ನವದೆಹಲಿ:ಮಾರಕ ಕರೊನಾ ವೈರಸ್​ ಕುರಿತು ಭಾರತೀಯರಿಗೆ ಹಿಂದಿಯಲ್ಲೇ ಟ್ವೀಟ್​ ಮಾಡಿ ಜಾಗೃತಿ ಮೂಡಿಸಿದ ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಕೆವಿನ್​ ಪೀಟರ್ಸನ್​ಗೆ ಪ್ರಧಾನಿ ನರೇಂದ್ರ ಮೋದಿ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಪೀಟರ್ಸನ್ ಸಹ ಪ್ರಧಾನಿಯನ್ನು ಮೆಚ್ಚಿಕೊಂಡಿದ್ದಾರೆ.
ದಿನದಿಂದ ದಿನಕ್ಕೆ ಕರೊನಾ ವೈರಸ್​ ಸೋಂಕು ಹರಡುತ್ತಿರುವುದರಿಂದ ಭಾರತೀಯರನ್ನು ಉದ್ದೇಶಿಸಿ ಟ್ವೀಟ್​ ಮಾಡಿರುವ ಪೀಟರ್ಸನ್​, ನಮಸ್ತೆ ಭಾರತ. ಎಲ್ಲರೂ ಸ್ವಯಂ ಏಕಾಂತದಲ್ಲಿ ಉಳಿದುಕೊಂಡು, ಸರ್ಕಾರ ಹೇಳಿದ ನಿಯಮಗಳನ್ನು ಪಾಲಿಸಬೇಕು. ಎಲ್ಲರೂ ಒಟ್ಟಾಗಿ ಮಹಾಮಾರಿ ಕರೊನಾ ವಿರುದ್ಧ ಹೋರಾಡಬೇಕು. ಹೀಗಾಗಿ ಕೆಲ ದಿನಗಳಮಟ್ಟಿಗೆ ಮನೆಯಲ್ಲೇ ಇರಿ ಎಂದು ಹಿಂದಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಪಶ್ಚಿಮ ಬಂಗಾಳ ಕ್ರಿಕೆಟರ್​ ಶ್ರೀವಾತ್ಸವ್​ ಗೋಸ್ವಾಮಿ ಅವರನ್ನು ಟ್ಯಾಗ್​ ಮಾಡಿ ನನ್ನ ಹಿಂದಿ ಟೀಚರ್​ ಎಂದು ಕರೆದಿದ್ದಾರೆ.
ಪೀಟರ್ಸನ್​ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, ಆಂಗ್ಲ ಆಟಗಾರನನ್ನು ಸ್ಪೋಟಕ ಬ್ಯಾಟ್ಸ್​ಮನ್​ ಎಂದು ಕರೆದಿದ್ದಾರೆ. ಅವರು ಕರೊನಾ ಮಹಾಮಾರಿ ಬಗ್ಗೆ ನಮಗೆ ಏನೋ ಹೇಳುತ್ತಿದ್ದಾರೆ. ನಾವು ಕೂಡ ಒಟ್ಟಾಗಿ ಕರೊನಾ ವಿರುದ್ಧ ಹೋರಾಡೋಣ ಎಂದು ತಿಳಿಸಿದ್ದಾರೆ.
ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿರುವ ಪೀಟರ್ಸನ್​, ಧನ್ಯವಾದಗಳು ಮಿಸ್ಟರ್​ ಮೋದಿ, ನಿಮ್ಮ ನಾಯಕತ್ವವೂ ಕೂಡ ಸ್ಪೋಟಕವಾಗಿದೆ ಎಂದಿದ್ದಾರೆ. ಒಟ್ಟಾರೆ ಪ್ರಧಾನಿ ಮತ್ತು ಪೀಟರ್ಸನ್​ ನಡುವಿನ ಸ್ನೇಹಪರ ಚರ್ಚೆ ಜನರಿಗೆ ಹೊಸ ಜಾಗೃತಿ ಸಂದೇಶವನ್ನು ನೀಡಿದೆ.
ಅಂದಹಾಗೆ ಪೀಟರ್ಸನ್​ ಮತ್ತು ಕ್ರಿಕೆಟಿಗ ಶ್ರೀವಾತ್ಸವ್​ ಗೋಸ್ವಾಮಿ ಅವರು ಈ ಹಿಂದೆ ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಆಡಿದ್ದರು.(ಏಜೆನ್ಸೀಸ್​)
ನಂಬದಿರಿ ಕರೊನಾ ವದಂತಿ… ಹೀಗಿದೆ ಸತ್ಯಸಂಗತಿ

https://twitter.com/KP24/status/1240903502345486336?s=20
https://twitter.com/KP24/status/1240989666733707266?s=20
ಫುಟ್​ಬಾಲ್ ದಿಗ್ಗಜ ಪಿಕೆ ಬ್ಯಾನರ್ಜಿ ಇನ್ನಿಲ್ಲ: 1956, 1960ರ ಒಲಿಂಪಿಕ್ಸ್​ನಲ್ಲಿ ಆಡಿದ ತಾರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
