ನವದೆಹಲಿ:ಫರೀದಾಬಾದ್​ನ ಖಾಸಗಿ ಶೂಟಿಂಗ್​ ರೇಂಜ್​ನಲ್ಲಿ 10 ಮೀ. ಏರ್​ ಪಿಸ್ತೂಲ್​ ಸಿಲಿಂಡರ್​ ಸ್ಫೋಟದಿಂದಾಗಿ ರಾಷ್ಟ್ರೀಯ ಮಟ್ಟದ ಶೂಟರ್​ ಒಬ್ಬರು ಎಡಗೈ ಹೆಬ್ಬೆರಳನ್ನು ಭಾಗಶಃ ಕಳೆದುಕೊಂಡಿದ್ದಾರೆ. ಶನಿವಾರ ಸಂಜೆ ನಡೆದ ಈ ಅವಘಡ ಎಲ್ಲರನ್ನೂ ಬೆಚ್ಚೀಬಿಳಿಸಿದೆ.
ಭಾರತೀಯ ವಾಯು ಸೇನೆಗೆ ಸೇರಿದ ಪುಷ್ಪೇಂದ್ರ ಕುಮಾರ್​ ರಾಷ್ಟ್ರೀಯ ಚಾಂಪಿಯನ್​ಷಿಪ್​ ಸಿದ್ಧತೆಯ ಅಂಗವಾಗಿ ಶೂಟಿಂಗ್​ ರೇಂಜ್​ನಲ್ಲಿ ತರಬೇತಿ ಪಡೆಯುತ್ತಿದ್ದರು. ಆಗ ಪಿಸ್ತೂಲ್​ ಸಿಲಿಂಡರ್​ಗೆ ಪ್ರಧಾನ ಸಿಲಿಂಡರ್​ನಿಂದ ಸಂಕುಚಿತ ಗಾಳಿಯನ್ನು ತುಂಬಿಸುವ ವೇಳೆ ಸಂಭವಿಸಿದ ಅವಡದಿಂದ ಎಡಗೈ ಹೆಬ್ಬೆರಳಿಗೆ ಭಾರಿ ಗಾಯವಾಗಿದ್ದು, ತಕ್ಷಣವೇ ಭಾರತೀಯ ಸೇನೆಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಏರ್​ ಪಿಸ್ತೂಲ್​ ಮತ್ತು ಏರ್​ ರೈಲ್​ಗಳು ಬ್ಯಾರೆಲ್​ನ ಕೆಳಗೆ ನಯವಾದ ಗ್ಯಾಸ್​ ಸಿಲಿಂಡರ್​ ಹೊಂದಿರುತ್ತವೆ. ಶೂಟರ್​ ಟ್ರಿಗರ್​ ಒತ್ತಿದಾಗ ಈ ಸಿಲಿಂಡರ್​ನಿಂದ ಗ್ಯಾಸ್​ ಬಿಡುಗಡೆಯಾಗಿ ಏರ್​ಗನ್​ನೊಳಗೆ ಹ್ಯಾಮರ್​ನಿಂದ ಹೊಡೆಯುತ್ತವೆ ಮತ್ತು ಸೀಸದ ಬುಲೆಟ್​ ಹೊರಚಿಮ್ಮುತ್ತವೆ. ಕೆಲ ಶಾಟ್​ಗಳ ಬಳಿಕ ಈ ಸಿಲಿಂಡರ್​ಅನ್ನು ತುಂಬುತ್ತಿರಬೇಕಾಗುತ್ತದೆ.
ಪ್ರೊ ಕಬಡ್ಡಿ ಲೀಗ್​ನಲ್ಲಿ ಬೆಂಗಳೂರು ಬುಲ್ಸ್​ಗೆ ಸತತ 2ನೇ ಸೋಲು; ಕೊನೇಕ್ಷಣದ ಪ್ರತಿಹೋರಾಟ ವ್ಯರ್ಥ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
