ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮಂಗಳವಾರ ಪ್ರಗತಿಯಲ್ಲಿದ್ದು ಇತ್ತೀಚಿನ ವರದಿ ಪ್ರಕಾರ,ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ(ಆಪ್​) ಎರಡನೇ ಅವಧಿಗೆ ಅಧಿಕಾರ ಚುಕ್ಕಾಣಿಯನ್ನು ಭದ್ರಪಡಿಸುವ ನಿಟ್ಟಿನಲ್ಲಿ ಮುಂದಡಿ ಇರಿಸಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, 11 ಗಂಟೆ ವೇಳೆಗೆ ಆಪ್ 52 ಸ್ಥಾನಗಳಲ್ಲೂ ಬಿಜೆಪಿ 18 ಸ್ಥಾನಗಳಲ್ಲೂ ಮುನ್ನಡೆ ಕಾಯ್ದುಕೊಂಡಿವೆ. ನವದೆಹಲಿಯ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 4,300 ಮತಗಳ ಮುನ್ನಡೆ ಸಾಧಿಸಿದರೆ, ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಪತ್​ಪರ್​ಗಂಜ್ ನಲ್ಲಿ 102 ಮತಗಳ ಮುನ್ನಡೆ ಹೊಂದಿದ್ದರು.
ದೆಹಲಿ ವಿಧಾನಸಭೆಯಲ್ಲಿ ವಿಪಕ್ಷ ನಾಯಕರೂ ಆಗಿರುವ ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ರೋಹಿಣಿ ಕ್ಷೇತ್ರದಲ್ಲಿ 1,200ಕ್ಕೂ ಹೆಚ್ಚು ಮತಗಳ ಹಿನ್ನಡೆ ಅನುಭವಿಸಿದ್ದಾರೆ. ಇದೇ ವೇಳೆ, 27 ಕ್ಷೇತ್ರಗಳಲ್ಲಿ ಮತಗಳ ಅಂತರ 700ರಿಂದ 1,000ದ ನಡುವೆ ಇದೆ. ಹೀಗಾಗಿ ಆಶಾವಾದ ಕಳೆದುಕೊಳ್ಳದಂತೆ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಗೆಲುವಿನ ಟ್ರೆಂಡ್ ನೋಡಿ ಆಪ್ ಕಚೇರಿಗಳಲ್ಲಿ, ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಿದೆ.2015ರ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 67 ಗೆದ್ದು ಬೀಗಿದ್ದ ಆಪ್​ಗೆ ಈ ಬಾರಿ ಕೆಲವು ಸ್ಥಾನಗಳು ನಷ್ಟವಾಗುತ್ತಿರುವುದು ಖಚಿತ. ಆದಾಗ್ಯೂ, ಆಡಳಿತ ಚುಕ್ಕಾಣಿ ಪಕ್ಕಾ ಎಂಬುದು ಸದ್ಯದ ಲೆಕ್ಕಾಚಾರ.
ನಾವು ಭಾರಿ ಗೆಲುವು ದಾಖಲಿಸುತ್ತೇವೆ. ಇದನ್ನು ಚುನಾವಣೆಗೂ ಮೊದಲೇ ಹೇಳುತ್ತಿದ್ದೆವು. ನಮ್ಮ ಕೆಲಸಕ್ಕೆ ಪ್ರತಿಫಲ ಸಿಕ್ಕಿದೆ ಎಂದು ಆಪ್ ವಕ್ತಾರ ಸಂಜಯ್ ಸಿಂಗ್ ಹೇಳಿದ್ದಾರೆ. ನಾವು ಸ್ಪಷ್ಟ ಬಹುಮತ ಗೆದ್ದೇ ಗೆಲ್ಲುತ್ತೇವೆ. ಇದರೊಂದಿಗೆ ಇಲ್ಲಿ ಹಿಂದು-ಮುಸ್ಲಿಂ ಪಾಲಿಟಿಕ್ಸ್​ಗೆ ಜಾಗ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ನಾವು ರವಾನಿಸುತ್ತೇವೆ ಎಂದು ಆಪ್ ಕಾರ್ಯಕರ್ತ ಫರೀನ್ ಖಾನ್ ಖುಷಿಯಿಂದ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + nineteen =
Remember me
