ನವದೆಹಲಿ:ವಾಹನೋದ್ಯಮದ ಒಂದು ಮಹತ್ವದ ಬೆಳವಣಿಗೆಯಲ್ಲಿ, 2025 ಅಕ್ಟೋಬರ್​ 1ರಿಂದ ಉತ್ಪಾದಿಸಲಾಗುವ ಎಲ್ಲ ಎನ್​2 ಮತ್ತು ಎನ್​3 ವಾಣಿಜ್ಯ ವಿಭಾಗದ ಟ್ರಕ್​ಗಳಲ್ಲಿ ಚಾಲಕರಿಗೆ ಹವಾನಿಯಂತ್ರಿತ ಕ್ಯಾಬಿನ್​ ಕಡ್ಡಾಯಗೊಳಿಸಿ ರಸ್ತೆ, ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಚಾಲಕರಿಗೆ ಫ್ಯಾಕ್ಟರಿ-ಫಿಟ್ಟೆಡ್​ ಎಸಿ ಕ್ಯಾಬಿನ್​ಗಳನ್ನು ಅಳವಡಿಸುವಂತೆ ಅದು ಸೂಚಿಸಿದೆ. ಚಾಲಕರ ಆರೋಗ್ಯದ ದೃಷ್ಟಿಯಿಂದ ಅನುಕೂಲವಾಗುವ ಈ ಕ್ರಮದಿಂದ ಟಾಟಾ, ಅಶೋಕ್​ ಲೈಲ್ಯಾಂಡ್​ ಮತ್ತು ಮಹೀಂದ್ರಾ ಮುಂತಾದ ಟ್ರಕ್​ ಉತ್ಪಾದಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ. ಜುಲೈ 10ರಂದು ಈ ಅಧಿಸೂಚನೆ ಹೊರಡಿಸಲಾಗಿದೆ.
ಟ್ರಕ್ ಚಾಲಕರು ಸತತ ಸುದೀರ್ಘ ಅವಧಿಗೆ ವಾಹನ ಚಾಲನೆ ಮಾಡಬೇಕಾಗಿದ್ದು, ಕ್ಯಾಬಿನ್ ಬಿಸಿಯೇರುತ್ತದೆ. ಸರಕು ಸಾಗಣೆಯಲ್ಲಿ ಮಹತ್ವದ ಪಾತ್ರ ವಹಿಸುವ ಇವರ ಯೋಗಕ್ಷೇಮ ಮುಖ್ಯ ಎಂದು ಮನಗಂಡಿರುವ ಸರಕಾರ ಇದು ವೆಚ್ಚದಾಯಕ ಎಂಬ ಆಕ್ಷೇಪಗಳ ನಡುವೆ ಈ ತೀರ್ಮಾನ ಕೈಗೊಂಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + thirteen =
Remember me
