ಜೈಪುರ: ರಾಜಸ್ಥಾನ ರಾಜಕೀಯದ ಸ್ವರೂಪ ದಿನದಿನಕ್ಕೂ ಬದಲಾಗುತ್ತಿದೆ. ಇದೀಗ ಕಾಂಗ್ರೆಸ್​ನಿಂದ ಉಚ್ಚಾಟನೆಗೊಂಡಿರುವ ಶಾಸಕರಾದ ಭನ್ವರ್​ಲಾಲ್​ ಶರ್ಮಾ ಮತ್ತು ವಿಶ್ವೇಂದ್ರ ಸಿಂಗ್​ ಅವರಿಗೆ ರಾಜಸ್ಥಾನ ಭ್ರಷ್ಟಾಚಾರ ವಿರೋಧಿ ದಳ ನೋಟಿಸ್​ ನೀಡಿದ್ದು, ಮೂರು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ.
ರಾಜಸರ್ಕಾರವನ್ನು ಉರುಳಿಸಲು ಬಿಜೆಪಿಯೊಂದಿಗೆ ಸೇರಿ ಹುನ್ನಾರ ನಡೆಸುತ್ತಿದ್ದಾರೆ ಎಂಬ ಆರೋಪದಡಿ ಕಾಂಗ್ರೆಸ್ ಇವರಿಬ್ಬರನ್ನೂ ಉಚ್ಚಾಟನೆ ಮಾಡಿತ್ತು.  ಅದಕ್ಕೆ ಸಂಬಂಧಪಟ್ಟಂತೆ ಮೂರು ಆಡಿಯೋ ಕ್ಲಿಪ್​ನ್ನು ಕೂಡ ಕಾಂಗ್ರೆಸ್ ಬಿಡುಗಡೆ ಮಾಡಿದೆ. ಆಡಿಯೋ ಕ್ಲಿಪ್​ನ ಸಂಭಾಷಣೆಗೆ ಸಂಬಂಧಪಟ್ಟಂತೆ ಭನ್ವರ್​ಲಾಲ್ ಅವರ ವಿರುದ್ಧ ಎಸಿಬಿ ಜು.17ರಂದು ಎಫ್​ಐಆರ್​ನ್ನೂ ದಾಖಲಿಸಿದೆ.
ಹಾಗೇ, ಇದೇ ಆಡಿಯೋ ಟೇಪ್​ಗೆ ಸಂಬಂಧಿಸಿದ ತನಿಖೆಗೆ ಹಾಜರಾಗುವಂತೆ ವಿಶ್ವೇಂದ್ರ ಸಿಂಗ್​ ಅವರಿಗೂ ಎಸಿಬಿ ಸೂಚನೆ ನೀಡಿದೆ.ಕಾಂಗ್ರೆಸ್ ಸರ್ಕಾರ ಉರುಳಿಸುವ ಸಲುವಾಗಿ ನಡೆಯುತ್ತಿರುವ ಪಿತೂರಿಯಲ್ಲಿ ಈ ಇಬ್ಬರೂ ಭಾಗಿಯಾಗಿದ್ದಾರೆ ಎಂದು ರಾಜ್ಯ ಸರ್ಕಾರದ ಮುಖ್ಯ ಸಚೇತಕ ಮಹೇಶ್​ ಜೋಶಿ ದೂರು ನೀಡಿದ್ದರು.ಇದನ್ನೂ ಓದಿ:ಕೊವಿಡ್​-19ನಿಂದ ತತ್ತರಿಸಿರುವ ಅಮೆರಿಕಕ್ಕೆ ಆಘಾತ; ಶುರುವಾಗಿದೆ ಮತ್ತೊಂದು ಅಪಾಯಕಾರಿ ಸಾಂಕ್ರಾಮಿಕ ರೋಗ
ಅಷ್ಟೇ ಅಲ್ಲ, ಎರಡು ಆಡಿಯೋ ಟೇಪ್​ಗಳಲ್ಲಿ ಶಾಸಕ ಭನ್ವರ್​ಲಾಲ್​ ಶರ್ಮಾ ಅವರ ಧ್ವನಿ ಸ್ಪಷ್ಟವಾಗಿ ಕೇಳುತ್ತಿದೆ. ಅವರು ಕೇಂದ್ರ ಸಚಿವ ಗಜೇಂದ್ರ ಸಿಂಗ್​ ಅವರ ಜತೆ ಸರ್ಕಾರ ಉರುಳಿಸುವ ಮತ್ತು ಹಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಲಾಗಿದೆ. ಆದರೆ ಗಜೇಂದ್ರ ಸಿಂಗ್​ ಅವರು ಇದು ತಮ್ಮ ಧ್ವನಿಯಲ್ಲ. ಬೇಕಾದರೆ ತನಿಖೆಯಾಗಲಿ ಎಂದಿದ್ದಾರೆ.
ಇನ್ನು ಮೂರನೇ ಆಡಿಯೋ ಟೇಪ್​​ನಲ್ಲಿ ಕೇಳಿಬಂದಿದ್ದು ವಿಶ್ವೇಂದ್ರ ಸಿಂಗ್​ ಅವರ ಧ್ವನಿ ಎಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ, ಎಸಿಬಿ ಅವರಿಗೂ ನೋಟಿಸ್​ ನೀಡಿದೆ.(ಏಜೆನ್ಸೀಸ್​)
ರಾಮಮಂದಿರ ನಿರ್ಮಾಣಕ್ಕಿದ್ದ ಅಡೆತಡೆಗಳನ್ನು ನಿವಾರಿಸಿದ್ದು ಶಿವಸೇನೆ: ಸಂಜಯ್​ ರಾವತ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 9 =
Remember me
