ಮುಂಬೈ:ಬಾಲಿವುಡ್​​ ನಟ ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ದಂಪತಿ ಪುತ್ರ ನಟ ಅಭಿಷೇಕ್ ಬಚ್ಚನ್ ಕೂಡ ರಾಜಕೀಯಕ್ಕೆ ಬರುತ್ತಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದೆ.

ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ (ಎಸ್‌ಪಿ)ಗೆ ಸೇರುತ್ತಾರೆ, ಅಲಹಾಬಾದ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎನ್ನು ಗುಸುಗುಸು ಶುರುವಾಗಿದೆ. ಆದರೆ ಪಕ್ಷದಿಂದಾಗಲಿ ಅಥವಾ ಅಭಿಷೇಕ್ ಬಚ್ಚನ್ ಅವರಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಅಭಿಷೇಕ್ ರಾಜಕೀಯಕ್ಕೆ ಸೇರುವ ವರದಿಗಳು ವಿಶೇಷವಾಗಿ ಉತ್ತರ ಪ್ರದೇಶದಲ್ಲಿ ಸಾಕಷ್ಟು ಸಂಚಲನವನ್ನು ಸೃಷ್ಟಿಸಿವೆ.

ಇದನ್ನೂ ಓದಿ:ಪರ್ಮಿಶನ್ ಇಲ್ದೆ ಟೊಮ್ಯಾಟೋ ಅಡುಗೆಗೆ ಹಾಕಿದ್ದಕ್ಕೆ ಮನೆ ಬಿಟ್ಟು ಹೋದ ಪತ್ನಿ; ಅರ್ಧ ಕೆಜಿ ಟೊಮ್ಯಾಟೋ ಕೊಟ್ಟು ಕರೆದುಕೊಂಡು ಬಂದ ಪತಿ!
2013 ರಲ್ಲಿ ಸಂದರ್ಶನವೊಂದರಲ್ಲಿ ಅಭಿಷೇಕ್, “ನನ್ನ ಪೋಷಕರು ರಾಜಕೀಯದಲ್ಲಿದ್ದಾರೆ ಆದರೆ ನಾನು ಅದನ್ನೇ ಮಾಡುವುದಿಲ್ಲ. ನಾನು ತೆರೆಯ ಮೇಲೆ ರಾಜಕಾರಣಿಯ ಪಾತ್ರವನ್ನು ಮಾಡಬಹುದು ಆದರೆ ನಿಜ ಜೀವನದಲ್ಲಿ ಅದು ದೊಡ್ಡದು. ನಾನು ಎಂದಿಗೂ ಪ್ರವೇಶಿಸುವುದಿಲ್ಲ” ಎಂದಿದ್ದರು.

ಇದನ್ನೂ ಓದಿ:ನಿತ್ಯಾ ಮೆನನ್ ಮನೆಯಲ್ಲಿ ಸೂತಕದ ಛಾಯೆ; ಅಜ್ಜಿಯನ್ನು ನೆನೆದು ಭಾವುಕರಾದ ನಟಿ
ಜಯಾ ಬಚ್ಚನ್ 2004 ರಲ್ಲಿ SP ಯಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದರು, ಮಾರ್ಚ್ 2006 ರವರೆಗೆ ಉತ್ತರ ಪ್ರದೇಶವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸಿದರು. ಅವರು 2012 ರಲ್ಲಿ ಮೂರನೇ ಅವಧಿಗೆ ಮತ್ತು 2018 ರಲ್ಲಿ ನಾಲ್ಕನೇ ಅವಧಿಗೆ ಮರು ಆಯ್ಕೆಯಾದರು. 1984 ರಲ್ಲಿ, ಅಮಿತಾಬ್ ಬಚ್ಚನ್ ನಟನೆಯಿಂದ ವಿರಾಮ ತೆಗೆದುಕೊಂಡರು ಮತ್ತು ದೀರ್ಘಕಾಲದ ಕುಟುಂಬ ಸ್ನೇಹಿತ ರಾಜೀವ್ ಗಾಂಧಿಯ ಬೆಂಬಲಕ್ಕಾಗಿ ರಾಜಕೀಯ ಪ್ರವೇಶಿಸಿದರು.ಹೀಗೆ ಕುಟಂಬವೇ ರಾಜಕೀಯದಲ್ಲಿರುವಾಗ ಅಭಿಷೇಕ್ ಬಚ್ಚನ್ ಕೂಡಾ ಎಂಟ್ರಿ ಕೋಡ್ತಾರೆ ಎನ್ನುವ ಸುದ್ದಿ ಕೂಡಾ ಹರಿದಾಡುತ್ತಿದೆ.
ಪರ್ಮಿಶನ್ ಇಲ್ದೆ ಟೊಮ್ಯಾಟೋ ಅಡುಗೆಗೆ ಹಾಕಿದ್ದಕ್ಕೆ ಮನೆ ಬಿಟ್ಟು ಹೋದ ಪತ್ನಿ; ಅರ್ಧ ಕೆಜಿ ಟೊಮ್ಯಾಟೋ ಕೊಟ್ಟು ಕರೆದುಕೊಂಡು ಬಂದ ಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − five =
Remember me
