂಡೆ ಸೇರಿದಂತೆ ನಾಲ್ವರು ಉದಯೋನ್ಮುಖ ತಾರೆಗಳು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಅಕ್ರಮ ಹಣ ವರ್ಗಾವಣೆ; ಎಂಟನೇ ಬಾರಿ ಅರವಿಂದ್​ ಕೇಜ್ರಿವಾಲ್​ಗೆ ಸಮನ್ಸ್​ ಜಾರಿ ಮಾಡಿದ ED
ಘಟನೆ ಕುರಿತು ಪ್ರೆತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಕೈಮೂರ್​ ಜಿಲ್ಲೆಯ ದೇಬಕಲಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 02ರಲ್ಲಿ ಈ ಘಟನೆ ನಡೆದಿದ್ದು, ಮೊದಲು ಕಾರು ಬೈಕ್​ಗೆ​ ಡಿಕ್ಕಿ ಹೊಡೆದಿದೆ. ಹಿಂದಿನಿಂದ ವೇಗವಾಗಿ ಬರುತ್ತಿದ್ದ ಲಾರಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತವಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಗಾಯಕ ಛೋಟು ಪಾಂಡೆ, ನಟಿಯರಾದ ಆಂಚಲ್ ತಿವಾರಿ ಮತ್ತು ಸಿಮ್ರಾನ್ ಶ್ರೀವಾಸ್ತವ, ಸತ್ಯ ಪ್ರಕಾಶ, ಬಾಗೀಶ್ ಪಾಂಡೆ ಸೇರಿದಂತೆ 09ಮಂದಿ ಮೃತಪಟ್ಟಿದ್ದಾರೆ. ಲಾರಿ ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:13 + 2 =
Remember me
