ನವದೆಹಲಿ:ವಿಶ್ವದ ಅತಿ ಸಣ್ಣ ರಾಷ್ಟ್ರಗಳಲ್ಲಿ ಒಂದಾಗಿರುವ ಲಾತ್ವಿಯಾದಲ್ಲೂ ಕರೊನಾ ವೈರಸ್ ಹಾವಳಿ ಹೆಚ್ಚಾಗಿದೆ. ಇಲ್ಲಿನ ರಾಜಧಾನಿ ರೀಗಾಕ್ಕೆ ಶಿಕ್ಷಣಕ್ಕಾಗಿ ಬಂದಿರುವ 300 ಭಾರತೀಯ ವಿದ್ಯಾರ್ಥಿಗಳು ಮತ್ತು 50-60 ಉದ್ಯಮಿಗಳು ಆತಂಕದ ನೆರಳಲ್ಲಿ ದಿನ ದೂಡುತ್ತಿದ್ದಾರೆ.
ಫೆಬ್ರವರಿ ಅಂತ್ಯದಲ್ಲೇ ಲಾತ್ವಿಯಾದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೊಷಣೆಯಾಗಿದೆ. ಬಹುತೇಕ ವಿದ್ಯಾರ್ಥಿಗಳು ಅರೆಕಾಲಿಕ ನೌಕರಿ ಮಾಡುತ್ತಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಪಡೆಯುತ್ತಿದ್ದವರು. ಆದರೆ ಒಂದೂವರೆ ತಿಂಗಳಿಂದ ಕೆಲಸವಿಲ್ಲದೆ ಹಣ ಸಂಪಾದನೆಯೂ ಸಾಧ್ಯವಾಗಿಲ್ಲ. ಬಂದ್ ಸ್ಥಿತಿ ಹಲವು ದಿನ ಮುಂದುವರಿಯುವ ಸಾಧ್ಯತೆಯಿರುವುದರಿಂದ ವಿದ್ಯಾರ್ಥಿಗಳೆಲ್ಲರೂ ಭಾರತಕ್ಕೆ ಮರಳಬೇಕೆಂದಿದ್ದಾರೆ. ಇದಕ್ಕಾಗಿ ಆನ್​ಲೈನ್ ಅಭಿಯಾನವನ್ನೂ ಶುರುಮಾಡಿದ್ದಾರೆ.
ಆಹಾರವೂ ಇಲ್ಲದೇ ಕಂಗಾಲು:ಲಾತ್ವಿಯಾದಲ್ಲಿ ಭಾರತದ ರಾಯಭಾರ ಕಚೇರಿಗಳಿಲ್ಲ. ಹೀಗಾಗಿ, ಸ್ವೀಡನ್​ನಲ್ಲಿರುವ ರಾಯಭಾರ ಕಚೇರಿಯನ್ನೇ ಲಾತ್ವಿಯಾದ ಭಾರತೀಯರು ಅವಲಂಬಿಸಬೇಕಿರುವುದರಿಂದ ಇಂಡೋ-ಲಾತ್ವಿಯಾ ಕಲ್ಚರಲ್ ಆಂಡ್ ಎಕನಾಮಿಕ್ ಫೋರಂ ಮದ್ಯವರ್ತಿಯಂತೆ ಕೆಲಸ ಮಾಡುತ್ತಿದೆ. ಆಹಾರ ಸಾಮಗ್ರಿ ಕೊರತೆ ಎದುರಿಸುತ್ತಿದ್ದ ವಿದ್ಯಾರ್ಥಿಗಳಿಗೆ ಈ ಸಂಸ್ಥೆಯ ಅಧ್ಯಕ್ಷರಾಗಿರುವ ಸನ್ನಿ ಮೊಟ್ವಾನಿ ಅವರು ತಮ್ಮ ಇಂಡಿಯನ್ ರಾಜಾ ರೆಸ್ಟೋರಂಟ್​ನಿಂದ ಶನಿವಾರ ಆಹಾರ ಸಾಮಗ್ರಿಗಳನ್ನು ತಲುಪಿಸಿದ್ದಾರೆ. ಸಾಮಾನ್ಯ ದಿನಗಳಲ್ಲಿ ಇಲ್ಲಿ ಆಂಬುಲೆನ್ಸ್​ಗಳಿಗೆ 80-85 ಯೂರೋ ನೀಡಬೇಕಾಗುತ್ತದೆ. ಆದರೆ ಕರೊನಾ ಬಂದ ನಂತರ ಒಂದು ಬಾರಿ ಆಂಬುಲೆನ್ಸ್ ಬಳಸಿದರೆ 150 ಯೂರೋವನ್ನು ಆಸ್ಪತ್ರೆಗಳು ಕೇಳುತ್ತಿವೆ. ಇದು ಕೂಡ ವಿದ್ಯಾರ್ಥಿಗಳನ್ನು ಮತ್ತಷ್ಟು ಚಿಂತೆಗೆ ತಳ್ಳಿದೆ. 18 ಲಕ್ಷ ಜನಸಂಖ್ಯೆ ಇರುವ ಲಾತ್ವಿಯಾದಲ್ಲಿ 350 ಮಂದಿಗೆ ಕೋವಿಡ್-19 ಖಚಿತವಾಗಿದ್ದು, ಸದ್ಯಕ್ಕೆ ಯಾವುದೇ ಸಾವಿನ ಪ್ರಕರಣ ಕೇಳಿಬಂದಿಲ್ಲ. ಭಾನುವಾರ ಒಂದೇ ದಿನ 46 ಹೊಸ ಪ್ರಕರಣಗಳು ದಾಖಲಾಗಿವೆ.
ರಾಜ್ಯದ 20 ವಿದ್ಯಾರ್ಥಿಗಳು
ಸರ್ಕಾರ ನಮ್ಮನ್ನು ಉಚಿತವಾಗಿ ಕರೆದೊಯ್ಯುವುದು ಬೇಡ. ವೆಚ್ಚವನ್ನು ನಾವೇ ಭರಿಸುತ್ತೇವೆ ಎನ್ನುತ್ತಿದ್ದಾರೆ ವಿದ್ಯಾರ್ಥಿಗಳು. ಇವರಲ್ಲಿ ಕರ್ನಾಟಕ ಮೂಲದ 20 ವಿದ್ಯಾರ್ಥಿಗಳೂ ಇದ್ದಾರೆ. ‘ಮಾರ್ಚ್ 25ರಂದು ಭಾರತದಲ್ಲಿ ಲಾಕ್​ಡೌನ್ ಘೊಷಣೆಯಾಗಿದ್ದರಿಂದ ವಿದ್ಯಾರ್ಥಿಗಳ ವಿಮಾನ ಟಿಕೆಟ್ ರದ್ದುಗೊಂಡವು. ಅಪಾರ್ಟ್​ವೆುಂಟ್​ನಲ್ಲಿ ವಾಸ್ತವ್ಯ ಹೂಡಿರುವ ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ಅಂದಾಜು 30-40 ಸಾವಿರ ರೂ. ಖರ್ಚಾಗುತ್ತಿದೆ. ಹಣ ಸಂಪಾದನೆ ಸಾಧ್ಯವಾಗದೆ ವಿದ್ಯಾರ್ಥಿಗಳೀಗ ಆರ್ಥಿಕ ಹೊರೆ ಅನುಭವಿಸುತ್ತಿದ್ದಾರೆ. ನಮ್ಮಿಂದಾದಷ್ಟು ಆಹಾರ ಸಾಮಗ್ರಿಯನ್ನು ವಿದ್ಯಾರ್ಥಿ ಗಳಿಗೆ ಪೂರೈಕೆ ಮಾಡುತ್ತಿದ್ದೇವೆ’ ಎಂದು ಇಂಡೋ- ಲಾತ್ವಿಯಾ ಕಲ್ಚರಲ್ ಆಂಡ್ ಎಕನಾಮಿಕ್ ಫೋರಂನ ವಿದ್ಯಾರ್ಥಿ ಮತ್ತು ಮಾರ್ಕೆಟಿಂಗ್ ವಿಭಾಗದ ಅಬು ಸೊಹೇಲ್ ರೆಹಮಾನ್ ವಿಜಯವಾಣಿ ಜತೆ ಮಾಹಿತಿ ಹಂಚಿಕೊಂಡಿದ್ದಾರೆ. ಇವರು ತುಮಕೂರು ಮೂಲದವರು.
| ರಾಘವ ಶರ್ಮ ನಿಡ್ಲೆ
ಚೀನಾದ ಮೊದಲ ಕರೊನಾ ಸೋಂಕಿತೆಯಿಂದ ಸ್ಫೋಟಕ ಮಾಹಿತಿ: ಜೀವಂತ ಪ್ರಾಣಿ ಮಾರುಕಟ್ಟೆ ವೈರಸ್​ ಹುಟ್ಟಿನ ಕೇಂದ್ರವಾಯಿತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + nine =
Remember me
