ನವದೆಹಲಿ:ದೆಹಲಿಯ ಗದ್ದುಗೆಯನ್ನು ಮೂರನೇ ಬಾರಿಗೆ ಏರಲು ಆಮ್​ ಆದ್ಮಿ ಪಕ್ಷ ಸಜ್ಜಾಗಿದೆ. ಒಟ್ಟು 70 ಸ್ಥಾನಗಳಲ್ಲಿ ಈಗಾಗಲೇ 28ರಲ್ಲಿ ಜಯ ಸಾಧಿಸಿದ್ದು, 35ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಗೆಲುವಿನ ಸನಿಹಕ್ಕೆ ಬರುತ್ತಿದ್ದಂತೆಯೇ ನಟ ಶಾರುಖ್​​ ಖಾನ್ ಅವರ ವಿಡಿಯೋ ಹರಿಬಿಟ್ಟು​ ವಿಭಿನ್ನವಾಗಿ ಭಾವನೆಯನ್ನು ಆಪ್​ ವ್ಯಕ್ತಪಡಿಸಿದೆ.
ಮಧ್ಯಾಹ್ನ 2.45ರ ಸುಮಾರಿಗೆ ಟ್ವೀಟ್​ ಮಾಡಿರುವ ಆಪ್​, ಶಾರುಖ್​ ಅಭಿನಯದ ಚೆಕ್​ ದೇ ಇಂಡಿಯಾ ಚಿತ್ರದ ಭಾವನಾತ್ಮಕ ಸನ್ನಿವೇಶದ ವಿಡಿಯೋವೊಂದನ್ನು ಹರಿಬಿಟ್ಟಿದೆ.
ವಿಡಿಯೋದಲ್ಲಿ ಏನಿದೆ?: ಚಕ್​ ದೇ ಇಂಡಿಯಾ ಚಿತ್ರದಲ್ಲಿ ಕ್ಲೈಮ್ಯಾಕ್ಸ್​ ದೃಶ್ಯದಲ್ಲಿ ಫೈನಲ್​ ಪಂದ್ಯದಲ್ಲಿ ಭಾರತದ ಹಾಕಿ ತಂಡವು ಜಯಿಸಿದಾಗ ಕೋಚ್​ ಶಾರುಖ್​ ತುಂಬಾ ಭಾವುಕರಾಗಿ ಕಣ್ಣೀರು ಹಾಕುತ್ತಾರೆ. ಇದೇ ದೃಶ್ಯವನ್ನು ಎಡಿಟ್​ ಮಾಡಿ ಆಪ್​ ಶೇರ್​ ಮಾಡಿಕೊಂಡಿದ್ದು, ದೆಹಲಿ ಚುನಾವಣೆಯಲ್ಲಿನ ತಮ್ಮ ಗೆಲುವನ್ನು ವ್ಯಕ್ತಪಡಿಸಿದೆ.
ಸದ್ಯದ ಟ್ರೆಂಟ್​ ಪ್ರಕಾರ ಒಟ್ಟು 70 ಸ್ಥಾನಗಳಲ್ಲಿ ಆಪ್​ 63 ಹಾಗೂ ಬಿಜೆಪಿ 7 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕಾಂಗ್ರೆಸ್​ ಖಾತೆಯನ್ನೇ ತೆರದಿಲ್ಲ.(ಏಜೆನ್ಸೀಸ್​)
Emotions right now…pic.twitter.com/TXw7nHCFxM
— AAP (@AamAadmiParty)February 11, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − four =
Remember me
