ನವದೆಹಲಿ:ಅರವಿಂದ್​ ಕೇಜ್ರಿವಾಲ ಅವರು ಭಯೋತ್ಪಾದಕರಾಗಿದ್ದರೆ ಅವರನ್ನು ಬಂಧಿಸಲಿ, ಇದು ನಾನು ಬಿಜೆಪಿಗೆ ಮಾಡುತ್ತಿರುವ ಚಾಲೆಂಜ್​ ಎಂದು ಆಪ್​ ಸಂಸದ ಸಂಜಯ್​ ಸಿಂಗ್​ ಸವಾಲೊಡ್ಡಿದ್ದಾರೆ.
ಈ ಮೊದಲು ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ ಮಾತನಾಡಿ, ಅರವಿಂದ ಕೇಜ್ರಿವಾಲ​ ಅವರು ಅಮಾಯಕರಂತೆ ಮುಖ ಮಾಡಿಕೊಂಡಿರುತ್ತಾರೆ. ನಾನು ಭಯೋತ್ಪಾದಕನಾ ಎಂದು ಕೇಳುತ್ತಾರೆ. ಆದರೆ ಅವರು ಭಯೋತ್ಪಾದಕರೇ. ಅದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದಿದ್ದರು.
ಕೇಜ್ರಿವಾಲ್​ ಅವರು ತಮ್ಮನ್ನು ತಾವು ಅರಾಜಕವಾದಿ ಎಂದು ಕರೆದುಕೊಳ್ಳುತ್ತಾರೆ. ಹಾಗಾದರೆ ಅರಾಜಕವಾದಿಯಾದರೆ ಭಯೋತ್ಪಾದಕರಿಗೂ ನಿಮಗೂ ವ್ಯತ್ಯಾಸವೇನು? ನೀವೂ ಭಯೋತ್ಪಾದಕರೇ ಎಂದು ಜಾವಡೇಕರ್​ ಜರಿದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಸಂಜಯ್​ ಸಿಂಗ್​, ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗ ಇರುವ, ರಾಷ್ಟ್ರ ರಾಜಧಾನಿಯಲ್ಲಿ ಒಬ್ಬ ಸಚಿವರು ಇಂತಹ ಭಾಷೆ ಬಳಸುತ್ತಾರೆ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.(ಏಜೆನ್ಸೀಸ್​)
#WATCHUnion Minister Prakash Javadekar in Delhi: Kejriwal is making an innocent face & asking if he is a terrorist, you are a terrorist, there is plenty of proof for it. You yourself had said you are an anarchist, there is not much difference between an anarchist & a terrorist.pic.twitter.com/vRjkvFKGEO
— ANI (@ANI)February 3, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 12 =
Remember me
