ಲಖನೌ:ಉತ್ತರ ಪ್ರದೇಶದ ಆಗ್ರಾದಲ್ಲಿ ದಟ್ಟವಾದ ಮಂಜಿನಿಂದಾಗಿ ಬುಧವಾರ ರಾಷ್ಟ್ರೀಯ ಹೆದ್ದಾರಿ&19ರಲ್ಲಿ ಸುಮಾರು 12 ವಾಹನಗಳು ಒಂದರ ಹಿಂದೆ ಒಂದರಂತೆ ಡಿಕ್ಕಿ ಹೊಡೆದಿವೆ.
ಅಪಘಾತದಲ್ಲಿ ಸಿಲುಕಿದ ವಾಹನಗಳಲ್ಲಿ ಕೋಳಿಗಳನ್ನು ತುಂಬಿದ ಟ್ರಕ್​ ಕೂಡ ಇತ್ತು. ಜನರು ಕೋಳಿಗಳನ್ನು ತೆಗೆದುಕೊಂಡು ಹೋಗಲು ಮುಗಿಬಿದ್ದರು. ಕೋಳಿ ಪಡೆಯಲು ಜನರ ನಡುವೆ ಪೈಪೋಟಿ ಕೂಡ ಏರ್ಪಟಿತ್ತು. ಗಾಯಗೊಂಡಿದ್ದ ಟ್ರಕ್​ ಚಾಲಕ ಸಹಾಯಕ್ಕಾಗಿ ಕೂಗುತ್ತಿದ್ದರೂ, ಜನರು ತಮ್ಮ ವಾಹನ ನಿಲ್ಲಿಸಿ ಕೋಳಿ ತೆಗೆದುಕೊಂಡು ಹೋಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಚಾಲಕ ಆರಂಭದಲ್ಲಿ ಕೋಳಿಯನ್ನು ಲೂಟಿ ಮಾಡದಂತೆ ತಡೆಯಲು ಪ್ರಯತ್ನಿಸಿದ. ಆದರೆ ಹೆಚ್ಚುತ್ತಿರುವ ಜನರ ಗುಂಪಿನ ಎದುರು ಆತ ಅಸಹಾಯಕನಾದ. ವಾಹನದಲ್ಲಿ 2,50,000 ರೂಪಾಯಿ ಮೌಲ್ಯದ ಕೋಳಿಗಳಿದ್ದು, ಇದರಿಂದ ಭಾರೀ ಆರ್ಥಿಕ ನಷ್ಟವಾಗಿದೆ ಎಂದು ಸುನೀಲ್​ ತಿಳಿಸಿದ್ದಾರೆ. ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಕ್ರೇನ್​ಗಳನ್ನು ಕರೆಸಿ ಹಾನಿಗೊಳಗಾದ ವಾಹನಗಳನ್ನು ತೆಗೆದು ರಸ್ತೆ ತೆರವುಗೊಳಿಸಲಾಗಿದೆ ವರದಿಯಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 12 =
Remember me
