ಗಾಜಿಯಾಬಾದ್​:ಲಾಕ್​ಡೌನ್​ ಸಮಯದಲ್ಲಿ ಯಾರ್ಯಾರು ಏನೇನು ಮಾಡಿದ್ದೀರಿ ಎಂದು ಕೇಳಿದರೆ, ಕೆಲವೊಂದಿಷ್ಟು ಜನರ ತಮ್ಮ ಹೊಸ ರುಚಿಯ ಅಡುಗೆಗಳ ಬಗ್ಗೆ ಹೇಳಬಹುದು. ಇನ್ನೊಂದಿಷ್ಟು ಜನ ತಾವು ಓದಿದ ಪುಸ್ತಕಗಳ ಬಗ್ಗೆ ಹೇಳಿಕೊಳ್ಳಬಹುದು. ಇನ್ನು ಅನೇಕರು ನಿದ್ರೆ, ಫೇಸ್​ಬುಕ್​, ಇನ್​ಸ್ಟಾದಲ್ಲೇ ಕಾಲ ಕಳೆದಿದ್ದಾಗಿ ಹೇಳಿಕೊಳ್ಳಬಹುದು. ಆದರೆ ಏಳು ವರ್ಷದ ಪೋರಿಯೊಬ್ಬಳು ತನ್ನ ಬರೆಯುವ ಆಸಕ್ತಿಗೆ ಇನ್ನಷ್ಟು ಉತ್ತೇಜನ ನೀಡಿ, ಮಕ್ಕಳ ಪುಸ್ತಕವೊಂದನ್ನು ಬಿಡುಗಡೆ ಮಾಡಿ, ಜನರ ಹುಬ್ಬೇರುವಂತೆ ಮಾಡಿದ್ದಾಳೆ. ಈ ಬಾಲಕಿ ಇದೀಗ ವಿಶ್ವದ ಅತ್ಯಂತ ಕಿರಿಯ ಲೇಖಕಿ ಎನ್ನುವ ಹೆಗ್ಗಳಿಕೆಗೂ ಪಾತ್ರಳಾಗಿದ್ದಾಳೆ.
ರಾಷ್ಟ್ರಕವಿ ಮೈಥಿಲಿ ಶರಣ್​ ಗುಪ್ತಾ ಮತ್ತು ಸಂತಕವಿ ಸಿಯಾರಾಮ್​ಶರಣ್​ ಗುಪ್ತಾ ದಂಪತಿ ನಿಮಗೆ ಗೊತ್ತಿರಬಹುದು. ಈಗ ಈ ನೂತನ ದಾಖಲೆ ಬರೆದಿರುವುದು ಇವರ ಮೊಮ್ಮಗಳೇ. ಈ ದಂಪತಿಯ ಮೊಮ್ಮಗಳು ಅಭಿಜಿತಾ ಗುಪ್ತಾ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ತನ್ನ ತಂದೆ ತಾಯಿಯೊಂದಿಗೆ ನೆಲೆಸಿದ್ದಾಳೆ. ಈಕೆಗೆ ಮೊದಲಿನಿಂದಲೂ ಪುಸ್ತಕ, ಬರವಣಿಗೆ ಬಗ್ಗೆ ಸಾಕಷ್ಟು ಆಸಕ್ತಿ ಇತ್ತು. ಆದರೆ ವಿದ್ಯಾಭ್ಯಾಸದ ಕಾರಣದಿಂದಾಗಿ ಅದರತ್ತ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಲಾಕ್​ಡೌನ್​ ಸಮಯದಲ್ಲಿ ಸಾಕಷ್ಟು ಸಮಯ ಸಿಕ್ಕ ಹಿನ್ನೆಲೆಯಲ್ಲಿ, ತನ್ನದೇ ಆದ ಒಂದು ಪುಸ್ತಕವನ್ನು ಬರೆದಿದ್ದಾಳೆ. ಒಂದು ಪುಟ್ಟ ಮಗುವಿನಿಂದ ಮಕ್ಕಳಿಗಾಗಿ ಬರೆಯಲಾದ ಹ್ಯಾಪಿನೆಸ್​ ಆಲ್​ ಅರೌಂಡ್​ ಪುಸ್ತಕವನ್ನು ಪ್ರಕಟಿಸಲಾಗಿದೆ.
ಇದನ್ನೂ ಓದಿ:ವಿಧಾನಸಭೆಯಿಂದ ಅರ್ನಬ್‌ ಗೋಸ್ವಾಮಿಗೆ ಹಕ್ಕುಚ್ಯುತಿ ನೋಟಿಸ್‌: ‘ಸುಪ್ರೀಂ’ ಅಸಮಾಧಾನ
ಬಾಲಕಿಯ ಈ ಸಾಧನೆ ಇಂಟರ್​ನ್ಯಾಷನಲ್​ ಬುಕ್​ ಆಫ್​ ರೆಕಾರ್ಡ್​ನಲ್ಲಿ ದಾಖಲಾಗಿದೆ. ವಿಶ್ವದ ಅತ್ಯಂತ ಕಿರಿಯ ಲೇಖಕಿ ಎಂದು ನಮೂದಿಸಲಾಗಿದೆ. ಏಷ್ಯಾ ಬುಕ್​ ಆಫ್​ ರೆಕಾರ್ಡ್​ನಲ್ಲಿ ಗ್ರ್ಯಾಂಡ್​ ಮಾಸ್ಟರ್​ ಇನ್​ ರೈಟಿಂಗ್​ ಎನ್ನುವ ಶೀರ್ಷಿಕೆಯನ್ನು ಕೊಡಲಾಗಿದೆ.
ಅಭಿಜಿತಾ ತನ್ನ ನಾಲ್ಕನೇ ವಯಸ್ಸಿನಿಂದಲೂ ಬರೆಯುವ ಹವ್ಯಾಸ ಇಟ್ಟುಕೊಂಡಿದ್ದಳಂತೆ. ಆ ವಯಸ್ಸಿಗೆ ತನಗೆ ಬರುತ್ತಿದ್ದ ನಾಲ್ಕೈದು ಪದಗಳನ್ನೇ ಬಳಸಿಕೊಂಡು ಕಥೆಯೊಂದನ್ನು ಬರೆದಿದ್ದಳು. ಮನುಷ್ಯನಿಗೆ ಊಟ ಏಕೆ ಮುಖ್ಯ ಎಂದು ಬರೆದಿದ್ದ ಆ ಕಥೆಯನ್ನು ಪೂರ್ತಿ ಕುಟುಂಬ ಮೆಚ್ಚಿಕೊಂಡಿತ್ತು ಎನ್ನುತ್ತಾರೆ ಅಭಿಜಿತಾ ತಾಯಿ ಅನುಪ್ರಿಯಾ.
ಉದ್ಯಾನವನದ ಹಾಟ್​ಸ್ಟ್ರಿಂಗ್​ನಲ್ಲೇ ಚಿಕನ್​ ಅಡುಗೆ ಮಾಡಿದ ಯುವಕ; ತಕ್ಕ ಶಿಕ್ಷೆ ಕೊಟ್ಟ ಸಿಬ್ಬಂದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 18 =
Remember me
