ಕೊಚ್ಚಿ:ಮೂರೂವರೆ ವರ್ಷದ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪೂಜಾರಿಯೊಬ್ಬನಿಗೆ ನ್ಯಾಯಾಲಯವು 45 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ.
ಉದಯಂಪೇರೂರ್ ಮೂಲದ ಪುರುಷೋತ್ತಮನ್ (83) ಶಿಕ್ಷೆಗೆ ಗುರಿಯಾದ ಪೂಜಾರಿ. 45 ವರ್ಷಗಳ ಶಿಕ್ಷೆ ಮಾತ್ರವಲ್ಲದೆ, 80 ಸಾವಿರ ರೂ. ದಂಡವನ್ನು ಸಹ ವಿಧಿಸಲಾಗಿದೆ. ಎರ್ನಾಕುಲಂನ ಪ್ರಿನ್ಸಿಪಲ್​​ ಪೊಕ್ಸೊ ನ್ಯಾಯಾಲಯ ಮಹತ್ವದ ಆದೇಶವನ್ನು ಹೊರಡಿಸಿದೆ.
2019-2020ರಲ್ಲಿ ದೇವಸ್ಥಾನದ ಪೂಜಾರಿಯಾಗಿದ್ದ ಆರೋಪಿ ಪುರುಷೋತ್ತಮನ್​, ಮೂರೂವರೆ ವರ್ಷದ ಮಗುವಿಗೆ ಸಕ್ಕರೆ ಮಿಠಾಯಿ ಮತ್ತು ದ್ರಾಕ್ಷಿ ಆಮಿಷವೊಡ್ಡಿ, ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ. ಮಗುವಿನ ವರ್ತನೆಯಲ್ಲಿ ಬದಲಾವಣೆಗಳು ಕಂಡ ಬಳಿಕ, ತಪಾಸಣೆ ನಡೆಸಿದಾಗ ಆಕೆಯ ಮೇಲೆ ಆತ್ಯಾಚಾರ ನಡೆದಿರುವುದು ಬೆಳಿಕಿಗೆ ಬಂದಿತ್ತು.
ಮಗುವಿನ ಹೇಳಿಕೆ ಆಧಾರದ ಮೇಲೆ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಪುರುಷೋತ್ತಮನ್​ನನ್ನು ಬಂಧಿಸಿದ್ದರು. ವಿಚಾರಣೆಯ ವೇಳೆ ಆರೋಪಿಯು ಪೊಕ್ಸೊ ಕಾಯ್ದೆ ಸೇರಿದಂತೆ ಹತ್ತು ಅಪರಾಧಗಳಲ್ಲಿ ತಪ್ಪಿತಸ್ಥ ಎಂದು ಸಾಬೀತಾದ ನಂತರ ತೀರ್ಪು ಹೊರಬಿದ್ದಿದೆ. ಮೊಮ್ಮಗಳ ವಯಸ್ಸಿನ ಮಗುವಿನ ಮೇಲೆ ಆತ ಮಾಡಿದ ಕೃತ್ಯವು ಕ್ರೂರವಾಗಿದ್ದು, ಯಾವುದೇ ಕರುಣೆಗೆ ಅರ್ಹವಾಗಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಆರೋಪಿಗಳಿಂದ ವಸೂಲಾದ ದಂಡದ ಮೊತ್ತವನ್ನು ಬಾಲಕಿಯ ಕುಟುಂಬಕ್ಕೆ ವರ್ಗಾಯಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.(ಏಜೆನ್ಸೀಸ್​)
ಪೊಲೀಸರ ಕೈಗೆ ಸಿಕ್ಕಿಬಿದ್ದ 16 ಪಾನಮತ್ತ ಬಸ್​ ಚಾಲಕರಿಗೆ ವಿಚಿತ್ರ ಶಿಕ್ಷೆ! 1000 ಬಾರಿ ಬರೆದ ಬಳಿಕ ಸಿಕ್ತು ಜಾಮೀನು

ಆಪರೇಷನ್​ ಜೆಡಿಎಸ್​ಗೆ ಕೈ ಹಾಕಿದ ಎಚ್​ಡಿಕೆ: ಹುಬ್ಬಳ್ಳಿಯಲ್ಲಿ ಬಿಜೆಪಿಯ ವಿಕೆಟ್ ಪತನ ಆಗೋದು ಖಚಿತ

ಮಕ್ಕಳ ಪರೀಕ್ಷೆ; ತಾಯಂದಿರ ಅಗ್ನಿಪರೀಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
