ಕಾಮರೂಪ್​​ (ಅಸ್ಸಾಂ):ಎಬಿವಿಪಿ ಕಾರ್ಯಕರ್ತೆಯೊಬ್ಬರು ತಮ್ಮ ಮದುವೆಗಾಗಿ ಕೂಡಿಟ್ಟುಕೊಂಡಿದ್ದ 1 ಲಕ್ಷ ರೂ. ಅನ್ನು ಕೋವಿಡ್​ 19 ಪರಿಹಾರ ಕಾರ್ಯಗಳಿಗಾಗಿ ಬಳಸಲು ಅಸ್ಸಾಂ ಸಿಎಂ ಪರಿಹಾರ ನಿಧಿಗೆ ದೇಣಿಗೆಯಾಗಿ ಕೊಟ್ಟು ಔದಾರ್ಯ ಮೆರೆದಿದ್ದಾರೆ.
ಕಾಮರೂಪ್​​ ಜಿಲ್ಲೆಯ ರಂಗಿಯಾ ಘಟಕದ ಜಂಟಿ ಕಾರ್ಯದರ್ಶಿ ರೀಮಾ ಘೋಷ್​ ದೇಣಿಗೆ ನೀಡಿದವರು. ರಂಗಿಯಾ ಶಾಸಕ ಭಾಪೇಶ್​ ಕಾಲಿಟಾ ಮೂಲಕ ಈ ಹಣವನ್ನು ಅವರು ಸಿಎಂ ಪರಿಹಾರನಿಧಿಗೆ ಅರ್ಪಿಸಿದರು.
ಇದನ್ನೂ ಓದಿ:ಮುಂಬೈ ಆಸ್ಪತ್ರೆಯಲ್ಲಿ ಶವಗಳ ಪಕ್ಕದಲ್ಲೇ ಕರೊನಾ ಸೋಂಕಿತರಿಗೆ ಚಿಕಿತ್ಸೆ
ನಾಗರಿಕ ಸೇವೆ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದ್ದ ರೀಮಾ ಘೋಷ್​, ಲಾಕ್​ಡೌನ್​ ತೆರವಾದ ಬಳಿಕ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ಬಯಕೆ ಹೊಂದಿದ್ದರು.
ನಾನು ಆರು ವರ್ಷದವಳಾಗಿದ್ದಾಗಿನಿಂದ ನನ್ನ ತಂದೆ ನನ್ನ ಮದುವೆಗಾಗಿ ಹಣವನ್ನು ಉಳಿಸುತ್ತಿದ್ದರು. ಹೀಗೆ 1,00,099 ರೂ. ಉಳಿತಾಯವಾಗಿತ್ತು. ಈ ಹಣವನ್ನು ನಾನು ಸ್ನಾತಕೋತ್ತರ ಪದವಿ ವ್ಯಾಸಂಗಕ್ಕೆ ಬಳಸಿಕೊಳ್ಳಲು ಬಯಸಿದ್ದೆ. ಆದರೆ ಈ ನನ್ನ ಬಯಕೆಯನ್ನು ಈಡೇರಿಸಿಕೊಳ್ಳುವ ಮುನ್ನ ಕೋವಿಡ್​ 19 ಪಿಡುಗು ಬಂದು ಅಪ್ಪಳಿಸಿತು. ಇದರಿಂದಾಗಿ ಸಾಕಷ್ಟು ಜನರು ತೊಂದರೆಗೆ ಒಳಗಾದರು. ಅವರೆಲ್ಲರಿಗೂ ನನ್ನ ಕೈಯಲ್ಲಾದಷ್ಟು ಸಹಾಯ ಮಾಡಲು ಈ ಹಣವನ್ನು ಸಿಎಂ ಪರಿಹಾರ ನಿಧಿಗೆ ಅರ್ಪಿಸಲು ನಿರ್ಧರಿಸಿದೆ ಎಂದು ರೀಮಾ ಘೋಷ್​ ಹೇಳಿದ್ದಾರೆ.
ಉಳಿತಾಯದ ಹಣವನ್ನು ಸಿಎಂ ಪರಿಹಾರ ನಿಧಿಗೆ ಅರ್ಪಿಸುವುದಾಗಿ ಪ್ರಸ್ತಾಪಿಸಿದಾಗ ತಂದೆ ಕೂಡ ತುಂಬುಹೃದಯದಿಂದ ಒಪ್ಪಿಗೆ ಸೂಚಿಸಿದರು. ಇದಕ್ಕಾಗಿ ಅವರಿಗೆ ಕೃತಜ್ಞತೆ ಅರ್ಪಿಸಲು ಬಯಸುವುದಾಗಿ ತಿಳಿಸಿದ್ದಾರೆ.
ವಿಷಾನಿಲ ದುರಂತ; ಮೃತರ ಕುಟುಂಬಗಳಿಗೆ ಒಂದು ಕೋಟಿ ರೂ. ಪರಿಹಾರ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + five =
Remember me
