ನವದೆಹಲಿ :ಕಾರಿನಲ್ಲಿ ಒಬ್ಬರೇ ಪ್ರಯಾಣ ಮಾಡುತ್ತಿದ್ದರೂ ಮಾಸ್ಕ್ ಧರಿಸಲೇ ಬೇಕು ಎಂದು ದೆಹಲಿ ಹೈಕೋರ್ಟ್ ಖಡಕ್ ತೀರ್ಪು ನೀಡಿರುವ ದಿನವೇ ದೆಹಲಿಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿ(ಎಎಪಿ)ಯ ಬಹುತೇಕ ನಾಯಕರು ಮತ್ತು ಕಾರ್ಯಕರ್ತರು ಮಾಸ್ಕ್​ ಹಾಕಿಕೊಳ್ಳದೆ ಪ್ರತಿಭಟನೆ ನಡೆಸಿರುವುದು ವರದಿಯಾಗಿದೆ.
ಕೇಂದ್ರ ಸರ್ಕಾರದ ಕರೊನಾ ಲಸಿಕಾ ನೀತಿಯನ್ನು ವಿರೋಧಿಸಿ ನಗರದ ಬಿಜೆಪಿ ಕಚೇರಿಯ ಮುಂದೆ ಎಎಪಿ ಇಂದು ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಪ್ರತಿಭಟನಾನಿರತರು, ಸಾಮಾಜಿಕ ಅಂತರ ಪಾಲಿಸುವುದಿರಲಿ, ಬಹುತೇಕ ಮಾಸ್ಕ್ ಧರಿಸದೆ ಇರುವುದು ಕಂಡುಬಂತು. ಅಲ್ಲದೆ ಕರೊನಾ ನಿಯಂತ್ರಣ ಆದೇಶದ ಪ್ರಕಾರ ಈ ರೀತಿ ಒಂದೆಡೆ ಸೇರುವುದರ ಮೇಲೆ ನಿರ್ಬಂಧ ಇರುವ ಕಾರಣಕ್ಕೆ ದೆಹಲಿ ಪೊಲೀಸರು ಇದನ್ನು ಕಾನೂನುಬಾಹಿರ ಎಂದು ಘೋಷಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಗೊಲ್ಲರದೊಡ್ಡಿಯಲ್ಲಿ ವಿಜಯವಾಣಿ ದಶಮಾನೋತ್ಸವ: ಶಿಳ್ಯೆಕ್ಯಾತ ಜನರಿಗೆ ವಸತಿ ಸೌಲಭ್ಯದ ಭರವಸೆ
ಈ ಸಂದರ್ಭದಲ್ಲಿ ಸುದ್ದಿಗಾರರು ದೆಹಲಿಯಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿರುವಾಗ ಆಡಳಿತಾರೂಢ ಪಕ್ಷವೇ ಮಾಸ್ಕ್ ಧರಿಸುವ ಬಗ್ಗೆ ಕಟ್ಟುನಿಟ್ಟಾಗಿ ವರ್ತಿಸದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ಉತ್ತರ ನೀಡಿದ ಹಿರಿಯ ಎಎಪಿ ನಾಯಕ ಸೌರಭ್ ಭರದ್ವಾಜ್​ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ರಾಲಿಗಳತ್ತ ಬೆಟ್ಟು ಮಾಡಿದರು.“ಈ ದೇಶದ ಜನರು ಪ್ರಧಾನಿ ಏನು ಮಾಡುತ್ತಾರೋ ಅದನ್ನು ಅನುಸರಿಸುತ್ತಾರೆ. ಪ್ರಧಾನಿಯವರು ಬಿಹಾರದಲ್ಲಿ ಲಕ್ಷಾಂತರ ಜನರೊಂದಿಗೆ ರಾಲಿಗಳನ್ನು ನಡೆಸಿದರು. ನಂತರ ಅವರು ಅದನ್ನೇ ಅಸ್ಸಾಂ ಮತ್ತು ಇತರ ರಾಜ್ಯಗಳಲ್ಲೂ ಮಾಡಿದರು. ಅವರು ಎಲ್ಲಾ ನಿಯಮಗಳನ್ನು ಪಾಲಿಸಿದರೆ, ಬೇರೆಯವರೂ ಅವರನ್ನು ಅನುಸರಿಸುತ್ತಾರೆ” ಎಂದರು.
ಜೊತೆಗೆ, “ಎಎಪಿ ಕಾರ್ಯಕರ್ತರ ವಿಷಯಕ್ಕೆ ಬಂದರೆ, ಕೋಟ್ಯಂತರ ಜನರಿಗಾಗಿ ಲಸಿಕೆ ಪಡೆಯುವುದಕ್ಕಾಗಿ ಕೆಲವು ಎಎಪಿ ಚಳುವಳಿಕಾರರಿಗೆ ಕೋವಿಡ್ ಬರುವುದೆಂದರೆ, ನಾವು ಅದಕ್ಕೆ ಸಿದ್ಧರಿದ್ದೇವೆ” ಎಂದರು!
‘ಲಸಿಕೆ ರಫ್ತು ಬೇಡ’ :ಪ್ರಸ್ತುತ ಪರಿಸ್ಥಿತಿಯಲ್ಲಿ 64.5 ಮಿಲಿಯನ್ ಡೋಸ್​ಗಳಷ್ಟು ಕರೊನಾ ಲಸಿಕೆಯನ್ನು ಬೇರೆ ದೇಶಗಳಿಗೆ ಕಳುಹಿಸುವ ಬದಲು, ಭಾರತ ಸರ್ಕಾರ ದೇಶದಾದ್ಯಂತ ಲಸಿಕಾ ಅಭಿಯಾನವನ್ನು ತ್ವರಿತಗೊಳಿಸಬಹುದು ಎಂಬುದು ಎಎಪಿಯ ಅಭಿಪ್ರಾಯವಾಗಿದೆ. ಇತ್ತೀಚೆಗೆ ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆಲ್ಲಾ ಕರೊನಾ ಲಸಿಕೆ ನೀಡಲು ಅವಕಾಶ ಮಾಡಿ ಎಂದು ಕೇಂದ್ರ ಸರ್ಕಾರವನ್ನು ಕೋರಿದ್ದರು.
ಇದನ್ನೂ ಓದಿ:ಆರ್​​ಸಿಬಿಯ ಮತ್ತೊಬ್ಬ ಆಟಗಾರ ಡೇನಿಯಲ್ ಸ್ಯಾಮ್ಸ್​​ಗೆ ಕರೊನಾ
“ತನ್ನ ನಾಗರೀಕರಿಗೆ ನೀಡಿದ್ದಕ್ಕಿಂತ ಹೆಚ್ಚು ಡೋಸ್​ಗಳನ್ನು ಸರ್ಕಾರ ರಫ್ತು ಮಾಡುತ್ತಿದೆ. ಪ್ರಧಾನಿ ಮೋದಿ ಅವರು ಜಾಗತಿಕ ಮಟ್ಟದಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಕೇಂದ್ರ ಸರ್ಕಾರಕ್ಕೆ ಜನರ ಪ್ರಾಣ ಉಳಿಸುವುದಕ್ಕಿಂತ ತನ್ನ ಇಮೇಜ್​​ನ ಬಗ್ಗೆ ಹೆಚ್ಚು ಕಾಳಜಿ ಇದೆ” ಎಂದು ಮತ್ತೊಬ್ಬ ಎಎಪಿ ನಾಯಕ ರಾಘವ್ ಛಡ್ಡ ಟೀಕಿಸಿದರು.(ಏಜೆನ್ಸೀಸ್)
ರಾಜಧಾನಿಯ 260 ಕೇಂದ್ರಗಳಲ್ಲಿ 24 ಗಂಟೆಗಳೂ ಕರೊನಾ ಲಸಿಕೆ ಲಭ್ಯ

VIDEO | ವೇದಿಕೆಯ ಮೇಲೆ ಜಟಾಪಟಿ : ಮಿಸಸ್ ಶ್ರೀಲಂಕಾ ತಲೆಯಿಂದ ಮುಕುಟ ಕಿತ್ತುತೆಗೆದ ಮಿಸಸ್​ ವರ್ಲ್ಡ್ !

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಲಭ್ಯಗೊಳಿಸಿ, ಅಲ್ಪಾವಧಿ ಲಾಕ್​ಡೌನ್ ವಿಧಿಸಿ : ಐಎಂಎ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − nine =
Remember me
