ನವದೆಹಲಿ:ಮಾಸ್ಕ್​ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಮ್​ ಆದ್ಮಿ ಪಕ್ಷ (ಎಎಪಿ) ಟ್ರೋಲ್​ ಮಾಡಿದೆ. ಸ್ವಯಂ ಸೇವಕರೊಬ್ಬರು ಮಾಸ್ಕ್​ ನೀಡುವುದನ್ನು ಪ್ರಧಾನಿ ಮೋದಿ ನಿರಾಕರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅದನ್ನೇ ಎಎಪಿ ಟ್ರೋಲ್​ ದಾಳವಾಗಿ ಬಳಸಿಕೊಂಡಿದೆ.
ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿರುವ ಎಎಪಿ​, ಮೋದಿಜೀ ರೀತಿ ಇರಬೇಡಿ, ಮಾಸ್ಕ್​ ಧರಿಸಿ ಎಂದು ಹೇಳುವ ಮೂಲಕ ಪ್ರಧಾನಿಯ ಕಾಲೆಳೆದಿದೆ. ​
ಇದನ್ನೂ ಓದಿ:ಈ ರಾಜ್ಯಗಳಲ್ಲಿ ಮಹಿಳೆಯರೇ ‘ಎಣ್ಣೆ’ ಜಾಸ್ತಿ ಕುಡಿಯೋದಂತೆ: ಲೆಕ್ಕಾಚಾರ ತಲೆಕೆಳಗೆ ಮಾಡಿ ಸಮೀಕ್ಷೆ!
ವಿಡಿಯೋದಲ್ಲಿ ಏನಿದೆ?: ಕರಕುಶಲ ವಸ್ತುಗಳು ಮತ್ತು ಮಾಸ್ಕ್​ಗಳನ್ನು ಮಾಡುವ ಮೇಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿದಾಗ ಸ್ವಯಂ ಸೇವಕರೊಬ್ಬರು ಮಾಸ್ಕ್​ ಕೊಡುತ್ತಾರೆ. ಆದರೆ, ಪ್ರಧಾನಿ ತೆಗೆದುಕೊಳ್ಳಲು ನಿರಾಕರಿಸುತ್ತಾರೆ.
Wear a mask. Don't be like Modi ji.pic.twitter.com/lPxdTEdZiI
— AAP (@AamAadmiParty)December 17, 2020

ಇದೇ ವಿಡಿಯೋವನ್ನು ಎಎಪಿ​ ಶೇರ್​ ಮಾಡಿಕೊಂಡಿದೆ. ಪ್ರಧಾನಿ ಮೋದಿ ಭಾಷಣ ಮಾಡಿದಾಗಲೆಲ್ಲ ಮಾಸ್ಕ್​ ಧರಿಸಿ, ಸಾಮಾಜಿಕ ಅಂತರಕಾಯ್ದುಕೊಳ್ಳಿ ಎಂದು ಜನರಿಗೆ ಕಿವಿಮಾತು ಹೇಳುತ್ತಾರೆ. ಹೀಗಾಗಿ ಸಲಹೆ ನೀಡುವ ಪ್ರಧಾನಿಯವರೇ ಮಾಸ್ಕ್​ ಧರಿಸಲು ನಿರಾಕರಿಸಿದ್ದಾರೆಂದು ಎಎಪಿ​ ಗೇಲಿ ಮಾಡಿದೆ. ಸದ್ಯ ವಿಡಿಯೋ ವೈರಲ್​ ಆಗಿದೆ.(ಏಜೆನ್ಸೀಸ್​)
ಇದನ್ನೂ ಓದಿ:ಅಂಕಲ್​-ಅಪ್ರಾಪ್ತೆಯ ಲವ್ವಿಡವ್ವಿ ಸೂಸೈಡ್ ಪ್ರಕರಣಕ್ಕೆ ಹೊಸ ಟ್ವಿಸ್ಟ್​: ಬಾಲಕಿ ಬಲಿಪಶುವಾದಳಾ?
VIDEO: ನಿರ್ಮಾಣಹಂತದಲ್ಲಿ ಕಟ್ಟಡದ ಕಂಬ ಯುವಕನ ಮೇಲೆ ಬಿದ್ದ ಭಯಾನಕ ವಿಡಿಯೋ

VIDEO| ರುಂಡವೇ ಇಲ್ದಿದ್ರೂ ದಾಳಿಗೆ ಯತ್ನಿಸಿದ ಹಾವು: ನೀವು ನೋಡಿರದ ಭಯಾನಕ ವಿಡಿಯೋ ಇದು!

ಆ್ಯಪ್​ ಮೂಲಕ ಇನ್​ಸ್ಟಂಟ್ ಲೋನ್ ಪಡೆದ ಯುವಕರ ಮಾನ ಜಾಲತಾಣದಲ್ಲಿ ಹರಾಜು: ಆತ್ಮಹತ್ಯೆಗೂ ಯತ್ನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
