ಹೈದರಾಬಾದ್​:ಮಂಗಳವಾರ ಹೈದರಾಬಾದಿನ ರಿಯಲ್​ ಎಸ್ಟೇಟ್​ ಕಂಪನಿಯೊಂದರ ಮೇಲೆ ನಡೆದ ದಾಳಿಯಲ್ಲಿ ಭ್ರಷ್ಟಾಚಾರ ನಿಗ್ರಹ ಪಡೆ (ಎಸಿಬಿ)ಯು ಬರೋಬ್ಬರಿ 4.47 ಕೋಟಿ ರೂ. ನಗದು ಹಣವನ್ನು ವಶಕ್ಕೆ ಪಡೆದುಕೊಂಡಿದೆ.
ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಯಾವುದೇ ಲೆಕ್ಕವಿಲ್ಲದ ಈ ಹಣವು ತೆಲಂಗಾಣ ಇನ್ಸುರೆನ್ಸ್ ಮೆಡಿಕಲ್​ ಸರ್ವೀಸ್​ನ ಮಾಜಿ ನಿರ್ದೇಶಕಿ ದೇವಿಕಾ ರಾಣಿಗೆ ಸಂಬಂಧಿಸಿದ್ದು ಎನ್ನಲಾಗಿದೆ. ಈಕೆ ಸದ್ಯ ಜೈಲಿನಲ್ಲಿದ್ದು, ತೆಲಂಗಾಣದಲ್ಲಿ​​ ಕ್ವೀನ್​ ಆಫ್​ ಕರಪ್ಶನ್​ (ಭ್ರಷ್ಟಾಚಾರದ ರಾಣಿ) ಎಂದೇ ಕುಖ್ಯಾತಿ ಗಳಿಸಿದ್ದಾಳೆ.
ಇದನ್ನೂ ಓದಿ:ಹುಟ್ಟಿದ ದಿನವೇ ಆತ್ಮಹತ್ಯೆ ಮಾಡಿಕೊಂಡ ಯುವತಿ; ಅದಕ್ಕೂ ಮೊದಲು ನಡೆದಿತ್ತು ಅಕ್ಕನೊಂದಿಗೆ ಜಗಳ
ದೇವಿಕಾ ರಾಣಿ ನೀಡಿದ ಮಾಹಿತಿ ಆಧಾರದ ಮೇಲೆಯೇ ಎಸಿಬಿ ರಿಯಲ್​ ಎಸ್ಟೇಟ್​ ಸಂಸ್ಥೆಯ ಮೇಲೆ ದಾಳಿ ನಡೆಸಿ, ಬೃಹತ್​ ಮೊತ್ತದ ಹಣವನ್ನು ವಶಕ್ಕೆ ಪಡೆದಿದೆ. ವಶಕ್ಕೆ ಪಡೆದ ಹಣವನ್ನು ರಿಯಲ್​ ಎಸ್ಟೇಟ್​ ವ್ಯವಹಾರದಲ್ಲಿ ಹೂಡಲು ಇಟ್ಟಿದ್ದರು ಎನ್ನಲಾಗಿದೆ.
ದೇವಿಕಾ ರಾಣಿಯ ಸಹ ಆರೋಪಿ ಫಾರ್ಮಾಸಿಸ್ಟ್​ ನಾಗಾ ಲಕ್ಷ್ಮಿಗೂ ಸಹ ವಶಕ್ಕೆ ಪಡೆದ ಹಣದಲ್ಲಿ ಪಾಲಿದೆ ಎಂದು ತಿಳಿದುಬಂದಿದ್ದು, ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ಈ ವಿಸಿಟಿಂಗ್​ ಕಾರ್ಡ್​ ನೆಟ್ಟರೆ ತುಳಸಿ ಗಿಡ ಬೆಳೆಯುತ್ತೆ…! ಐಎಫ್​ಎಸ್​ ಅಧಿಕಾರಿಯ ಪರಿಸರ ಪ್ರೇಮ….!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − thirteen =
Remember me
