ನವದೆಹಲಿ:ವಿಶಿಷ್ಠ ಗುರುತಿನ ಸಂಖ್ಯೆ ಆಧಾರ್​ ಜಾರಿಯಾದಾಗ ಅದರ ಬಗ್ಗೆ ಮೂಗು ಮುರಿದವರೇ ಹೆಚ್ಚು. ರಾಜಕೀಯ ಪಕ್ಷಗಳಲ್ಲಂತೂ ಇದರ ವಿರೋಧದಲ್ಲಿ ಬೀದಿಗಿಳಿದು ಹೋರಾಡಿದವು. ಬಳಿಕ ಆಧಾರ್​ ಜೋಡಣೆಯಿಂದ ಸಾವಿರಾರು ಕೋಟಿ ರೂ.ಗಳ ಅಕ್ರಮಕ್ಕೆ ಕಡಿವಾಣ ಹಾಕಲಾಗಿದೆ ಎಂದು ಬೆನ್ನು ತಟ್ಟಿಕೊಂಡವು.
ಪ್ರಸ್ತುತ ಇಂಥದ್ದೇ ಚರ್ಚೆಗೆ ಕಾರಣವಾಗಿರುವುದು ಆರೋಗ್ಯ ಸೇತು ಆ್ಯಪ್​. ಕರೊನಾ ಸೋಂಕು ತಡೆಗಟ್ಟಲು, ವ್ಯಾಪಿಸುವುದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಈ ಆ್ಯಪ್​ ರೂಪಿಸಿದೆ. ಈಗಾಗಲೇ, ಕೇಂದ್ರ ಸರ್ಕಾರಿ ನೌಕರರು ತಮ್ಮ ಸ್ಮಾರ್ಟ್​ಫೋನ್​ನಲ್ಲಿ ಈ ಆ್ಯಪ್​ ಹೊಂದುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ. ಜತೆಗೆ, ವಿಶೇಷ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರೂ ಕೂಡ ಆ್ಯಪ್​ ಹೊಂದಿರಲೇಬೇಕು ಎಂದು ರೈಲ್ವೆ ಇಲಾಖೆ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ;ಕರೊನಾ ವೈರಸ್​ ಕೃತಕ ಸೃಷ್ಟಿ, ಅಮೆರಿಕ ವಾದಕ್ಕೆ ಸಿಕ್ತಾ ಭಾರತದ ಬೆಂಬಲ?
ಇದಲ್ಲದೇ. ಅಂತಾರಾಜ್ಯ ಪ್ರಯಾಣಿಕರು ಸೋಂಕಿತರಲ್ಲ, ಸುರಕ್ಷಿತವಾಗಿದ್ದಾರೆ ಎನ್ನುವುದನ್ನು ಈ ಆ್ಯಪ್​ ಮೂಲಕ ಪತ್ತೆ ಹಚ್ಚಬಹುದು. ಹೀಗಾಗಿ ಪ್ರಯಾಣದ ವೇಳೆ ಈ ಆ್ಯಪ್​ ಹೊಂದಿರುವುದು ಸುರಕ್ಷಿತವೂ ಹೌದು. ಜತೆಗೆ ನಿಮಗೆ ಇ-ಪಾಸ್​ ನೀಡಲು ಈ ಆ್ಯಪ್​ ಹೊಂದಿರಲೇಬೇಕೆಂದು ಹಲವು ರಾಜ್ಯಗಳು ಆದೇಶಿಸಿವೆ. ಲಾಕ್​ಡೌನ್​ ಅವಧಿ ಮುಗಿದ ಬಳಿಕವೂ ಪ್ರಯಾಣಕ್ಕೆ ಇ-ಪಾಸ್​ ಕಡ್ಡಾಯವಾಗಲಿದೆ. ಇದಕ್ಕೆ ಆರೋಗ್ಯ ಸೇತು ಆ್ಯಪ್​ ಆಧಾರವಾಗಲಿದೆ.
ಈ ಎಲ್ಲ ಕಾರಣದಿಂದಾಗಿ ಆರೋಗ್ಯ ಸೇತು ಆ್ಯಪ್​ ಅಥವಾ ಇದರ ಸುಧಾರಿತ ಆವೃತ್ತಿ ವ್ಯಕ್ತಿಗೆ ಆಧಾರ ಸಂಖ್ಯೆಯಷ್ಟೇ ಮುಖ್ಯವಾಗುವುದರಲ್ಲಿ ಸಂದೇಹವೇ ಇಲ್ಲ.
ಇದನ್ನೂ ಓದಿ;ನಂಜನಗೂಡಿನಲ್ಲಿ ತಯಾರಾಗಲಿದೆ ಕರೊನಾಗೆ ಔಷಧ…!
ಚೀನಾದಲ್ಲಿ ಇಂಥದ್ದೇ ಕಾರ್ಯ ನಿರ್ವಹಿಸುವ ಆ್ಯಪ್​ ನಿಮ್ಮ ಸ್ಮಾರ್ಟ್​ಫೋನ್​ನಲ್ಲಿ ಹೊಂದಿಲ್ಲದಿದ್ದರೆ, ನೀವೂ ಎಲ್ಲಿಗೂ ಹೋಗುವಂತಿಲ್ಲ. ಆಫೀಸ್​, ಶಾಪಿಂಗ್​ ಮಾಲ್​, ಸಾರ್ವಜನಿಕ ಸ್ಥಳಗಳಿಗೆ ಹೋಗಬೇಕೆಂದರೆ ಈ ಆ್ಯಪ್​ ಹೊಂದಿರಲೇಬೇಕು. ಅಲ್ಲೆಲ್ಲ ಪ್ರವೇಶಿಸಲು ಇದು ಇ-ಪಾಸ್​ನಂತೆ ಕಾರ್ಯ ನಿರ್ವಹಿಸುತ್ತದೆ. ನೀವು ಸುರಕ್ಷಿತವಾಗಿದ್ದರೆ ಆ್ಯಪ್​ನಲ್ಲಿರುವ ಕ್ಯೂರ್​ ಕೋಡ್​ ಹಸಿರು ಬಣ್ಣ ತೋರಿಸುತ್ತದೆ. ಅದು ಕೆಂಪು ಬಣ್ಣಕ್ಕೆ ತಿರುಗಿದರೆ ಮನೆಯಿಂದ ಹೊರಬರುವಂತಿಲ್ಲ. ಅಷ್ಟೊಂದು ಕಟ್ಟುನಿಟ್ಟು ಚೀನಾದಲ್ಲಿದೆ.
ದಿನ ಕಳೆದಂತೆ ಆರೋಗ್ಯ ಸೇತು ಆ್ಯಪ್​ ಇನ್​ಸ್ಟಾಲ್​ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆರೋಗ್ಯಕರ ಸಂಗತಿ. ಏಪ್ರಿಲ್​ 2ರಂದು ಈ ಆ್ಯಪ್​ ಬಿಡುಗಡೆ ಮಾಡಲಾಗಿತ್ತು. ಆರಂಭದ ಮೂರು ದಿನಗಳಲ್ಲಿಯೇ ಅಂದಾಜು 5 ಕೋಟಿ ಜನರು ಈ ಆ್ಯಪ್​ ಡೌನ್​ ಮಾಡಿಕೊಂಡಿದ್ದು ದಾಖಲೆಯಾಗಿತ್ತು. ಇದೀಗ 13 ದಿನಗಳಲ್ಲಿ 10 ಕೋಟಿ ಜನರು ಈ ಆ್ಯಪ್​ ಬಳಸುತ್ತಿದ್ದಾರೆ. ಇಷ್ಟು ಕಡಿಮೆ ಸಮಯದಲ್ಲಿ ಈ ಪ್ರಮಾಣದಲ್ಲಿ ಈ ಆ್ಯಪ್​ ಬಳಕೆಯಾಗುತ್ತಿರುವುದು ಕೂಡ ದಾಖಲೆಯಾಗಿದೆ.
ಇದನ್ನೂ ಓದಿ;ಜುಲೈ 30, 31 ರಂದು ಸಿಇಟಿ, ಸೆಪ್ಟೆಂಬರ್​ 1ರಂದು ಕಾಲೇಜು ಆರಂಭ
ಹೀಗಿದ್ದ ಮೇಲೆ ಇದಕ್ಕೆ ವಿರೋಧವೂ ವ್ಯಕ್ತವಾಗಿಲ್ಲವೇ ಎಂದು ಕೇಳಬಹುದು. ಹೌದು ವಿರೋಧವೂ ವ್ಯಕ್ತವಾಗಿದೆ. ಆರೋಗ್ಯ ಸೇತು ಆ್ಯಪ್​ ಕಡ್ಡಾಯಗೊಳಿಸುವುದು ಕಾನೂನುಬಾಹಿರ. ಇದರಿಂದ ವ್ಯಕ್ತಿಯ ಖಾಸಗೀತನದ ಹಕ್ಕಿಗೆ ಧಕ್ಕೆಯಾಗಲಿದೆ ಎಂದು ಸುಪ್ರಿಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿಯೊಬ್ಬರು ಹೇಳಿಕೆ ನೀಡಿದ್ದಾರೆ. ಹೀಗಾಗಿ ಈ ವಿಚಾರ ಕೋರ್ಟ್​ ಮೆಟ್ಟಿಲೇರಿದರೂ ಅಚ್ಚರಿಯಿಲ್ಲ.
ಒಂದಂತೂ ನಿಜ ನಮ್ಮ ಸ್ಮಾರ್ಟ್​ಫೋನ್​ಗಳಲ್ಲಿರುವ ಅಷ್ಟೂ ಆ್ಯಪ್​ಗಳಿಂದ ನಮ್ಮೆಲ್ಲ ಖಾಸಗಿ ಮಾಹಿತಿಗಳು, ನಿತ್ಯದ ಚಟುವಟಿಕೆಗಳ ವಿವರವೆಲ್ಲ ಆಯಾ ಕಂಪನಿಗಳ ಸರ್ವರ್​ಗಳಲ್ಲಿ ದಾಖಲಾಗುತ್ತವೆ. ಆರೋಗ್ಯ ಸೇತು ಆ್ಯಪ್​ ಅದಕ್ಕೆ ಹೊರತೇನಲ್ಲ
ಆ್ಯಪ್​ ಕಾರ್ಯನಿರ್ವಹಣೆ ಹೇಗೆ?:ಈ ಆ್ಯಪ್​ ಡೌನ್​ಮಾಡಿಕೊಂಡ ಬಳಿಕ ನಿಮ್ಮ ವ್ಯಕ್ತಿಗತ ವಿವರಗಳನ್ನು ದಾಖಲಿಸಬೇಕಾಗುತ್ತದೆ. ನಿಮ್ಮ ಟ್ರಾವೆಲ್ ಹಿಸ್ಟರಿ ನೀಡಬೇಕಾಗುತ್ತದೆ. ನೀವೇನಾದರೂ ಸೋಂಕಿತರ ಸಂಪರ್ಕಕಕ್ಕೆ ಬಂದರೆ ಅವರಿಂದ ದೂರವಿರುವಂತೆ ಇದು ನಿಮ್ಮನ್ನು ಎಚ್ಚರಿಸುತ್ತದೆ.
ಶಾಲೆಗಳಲ್ಲಿ ಶುರುವಾಗಲಿದೆ ಶಿಫ್ಟ್​, ಎರಡು ದಿನಕ್ಕೊಮ್ಮೆ ಕ್ಲಾಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 5 =
Remember me
