ನವದೆಹಲಿ:ರಾಷ್ಟ್ರ ರಾಜಧಾನಿ ನವದೆಹಲಿಯ ಪುರಸಭೆ ಉಪಚುನಾವಣೆಯಲ್ಲಿ ಆಡಳಿತ ಪಕ್ಷವಾದ ಆಮ್​ ಆದ್ಮಿ ಪಕ್ಷ ಜಯಭೇರಿ ಬಾರಿಸಿದೆ. ಐದರಲ್ಲಿ ನಾಲ್ಕು ಸ್ಥಾನವನ್ನು ಪಕ್ಷ ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್​ ಒಂದು ಸ್ಥಾನದಲ್ಲಿ ಗೆದ್ದು ನಿಟ್ಟುಸಿರು ಬಿಟ್ಟಿದೆ.
ನವದೆಹಲಿ ಪುರಸಭೆಯ ಐದು ವಾರ್ಡ್​ಗಳಿಗೆ ಫೆಬ್ರವರಿ 28ರಂದು ಉಪಚುನಾವಣೆ ನಡೆದಿತ್ತು. ಶೇ. 50 ಮತದಾರರು ಮತ ಚಲಾಯಿಸಿದ್ದರು. ಆ ಮತಗಳ ಎಣಿಕೆ ಇಂದು ನಡೆದಿದ್ದು ಅದರಲ್ಲಿ ಶಾಲಿಮಾರ್ ಬಾಗ್ ನಾರ್ತ್, ಕಲ್ಯಾಣ್‌ಪುರಿ, ತ್ರಿಲೋಕ್‌ಪುರಿ ಮತ್ತು ರೋಹಿಣಿ- ಸಿ ವಾರ್ಡ್‌ಗಳಲ್ಲಿ ಎಎಪಿ ಗೆಲುವಿನ ನಗೆ ಬೀರಿದೆ. ಶಾಲಿಮಾರ್ ಬಾಗ್ ನಾರ್ತ್​ನಲ್ಲಿ ಈ ಹಿಂದೆ ಬಿಜೆಪಿಯ ಕೌನ್ಸಿಲರ್​ ಇದ್ದು, ಇದೀಗ ಆ ಸ್ಥಾನವನ್ನು ಪಕ್ಷ ಎಎಪಿಗೆ ಬಿಟ್ಟುಕೊಟ್ಟಿದೆ. ಚೌಹಾಣ್ ಬಂಗಾರ್‌ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದು ಬೀಗಿದ್ದಾರೆ.
ದೆಹಲಿಯ ಜನರು ನಮ್ಮ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಬಿಜೆಪಿಯಿಂದ ಬೇಸರಗೊಂಡಿದ್ದಾರೆ ಮತ್ತು ಈ ಚುನಾವಣೆಯು ಅದರ ಸೂಚನೆಯಾಗಿದೆ . 2022 ರ ದೆಹಲಿ ಪುರಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಅಳಿಸಿಹಾಕಲಾಗುವುದು ಎಂದು ಎಎಪಿ ಮುಖಂಡ ಮತ್ತು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಂತಸ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಬಾಯ್​ಫ್ರೆಂಡ್​ ಜತೆ ಸೇರಿ ಮಗನನ್ನೇ ನದಿಗೆಸೆದ ತಾಯಿ! ಪೊಲೀಸರ ಎದುರಿಗೆ ಬೇರೆಯದ್ದೇ ನಾಟಕ!

‘ಬನ್ರೀ, ಚಂದ್ರನ ಮೇಲೆ ಹೋಗ್ಬರಣ’ ಚಂದ್ರನ ಕನಸು ಕಂಡವರಿಗೆ ಇಲ್ಲಿದೆ ಸ್ಪೆಷಲ್​ ಆಫರ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 3 =
Remember me
