ಅಹಮದಾಬಾದ್:‘ಆಪ್ ವಿರೋಧಿ ಪೋಸ್ಟರ್​ಗಳನ್ನು ಪ್ರದರ್ಶಿಸಿದ ಬಿಜೆಪಿ ಸರ್ಕಾರ ಹಿಂದುತ್ವ ಕಾರ್ಡ್ ಬಳಸಿ ಜನರ ಗಮನವನ್ನು ಅವರ ವೈಫಲ್ಯಗಳಿಂದ ದೂರಕ್ಕೆ ಒಯ್ಯುತ್ತಿದ್ದಾರೆ’ ಎಂದು ಆಮ್ ಆದ್ಮಿ ಪಕ್ಷ ಶನಿವಾರ ಆರೋಪಿಸಿದೆ.
‘ಬಿಜೆಪಿ ಸರ್ಕಾರ ಒಳ್ಳೆಯ ಶಿಕ್ಷಣ, ಆರೋಗ್ಯ ವ್ಯವಸ್ಥೆ, ಉದ್ಯೋಗ ಸೃಷ್ಟಿ ಮುಂತಾದ ಸೇವೆಗಳನ್ನು ಜನರಿಗೆ ನೀಡುತ್ತಿಲ್ಲ. ಜನರಿಗೆ ಆಪ್​ ಸೇವೆ ಇಷ್ಟ ಆಗುತ್ತಿರಲಿಲ್ಲ ಎಂದಾದರೆ ಅವರು ಪಕ್ಷಕ್ಕೆ ಬೆಂಬಲ ಸೂಚಿಸುತ್ತಿರಲಿಲ್ಲ. ಬೇರೆ ಪಕ್ಷದವರು ಬಿಜೆಪಿ ವಿರುದ್ಧ ಪೋಸ್ಟರ್​​ಗಳನ್ನು ಹಾಕಿದ್ದರೆ ಕೂಡಲೆ ತೆರವುಗೊಳಿಸಲಾಗುತ್ತಿತ್ತು. ಆದರೆ ರಾಜ್​ಕೋಟ್​ನಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಆಡಳಿತ ಇರುವ ಕಾರಣ ಕೇಜ್ರಿವಾಲ್‌ರ ಅವಹೇಳನ ಇರುವ ಚಿತ್ರವನ್ನು ತೆಗೆದುಹಾಕುತ್ತಿಲ್ಲ’ ಎಂದು ಆಪ್​ ನಾಯಕ ಇಂದ್ರಾನಿಲ್ ರಾಜಗುರು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಭರತ್ ಬೋಗ್ರಾ ‘ಗುಜರಾತಿನ ಜನ ಹಿಂದು ವಿರೋಧಿ ಆಲೋಚನೆಗಳನ್ನು ಹಾಗೂ ನಂಬಿಕೆಗಳನ್ನು ಒಪ್ಪುವುದಿಲ್ಲ’ ಎಂದು ಹೇಳಿದರು.
ಇಂದು (ಅಕ್ಟೋಬರ್ 8) ಗುಜರಾತ್​ ಪ್ರವಾಸ ಕೈಗೊಂಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್, ವರ್ಷಾಂತ್ಯದಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುಣಾವಣೆಗಾಗಿ ಕಾರ್ಯತಂತ್ರವನ್ನು ರೂಪಿಸಲು ಆಗಮಿಸಿದ್ದಾರೆ. ಕೇಜ್ರಿವಾಲ್ ಹಾಗೂ ಭಗವಂತ್ ಮಾನ್ ವಿವಿಧ ಸಮುದಾಯಗಳ ನಾಯಕರೊಂದಿಗೆ ಮಾತುಕತೆಗೆ ಮುಂದಾಗಿದ್ದಾರೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಮನೋಜ್ ಸೊರಾಥಿಯಾ ಮಾಹಿತಿ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 4 =
Remember me
