ನವದೆಹಲಿ: ಅಯೋಧ್ಯೆಯಲ್ಲಿ ಬೃಹತ್ ಹನುಮಾನ್ ಪ್ರತಿಮೆ ಸ್ಥಾಪಿಸಿ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ಗೆ ಆಪ್ ಶಾಸಕ, ವಕ್ತಾರ ಸೌರಭ್ ಭಾರದ್ವಾಜ್ ಗುರುವಾರ ಔಪಚಾರಿಕವಾಗಿ ಮನವಿ ಮಾಡಿದ್ದಾರೆ.
ತಮ್ಮ ವಿಧಾನಸಭಾ ಕ್ಷೇತ್ರವಾದ ಗ್ರೇಟರ್ ಕೈಲಾಷ್​ನಲ್ಲಿ ಪ್ರತಿ ಮಂಗಳವಾರ ಸುಂದರಕಾಂಡ ಪಾರಾಯಣ ಆಯೋಜಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಭಾರದ್ವಾಜ್ ಈ ಮನವಿ ಮಾಡಿ ಗಮನಸೆಳೆದಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆ ಜತೆ ಮಾತನಾಡಿದ ಅವರು, ಟ್ರಸ್ಟ್​ ಜತೆ ಸಮಯ ಕೇಳಿಕೊಂಡು ಅಧಿಕೃತ ಮನವಿಯನ್ನು ಅವರಿಗೆ ಸಲ್ಲಿಸುತ್ತೇನೆ. ಭಗವಾನ್ ಶ್ರೀರಾಮಚಂದ್ರನ ಆಪ್ತ ಹನುಮಾನ್​ಜಿ. ರಾಮ ಮಂದಿರ ಇರುವಲ್ಲೆಲ್ಲ ಹನುಮಂತನಿಗೂ ಜಾಗವಿದೆ. ರಾಮ ದರ್ಬಾರ್​ನಲ್ಲಿ ರಾಮ, ಲಕ್ಷ್ಮಣ, ಸೀತೆ ಮತ್ತು ಹನುಮಾನ್​ ಇದ್ದೇ ಇರುತ್ತಾರೆ ಎಂದು ಅವರು ಹೇಳಿದರು. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − five =
Remember me
