ನವದೆಹಲಿ:ಏಪ್ರಿಲ್​ 26ರಂದು ದೆಹಲಿ ಮುನ್ಸಿಪಾಲ್​ ಕೌನ್ಸಿಲ್​​(MCD)ನ ಮೇಯರ್​, ಉಪಮೇಯರ್​ ಸ್ಥಾನಕ್ಕೆ ನಡೆಯುವ ಚುನಾವಣೆಗೆ ಆಮ್​ ಆದ್ಮಿ ಪಕ್ಷ ತನ್ನ ಹುರಿಯಾಳುಗಳನ್ನು ಘೋಷಿಸಿದೆ.
ಹಾಲಿ ಮೇಯರ್​ ಶೆಲ್ಲಿ ಓಬೆರಾಯ್​ ಹಾಗೂ ಉಪಮೇಯರ್​ ಆಲೆ ಮೊಹಮ್ಮದ್​ ಇಕ್ಬಾಲ್ ಅವರನ್ನು ಅಭ್ಯರ್ಥಿಗಳೆಂದು ಎಎಪಿ ನಾಯಕ ಸಂಜಯ್​ ಸಿಂಗ್ ಘೋಷಿಸಿದ್ಧಾರೆ.
ಈ ಕುರಿತು ಮಾತನಾಡಿದ ಸಂಜಯ್​ ಸಿಂಗ್​ ನಾವು ಮೇಯರ್ ಹಾಗೂ ಉಪಮೇಯರ್​ ಚುನಾವಣೆಗೆ ಶೆಲ್ಲಿ ಒಬೆರಾಯ್​ ಹಾಗೂ ಆಲೆ ಮೊಹಮ್ಮದ್​ ಇಕ್ಬಾಲ್ ಅವರನ್ನು ಆಯ್ಕೆ ಮಾಡಿದ್ದೇವೆ. ಕಳೆದ ಭಾರಿ ಚುನಾವಣೆ ಸಮಯದಲ್ಲಿ ಬಿಜೆಪಿಯ ಗದ್ದಲದ ನಡುವೆ ನಮ್ಮ ಅಭ್ಯರ್ಥಿಗಳು ಜಯ ಸಾಧಿಸಿದ್ದರು. ಈ ಭಾರಿಯೂ ಕೂಡ ನಮ್ಮ ಅಭ್ಯರ್ಥಿಗಳು ಕೂಡ ಜಯಗಳಿಸಲಿದ್ಧಾರೆ ಎಂದು ತಿಳಿಸಿದ್ಧಾರೆ.
ಇದನ್ನೂ ಓದಿ:ಕೇರಳದ ರೈಲಿಗೆ ಬೆಂಕಿ ಹಚ್ಚಿದ ಆರೋಪಿ ಝಾಕಿರ್ ನಾಯ್ಕ್ ಅನುಯಾಯಿ!
ದೆಹಲಿ ಪಾಲಿಕೆಯ ಐದು ವರ್ಷಗಳ ಅವಧಿಯಲ್ಲಿ ಸರದಿ ಆಧಾರದ ಮೇಲೆ ಮೇಯರ್ ಉಪಮೇಯರ್​ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೊದಲ ವರ್ಷ ಮಹಿಳೆಯರಿಗೆ, ಎರಡನೇ ವರ್ಷ ಓಪನ್​ ಕೆಟಗರಿ, ಮೂರನೇ ವರ್ಷ ಮೀಸಲು ವರ್ಗಕ್ಕೆ, ನಾಲ್ಕು ಮತ್ತು ಐದನೇ ವರ್ಷ ಓಪನ್​ ಕೆಟಗರಿಗೆ ಮೀಸಲಿಡಲಾಗಿದೆ.
ಡಿಸಂಬರ್​ ನಾಲ್ಕರಂದು ನಡೆದ 250 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಎಎಪಿ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + four =
Remember me
