ನವದೆಹಲಿ:ದೇಶದಲ್ಲಿ ದಿನ ನಿತ್ಯದ ಅಗತ್ಯ ವಸ್ತುಗಳ ಬೆಲೆಯೇರಿಕೆ ಹಾಗೂ ಹಣದುಬ್ಬರುವನ್ನ ಖಂಡಿಸಿ ಆಮ್​ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸುಶೀಲ್​ ಕುಮಾರ್ ಗುಪ್ತಾ ಟೊಮ್ಯಾಟೋ ಹಾಗೂ ಶುಂಠಿ ಹಾರವನ್ನು ಧರಿಸಿ ಸದನದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯಸಭೆಯಲ್ಲಿ ದಾಖಲೆಗಳನ್ನು ಮಂಡಿಸಸುವ ಸಮಯದಲ್ಲಿ ಸಂಸದ ಸುಶೀಲ್​ ಕುಮಾರ್​ ಸದನವನ್ನು ಪ್ರವೇಶಿಸಿದ್ದು, ಇದನ್ನೂ ಕಂಡು ಸಭಾಪತಿ ಜಗದೀಪ್​ ಧನಕರ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಮ್ಮ ಈ ನಡೆ ತುಂಬಾ ನೋವುಂಟು ಮಾಡಿದೆ ಎಂದು ನುಡಿದಿದ್ದಾರೆ.
ಕಲಾಪದ ವೇಳೆ ಕ್ವಿಟ್​ ಇಂಡಿಯಾ ಚಳುವಳಿಯನ್ನು ಉಲ್ಲೇಖಿಸಿದ ಸಭಾಪತಿ ಧನಕರ್​ ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡುವಂತೆ ಸದಸ್ಯರಿಗೆ ಸೂಚಿಸಿದ್ದಾರೆ. ಇದಾದ ಬಳಿಕ ರಾಜ್ಯಸಭೆಗೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನೂ ಮಂಡಿಸಲಾಯಿತು.
ग़रीब लोगों का ख़ून चूस रही 'Modi की महंगाई डायन'‼️Modi सरकार का ध्यान महंगाई की तरफ आकर्षित करने के लिए टमाटर और अदरक की माला पहन कर संसद पहुँचे AAP MP@DrSushilKrGuptapic.twitter.com/FkLEQxQAe7
ಇದನ್ನೂ ಓದಿ:ಗ್ಯಾರಂಟಿ ಯೋಜನೆಗಳ ಯಶಸ್ಸು ಅಧಿಕಾರಿಗಳ ಮೇಲೆ ಅವಲಂಬಿತವಾಗಿದೆ: ಸಿಎಂ ಸಿದ್ದರಾಮಯ್ಯ
ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ನೀವು(ಜಗದೀಪ್​ ಧನಕರ್​) ಕ್ವಿಟ್​​ ಇಂಡಿಯಾ ಚಳುವಳಿಯನ್ನು ಉಲ್ಲೇಖಿಸಿದ್ದೀರಿ. ಅದರಂತೆ ನಾವು ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡಿದ್ದೆವು. ಆದರೆ, ಕ್ವಿಟ್​ ಇಂಡಿಯಾ ಚಳುವಳಿಯಲ್ಲಿ ಭಾಗಿಯಾಗಲು ತೆರಳುತ್ತಿದ್ದ ಗಾಂಧೀಜಿ ಅವರ ಮೊಮ್ಮಗ ತುಷಾರ್​ ಗಾಂಧಿ ಅವರನ್ನು ಬಂಧಿಸಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಂದಕ್ಕೆ ಮಾತನಾಡಲು ಸಭಾಪತಿಗಳು ಅವಕಾಶ ನಿರಾಕರಿಸಿದ್ದರು. ಇದನ್ನು ಲೆಕ್ಕಿಸದ ಖರ್ಗೆ ತಮ್ಮ ಬಾಷಣವನ್ನೂ ಮುಂದುವರೆಸಿದ್ದರು. ಈ ವೇಳೆ ಕಾಂಗ್ರೆಸ್​ ಹಾಗೂ ಬಿಜೆಪಿ ಸದಸ್ಯರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಗದ್ದಲದ ನಡುವೆಯೇ ಸುಶೀಲ್​ ಕುಮಾರ್​ ಗುಪ್ತಾ ಅವರನ್ನು ಗಮನಿಸಿದ ಸಭಾಪತಿ ಧನಕರ್ ಅವರ ನಡೆಗೆ​ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಮ್ಮ ನಡವಳಿಕೆ ಬಗ್ಗೆ ನಾವೇ ಒಂದು ಗೆರೆ ಹಾಕಿಕೊಳ್ಳಬೇಕಿದೆ. ಸಭೆಯ ಅಧ್ಯಕ್ಷನಾಗಿ ಸುಶೀಲ್​ ಕುಮಾರ್​ ಗುಪ್ತಾ ಅವರು ಈ ರೀತಿಯ ಹಾರ ಧರಿಸಿ ಸದನಕ್ಕೆ ಬಂದಿರುವುದು ನನಗೆ ತುಂಬಾ ಬೇಸರ ತರಿಸಿದೆ. ಇವರ ಮೇಲೆ ಯಾವ ರೀತಿಯ ಕ್ರಮ ಜರುಗಿಸಬೇಕು ಎಂಬುದರ ಕುರಿತು ನಾನು ಆಡಳಿತ ಹಾಗೂ ವಿಪಕ್ಷ ನಾಯಕರ ಜೊತೆ ಚರ್ಚೆ ನಡೆಸಿ ಆ ನಂತರ ಮಾತನಾಡುತ್ತೇನೆ ಎಂದು ಹೇಳುತ್ತಾ ಗದ್ದಲದ ನಡುವೆಯೇ ಸಭೆಯನ್ನೂ ಮುಂದೂಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
