ನವದೆಹಲಿ:ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹಿಂದೆಂದಿಗಿಂತಲೂ ತೀವ್ರ ವೇಗದಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಏಳು ರಾಜ್ಯಗಳಲ್ಲಿ ಕೋವಿಡ್​ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಮಾತ್ರವಲ್ಲದೇ, ಬೇರೆ ರಾಜ್ಯಗಳಿಗೂ ಇಲ್ಲಿಂದಲೇ ವ್ಯಾಪಿಸುತ್ತಿದೆ. ಈ ಕಾರಣಕ್ಕಾಗಿಯೇ ಬೇರೆ ರಾಜ್ಯಗಳ ಪ್ರಯಾಣಿಕರನ್ನು ಗಡಿಯೊಳಕ್ಕೆ ಬಿಟ್ಟುಕೊಳ್ಳುತ್ತಿಲ್ಲ.
ಕೇಂದ್ರ ಸರ್ಕಾರ ಲಾಕ್​ಡೌನ್​ ನಿರ್ಬಂಧಗಳನ್ನು ಸಡಿಲಿಸಿ ಬಸ್​, ರೈಲು, ವಿಮಾನ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತಿದೆ. ಆದರೆ, ನಮ್ಮನ್ನು ಸಂಪರ್ಕಿಸದೇ ಇಂಥ ನಿಯಮಗಳನ್ನು ಹೇರಬೇಡಿ ಎಂದು ರಾಜ್ಯಗಳು ಕೂಡ ಕೇಂದ್ರಕ್ಕೆ ಮನವಿ ಮಾಡಿಕೊಳ್ಳುತ್ತಿವೆ.
ಇದನ್ನೂ ಓದಿ;ತಿಳಿದಿರಿ.. ಆಧಾರನಷ್ಟೇ ಮುಖ್ಯವಾಗುತ್ತಿದೆ ಆರೋಗ್ಯ ಸೇತು ಆ್ಯಪ್​
ಸದ್ಯ ಬೇರೆ ರಾಜ್ಯಗಳಿಂದ ಯಾರೇ ಬಂದರೂ ಹಣ ಪಾವತಿಸಿ ಕ್ವಾರಂಟೈನ್​ಗೆ ಒಳಗಾಗಲೇಬೇಕಾಗಿದೆ. ಅದರಲ್ಲೂ ಮುಖ್ಯವಾಗಿ ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಅಸ್ಸಾಂ, ಜಮ್ಮು ಕಾಶ್ಮೀರ ಆಗೂ ಕರ್ನಾಟಕದಲ್ಲಿ ಪೇಯ್ಡ್​ ಕ್ವಾರಂಟೇನ್​ ಕಡ್ಡಾಯ. ಇದು ಅಂತಾರಾಜ್ಯ ಪ್ರಯಾಣಕ್ಕೆ ತೊಡಕಾಗಿ ಪರಿಣಮಿಸಿದೆ. ಜತೆಗೆ, ದೇಶೀಯ ವಿಮಾನ ಸಂಚಾರ ಪುನಾರಂಭದ ಮೇಲೂ ಕರಿನೆರಳಾಗಿ ಪರಿಣಮಿಸಿದೆ.
ಹೀಗಾಗಿ, ಆರೋಗ್ಯ ಸೇತು ಆ್ಯಪ್​ನಲ್ಲಿ ಸುರಕ್ಷಿತ ಎಂದು ತೋರಿಸುವ ಪ್ರಯಾಣಿಕರನ್ನು ಅಥವಾ ಕಾಯಿಲೆಯ ಲಕ್ಷಣ ಹೊಂದಿಲ್ಲದವರಿಗೆ ಸಾಂಸ್ಥಿಕ ಕ್ವಾರಂಟೇನ್​ ಅಗತ್ಯವಿಲ್ಲವೆಂದು ಕೇಂದ್ರ ವಿಮಾನ ಯಾನ ಸಚಿವ ಹರ್ದೀಪ್​ ಪುರಿ ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ರೈಲ್ವೆ ಪ್ರಯಾಣಿಕರಿಗೆ ಆರೋಗ್ಯ ಸೇತು ಆ್ಯಪ್​ ಕಡ್ಡಾಯಗೊಳಿಸಲಾಗಿದೆ. ಜತೆಗೆ ಅಂತಾರಾಜ್ಯ ಪ್ರಯಾಣಿಕರು ಈ ಆ್ಯಪ್​ ಹೊಂದಿರಬೇಕೆಂದು ತಿಳಿಸಲಾಗಿದೆ.
ಇದನ್ನೂ ಓದಿ;ಮೆಟ್ರೋ ರೈಲು ಪ್ರಯಾಣಕ್ಕೆ ಕ್ಯೂಆರ್​ ಕೋಡ್​ ಟಿಕೆಟ್​
ಕೇಂದ್ರ ಸರ್ಕಾರಿ ನೌಕರರು ಕರ್ತವ್ಯಕ್ಕೆ ತೆರಳುವ ಮುನ್ನ ತಮ್ಮ ಬಳಿಯಿರುವ ಸ್ಮಾರ್ಟ್​ ಫೋನ್​ಗಳಲ್ಲಿ ಆರೋಗ್ಯ ಸೇತು ಇನ್​ಸ್ಟಾಲ್​ ಮಾಡಿಕೊಳ್ಳುವುದನ್ನು ಈಗಾಗಲೇ ಕಡ್ಡಾಯಗೊಳಿಸಿದೆ. ಈ ಎಲ್ಲ ಕಾರಣಗಳಿಂದಾಗಿ ಮನೆಯಿಂದ ಹೊರ ಹೋಗುವ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳುವ, ಸೋಂಕಿನಿಂದ ದೂರವಿರಲು ಈ ಆ್ಯಪ್​ ಬಳಕೆ ಅಗತ್ಯವಾಗಿದೆ ಎಂಬುದು ಸಾಬೀತಾಗುತ್ತಿದೆ.
ಇನ್ನುಮುಂದೆ ಟೋಲ್​ ಗೇಟ್​ಗಳಲ್ಲಿ ಶುಲ್ಕ ಪಾವತಿಸುವಂತೆಯೇ ಈ ಆ್ಯಪ್​ನಲ್ಲಿ ಸುರಕ್ಷಿತ ಎಂದಿರುವುದು ಕೂಡ ಅಷ್ಟೇ ಅಗತ್ಯವೆನಿಸಲಿದೆ.
ಕರೊನಾ ಲಸಿಕೆ ಎಲ್ಲೇ ಸಂಶೋಧಿಸಲ್ಪಟ್ಟರೂ ಇಲ್ಲಿ ಉತ್ಪಾದನೆ ಖಚಿತ, ಭಾರತದ ಬಳಿಯಲ್ಲೇ ಇರಲಿದೆ ಕೀಲಿ ಕೈ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + 19 =
Remember me
