ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಪ್ರಸಿದ್ಧ ಬಾಂಕೆ ಬಿಹಾರಿ ದೇವಸ್ಥಾನದ ಸುತ್ತ ವಾರಾಣಸಿಯ ಕಾಶಿ ವಿಶ್ವನಾಥ ಮಂದಿರ ಕಾರಿಡಾರ್ ಯೋಜನೆಯ ಮಾದರಿಯಲ್ಲಿ ಬೃಹತ್ ಕಾರಿಡಾರ್ ನಿರ್ವಿುಸಲು ಯೋಜನೆ ರೂಪಿಸಲಾಗಿದೆ. ದೇವಾಲಯದ ಸುತ್ತಲಿನ 5 ಎಕರೆ ಜಾಗದಲ್ಲಿ ಪ್ರಸ್ತಾಪಿಸಲಾದ ಈ ಕಾರಿಡಾರ್​ನ ಸಮೀಕ್ಷೆ ಕಾರ್ಯ ಜನವರಿ 3ರಂದು ಪ್ರಾರಂಭವಾಗಿದೆ.
ವೃಂದಾವನವು ಭಗವಾನ್ ಶ್ರೀಕೃಷ್ಣನ ಜನ್ಮಸ್ಥಳ ಮಥುರಾದಿಂದ 20 ಕಿಲೋಮೀಟರ್ ದೂರದಲ್ಲಿದೆ. ಕಾರಿಡಾರ್ ಯೋಜನೆಯನ್ನು 2022ರ ಆಗಸ್ಟ್ನಲ್ಲಿ ಉತ್ತರ ಪ್ರದೇಶದ ಸರ್ಕಾರ ಘೊಷಿಸಿತು. ಇದಕ್ಕಾಗಿ ಸರ್ಕಾರ ಎಂಟು ಸದಸ್ಯರ ಸಮಿತಿಯನ್ನು ಕೂಡ ರಚಿಸಿದೆ. ಈ ಕಾರಿಡಾರ್​ನ ಬಜೆಟ್ 248 ಕೋಟಿ ರೂಪಾಯಿ.
ದೇವಾಲಯದ ಮೂಲ ರಚನೆ, ನಂಬಿಕೆ ಮತ್ತು ಸಂಪ್ರದಾಯಕ್ಕೆ ಧಕ್ಕೆಯಾಗದಂತೆ ಯೋಜನೆ ಜಾರಿಗೊಳಿಸಲಾಗುವುದು ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸ್ಪಷ್ಟಪಡಿಸಿದ್ದಾರೆ. ದೇವಾಲಯದ ಮುಖ್ಯ ಭಾಗವನ್ನು ಬದಲಿಸದೆ ಸಂರಕ್ಷಿಸಲಾಗುವುದು. ಪ್ರವೇಶ ರಸ್ತೆಗಳು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ವಿಸ್ತರಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಕಾರಿಡಾರ್ ಸಮಿತಿ ಹೇಳಿದೆ.
ಪಾರ್ಕಿಂಗ್:ವೃಂದಾವನದಲ್ಲಿ ಮೂರು ರ್ಪಾಂಗ್ ಸೌಲಭ್ಯ ನಿರ್ವಿುಸಲಾಗುತ್ತಿದ್ದು, ಉದ್ದೇಶಿತ ಕಾರಿಡಾರ್​ಗೆ ಲಿಂಕ್ ಮಾಡಲಾಗುತ್ತದೆ. 37,000 ಚದರ ಮೀಟರ್ ವಿಸ್ತೀರ್ಣದಲ್ಲಿ ಯಮುನಾ ನದಿ ದಂಡೆಯಲ್ಲಿ ನಿರ್ವಿುಸಲಾಗುವ ಸೇತುವೆಯು ರ್ಪಾಂಗ್ ಕಾರಿಡಾರ್ ಯೋಜನೆಯ ಭಾಗವಾಗಲಿದೆ. ಇದು 1,550 ವಾಹನಗಳ ನಿಲುಗಡೆ ಅವಕಾಶ ಕಲ್ಪಿಸುತ್ತದೆ. ಯಮುನಾ ಎಕ್ಸ್​ಪ್ರೆಸ್​ವೇಯಿಂದ ಬರುವ ಪ್ರವಾಸಿಗರು ವಾಹನ ನಿಲ್ಲಿಸಬಹುದಾಗಿದೆ.
ಶ್ರೀ ಕೃಷ್ಣನಿಗೆ ಸಮರ್ಪಿತ ಮಂದಿರ:ಉತ್ತರಪ್ರದೇಶದ ಮಥುರಾ ಜಿಲ್ಲೆಯಲ್ಲಿರುವ ಬಾಂಕೆ ಬಿಹಾರಿ ದೇವಾಲಯವನ್ನು 1864ರಲ್ಲಿ ನಿರ್ವಿುಸಲಾಗಿದೆ. ಈ ವೈಷ್ಣವ ಮಂದಿರವನ್ನು ಸ್ವಾಮಿ ಹರಿದಾಸರು ನಿರ್ವಿುಸಿದರು. ಬಾಂಕೆ ಬಿಹಾರಿ ಎಂಬ ಹೆಸರಿಗೆ ವಿಶೇಷ ಅರ್ಥವಿದೆ. ಬಾಂಕೆ ಎಂದರೆ ‘ಮೂರು ಕೋನಗಳಲ್ಲಿ ಬಾಗಿದ’ (ತ್ರಿಭಂಗ ಭಂಗಿ) ಮತ್ತು ಬಿಹಾರಿ (ವಿಹಾರಿ) ಎಂದರೆ ಶ್ರೇಷ್ಠ ಆಸ್ವಾದಕ ಎಂದರ್ಥ. ಭಗವಾನ್ ಕೃಷ್ಣನಿಗೆ ಸಮರ್ಪಿತವಾಗಿರುವ ಈ ದೇವಾಲಯವು ವೃಂದಾವನದಲ್ಲಿ ಹೆಚ್ಚು ಭೇಟಿ ನೀಡುವ ಮಂದಿರಗಳಲ್ಲಿ ಒಂದಾಗಿದೆ.
ಗುಡಿಯಲ್ಲಿ ಸ್ಥಳಾವಕಾಶದ ಕೊರತೆ:ಸದ್ಯ ದೊಡ್ಡ ಸಮಸ್ಯೆ ಎಂದರೆ, ದರ್ಶನಕ್ಕೆ ಬರುವ ಅಪಾರ ಸಂಖ್ಯೆಯ ಭಕ್ತಾದಿಗಳಿಗೆ ಏಕಕಾಲಕ್ಕೆ ಪ್ರವೇಶಾವಕಾಶ ಕಲ್ಪಿಸಲು ದೇವಸ್ಥಾನದಲ್ಲಿ ಸಾಕಷ್ಟು ಸ್ಥಳಾವಕಾಶವಿಲ್ಲ. ದೇವಸ್ಥಾನದ ಹೊರಗಿನ ಪ್ರದೇಶ ಮತ್ತು ಕಿರಿದಾದ ಕಾಲುದಾರಿಗಳಲ್ಲಿ ಜನಸಂದಣಿ ಮತ್ತು ನೂಕುನುಗ್ಗಲು ಉಂಟಾಗುತ್ತದೆ. ಕಳೆದ ಆಗಸ್ಟ್ ತಿಂಗಳಲ್ಲಿ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಕಾಲ್ತುಳಿತ, ಉಸಿರುಗಟ್ಟುವಿಕೆಯಿಂದಾಗಿ ಇಬ್ಬರು ಸಾವನ್ನಪ್ಪಿದ್ದರು. ಈ ಸಮಸ್ಯೆಯನ್ನು ನಿವಾರಿಸಲು ದೇವಾಲಯದಲ್ಲಿನ ಇಕಟ್ಟಿನ ಜಾಗ ವಿಸ್ತರಿಸುವುದಕ್ಕೆ ಕಾರಿಡಾರ್ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ.
ಹೀಗಿದೆ ಯೋಜನೆ:ಪ್ರಸ್ತುತ ಗರ್ಭಗುಡಿ ಬಳಿ ಏಕಕಾಲಕ್ಕೆ 800 ಭಕ್ತರಿಗೆ ಅವಕಾಶ ಕಲ್ಪಿಸಬಹುದಾಗಿದೆ. ಕಾರಿಡಾರ್ ಅಭಿವೃದ್ಧಿಪಡಿಸಿದ ನಂತರ 5,000 ಭಕ್ತರು ಪ್ರವೇಶಿಸುವಷ್ಟು ಸ್ಥಳಾವಕಾಶ ಲಭ್ಯವಾಗಲಿದೆ. ಭಕ್ತರು ಕಾರಿಡಾರ್​ಗೆ ಪ್ರವೇಶಿಸಲು ಮೂರು ಪ್ರವೇಶ ದ್ವಾರಗಳಿರುತ್ತವೆ. ಮೊದಲ ಪ್ರವೇಶದ್ವಾರವು ಜುಗಲ್ ಘಾಟ್​ನಿಂದ, ಎರಡನೇ ಮಾರ್ಗವು ವಿದ್ಯಾಪೀಠ ಚೌಕದಿಂದ ಮತ್ತು ಮೂರನೇ ಪ್ರವೇಶವು ಬಾಂಕೆ ಬಿಹಾರಿ ಜಾಡೋನ್ ರ್ಪಾಂಗ್ ಪ್ರದೇಶದಿಂದ ಇರುತ್ತದೆ. ಉದ್ದೇಶಿತ ಕಾರಿಡಾರ್ ಎರಡು ಅಂತಸ್ತಿನದ್ದಾಗಿರಲಿದೆ. ಈ ಎರಡೂ ಮಹಡಿಗಳು ಎಲ್ಲ ಸೌಕರ್ಯಗಳನ್ನು ಹೊಂದಿರಲಿವೆೆ. ಇವುಗಳ ವಿಸ್ತೀರ್ಣ ಕ್ರಮವಾಗಿ 5000 ಚದರ ಮೀಟರ್ ಮತ್ತು 650 ಚದರ ಮೀಟರ್ ಆಗಿರಲಿದೆ.
ಸ್ಥಳೀಯರ ವಿರೋಧ:ಬಾಂಕೆ ಬಿಹಾರಿ ಕಾರಿಡಾರ್ ಯೋಜನೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಉದ್ದೇಶಿತ ಯೋಜನೆಯಿಂದಾಗಿ ತಮ್ಮನ್ನು ಸ್ಥಳಾಂತರಿಸಲಾಗುತ್ತಿದ್ದು, ಇದರಿಂದ ದೈನಂದಿನ ಜೀವನಕ್ಕೆ ಅಡಚಣೆಯಾಗುತ್ತದೆ ಎಂದು ದೂರಿದ್ದಾರೆ. ಅರ್ಚಕರು ಮತ್ತು ಅಂಗಡಿಕಾರರು ರಕ್ತದಿಂದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಯೋಜನೆ ಕೈಬಿಡುವಂತೆ ಒತ್ತಾಯಿಸಿದ್ದಾರೆ. ಎರಡು ದಿನಗಳಿಂದ ಈ ಪ್ರದೇಶದಲ್ಲಿನ ಮಾರುಕಟ್ಟೆಗಳನ್ನು ಮುಚ್ಚಲಾಗಿದ್ದು, ದೇವಸ್ಥಾನದ ಅರ್ಚಕರು ಸಹ ಸ್ಥಳೀಯ ನಿವಾಸಿಗಳ ಬೆಂಬಲಕ್ಕೆ ನಿಂತಿದ್ದಾರೆ. ಈಗ ಈ ವಿಷಯ ನ್ಯಾಯಾಲಯದ ಮೆಟ್ಟಿಲನ್ನು ಕೂಡ ಏರಿದೆ. ಅಲಹಾಬಾದ್ ಹೈಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್​ನಲ್ಲಿ ಈ ತಿಂಗಳ ಕೊನೆಯಲ್ಲಿ ವಿಚಾರಣೆ ನಡೆಯಲಿದೆ. ದೇವಾಲಯದ ಸುತ್ತ ಐದು ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಯೋಜಿಸಿದೆ. ನೂರಾರು ವರ್ಷಗಳಿಂದ ಜನರು ವಾಸಿಸುವ ಸುಮಾರು 300 ದೇವಾಲಯಗಳು ಮತ್ತು ವಸತಿ ಕಟ್ಟಡಗಳನ್ನು ಈ ಪ್ರದೇಶ ಒಳಗೊಂಡಿದೆ. ಕಾರಿಡಾರ್ ನಿರ್ವಣವಾದರೆ ಈ 300 ಕಟ್ಟಡಗಳು ನೆಲಸಮವಾಗಲಿವೆ ಎಂದು ಹೇಳಲಾಗಿದೆ. ನೂರಾರು ವರ್ಷಗಳಿಂದ ಮನೆಗಳಲ್ಲಿ ದೇವಾಲಯಗಳನ್ನು ನಿರ್ವಿುಸಿ ದೇವರನ್ನು ಪೂಜಿಸುತ್ತಿದ್ದು, ಅವುಗಳನ್ನು ಕೆಡವಿದರೆ ನಂಬಿಕೆಗೆ ಧಕ್ಕೆಯಾಗಲಿದೆ ಎಂದು ಪ್ರತಿಭಟನಾನಿರತ ನಿವಾಸಿಗಳು ಹೇಳುತ್ತಾರೆ.
ಯೋಜನೆ ಪರ ಸಂಸದೆ ಹೇಮಾಮಾಲಿನಿ:ಕಾರಿಡಾರ್​ನಿಂದಾಗಿ ಅಂತಾರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ದ್ವಾರಗಳು ತೆರೆದುಕೊಳ್ಳುತ್ತವೆ. ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಯಾತ್ರಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಮಥುರಾ ಲೋಕಸಭಾ ಸದಸ್ಯೆ ಹಾಗೂ ಬಾಲಿವುಡ್ ನಟಿ ಬಿಜೆಪಿಯ ಹೇಮಾಮಾಲಿನಿ ಹೇಳಿದ್ದಾರೆ. ವ್ಯಾಪಾರಿಗಳು, ಪುರೋಹಿತರು ಮತ್ತು ನಿವಾಸಿಗಳ ಕಾಳಜಿಯನ್ನು ನಾನು ಒಪು್ಪತ್ತೇನೆ. ದೇಗುಲದ ಸೊಬಗು ಪುರಾತನ ಕಾಲದಲ್ಲಿ ಹೇಗಿತ್ತೋ ಹಾಗೆಯೇ ಇರುವಂತೆ ಕಾರಿಡಾರ್ ನಿರ್ವಿುಸಲಾಗುವುದು. ಯೋಜನೆಯಿಂದ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ’ ಎಂದು ಹೇಳಿದ್ದಾರೆ.
ಅಂಗಡಿಗಳ ಸ್ಥಳಾಂತರ ಕಟ್ಟಡಗಳಿಗೆ ಪರಿಹಾರ:ಉದ್ದೇಶಿತ ಕಾರಿಡಾರ್​ನ ನೆಲ ಅಂತಸ್ತಿನಲ್ಲಿ ಪೂಜಾ ಅಂಗಡಿಗಳಿಗೆ 800 ಚದರ ಮೀಟರ್ ಜಾಗ ದೊರೆಯಲಿದೆ. ಪ್ರಸ್ತುತ ಅಸ್ತವ್ಯಸ್ತವಾಗಿರುವ ಬೀದಿಗಳ ಎರಡೂ ಬದಿಯಲ್ಲಿರುವ ಅಂಗಡಿಗಳನ್ನು ಮರು ಅಭಿವೃದ್ಧಿ ಯೋಜನೆಗಾಗಿ ಕೆಡವಲಾಗುವುದು. ಈಗಿರುವ ಅಂಗಡಿಕಾರರ ಜೀವನೋಪಾಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಸರ್ಕಾರ ಉದ್ದೇಶಿಸಿದೆ. ಈ ಕಾರಿಡಾರ್​ಗಾಗಿ ಸ್ವಾಧೀನಪಡಿಸಿಕೊಳ್ಳಬೇಕಾದ 325 ಆಸ್ತಿಗಳ ಮಾಲೀಕರಿಗೆ ಸರ್ಕಾರ ಪರಿಹಾರ ನೀಡಲಿದೆ. ಈ ಮನೆಗಳು ಮತ್ತು ಅಂಗಡಿಗಳ ಮಾಲೀಕರಿಗೆ ಒಟ್ಟು 200 ಕೋಟಿ ರೂಪಾಯಿ ಪರಿಹಾರ ನೀಡಲು ಶಿಫಾರಸು ಮಾಡಲಾಗಿದೆ.
ಇಬ್ಬರು ವಯಸ್ಕ ಪುತ್ರಿಯರ ಜತೆ ನದಿಗೆ ಹಾರಿದ ತಾಯಿ; ಮೂವರ ಶವವೂ ಪತ್ತೆ

ಜಿಮ್​ನಲ್ಲಿ ಮಾತಾಡ್ತ ಮಾತಾಡ್ತ ಕುಸಿದು ಬಿದ್ದು ಸಾವಿಗೀಡಾದ ಬಾಡಿಬಿಲ್ಡರ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
