ಜೈಪುರ:ರಾಜಸ್ಥಾನದಲ್ಲಿ ಶನಿವಾರ ಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ದುರ್ಮರಣಕ್ಕೀಡಾಗಿದ್ದಾರೆ. ಮಾರ್ಬೆಲ್​ಗಳನ್ನು ತುಂಬಿಕೊಂಡಿದ್ದ ಕಂಟೇನರ್​ ಒಂದು ಕಾರಿನ ಮೇಲೆ ಬಿದ್ದಿರುವುದರಿಂದಾಗಿ ಕಾರು ಅಪ್ಪಚ್ಚಿಯಾಗಿರುವುದಾಗಿ ವರದಿಯಾಗಿದೆ.
ಜೋಧ್​ಪುರ ನಿವಾಸಿಗಳಾಗಿದ್ದ ಮನೋಜ್​ ಶರ್ಮಾ, ಅಶ್ವಿನ್​ ಕುಮಾರ್​ ಡೇವ್​ ಹಾಗೂ ಅವರ ಪತ್ನಿ ರಶ್ಮಿ ದೇವಿ ಮತ್ತು ಬುಧರಂ ಪ್ರಜಾಪತ್​ ಅಹಮದಾಬಾದ್​ಗೆ ಮೀಟಿಂಗ್​ ಒಂದರ ಪ್ರಯುಕ್ತ ಹೋಗುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ 62ರಲ್ಲಿ ಹೋಗುವಾಗ ಕಂಟೇನರ್​ ಹೊತ್ತಿದ್ದ ಗಾಡಿಯ ಚಾಲಕ, ಕಾರನ್ನು ಓವರ್​ಟೇಕ್​ ಮಾಡಲು ಪ್ರಯತ್ನಿಸಿದ್ದಾನೆ. ತಿರುವಿನಲ್ಲಿ ಓವರ್​ಟೇಕ್​ ಮಾಡಲು ಪ್ರಯತ್ನಿಸಿದ ಪರಿಣಾಮ ಗಾಡಿಯ ನಿಯಂತ್ರಣ ತಪ್ಪಿದ್ದು, ಕಂಟೇನರ್​ ಕಾರಿನ ಮೇಲೆ ಬಿದ್ದಿದೆ. ಕಾರಿನಲ್ಲಿದ್ದ ನಾಲ್ವರು ಅಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ.
ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಗ್ರಾಮಸ್ಥರು ಬಂದು ಸೇರಿದ್ದಾರೆ. ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು, ಮೃತ ದೇಹಗಳನ್ನು ಕಾರಿನಿಂದ ಹೊರತೆಗೆದು, ಶವಾಗಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
